News Karnataka Kannada
Sunday, April 28 2024
ಮಂಗಳೂರು

ಮಂಗಳೂರು: ಶಾರಿಕ್‌ ಖಾತೆಗೆ ವಿದೇಶದಿಂದ ಹಣ-ಮಧ್ಯಪ್ರದೇಶ, ತಮಿಳುನಾಡಿನಲ್ಲಿ ಪೊಲೀಸರಿಂದ ತನಿಖೆ

Police to probe Shariq's account from abroad in Jharkhand, Madhya Pradesh, Tamil Nadu
Photo Credit : By Author

ಮಂಗಳೂರು: ಆಸ್ಪತ್ರೆಯಲ್ಲಿರುವ ಶಾರಿಕ್‌ನನ್ನು ಬುಧವಾರ ಕೂಡ ಪೊಲೀಸರು ವಿಚಾರಣೆ ನಡೆಸಿದ್ದಾರೆ.  ಡಾರ್ಕ್ ವೆಬ್ ಮೂಲಕ ಶಾರಿಕ್‌ ಖಾತೆ ತೆರೆದಿದ್ದ. ವಿದೇಶದಿಂದ ಡಾಲರ್‌ಗಳ ಮೂಲಕ ಜಮೆ ಮಾಡಿದ ಹಣ ಆತನ ಖಾತೆಗೆ ವರ್ಗಾವಣೆಯಾಗಿದೆ. ಅದನ್ನು ಆತ ಮೈಸೂರಿನಲ್ಲಿ ಕೆಲವರ ಬ್ಯಾಂಕ್‌ ಖಾತೆಗೆ ಹಣ ಹಾಕಿಸಿದ್ದ ಎಂದು ಹೇಳಲಾಗಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಮೈಸೂರಿನಲ್ಲಿ 40ಕ್ಕೂ ಅಧಿಕ ಮಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಹಣದ ವರ್ಗಾವಣೆಗೆ ಸಂಬಂಧಿಸಿದಂತೆ ಜಾರ್ಖಂಡ್‌, ಮಧ್ಯಪ್ರದೇಶ ಮತ್ತು ತಮಿಳುನಾಡಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಏತನ್ಮಧ್ಯೆ ಮಂಗಳೂರು ಮತ್ತು ಕೊಯಮತ್ತೂರು ಸ್ಫೋಟ ಪ್ರಕರಣಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ನೆರವು ನೀಡುತ್ತಿರುವ ಸೈಬರ್‌ ಕ್ರೈಂ ತನಿಖಾ ತಂಡದ ಅಧಿಕಾರಿಗಳು ಕೊಚ್ಚಿ ತಲುಪಿದ್ದಾರೆ. ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟದಲ್ಲಿ ಗಾಯಗೊಂಡ ಮೊಹಮ್ಮದ್‌ ಶಾರಿಕ್‌ ಕೊಚ್ಚಿಯಲ್ಲಿದ್ದ ದಿನಗಳಲ್ಲಿ ಯಾರನ್ನೆಲ್ಲ ಸಂಪರ್ಕಿಸಿದ್ದ ಎಂದು ಪತ್ತೆಹಚ್ಚಲು ಅಧಿಕಾರಿಗಳ ತಂಡ ತನಿಖೆ ನಡೆಸುತ್ತಿದ್ದಾರೆ.

ಮಂಗಳೂರು ಸ್ಫೋಟ ಪ್ರಕರಣ ಆರೋಪಿ ಶಾರಿಕ್‌ ಕೇರಳದ ಆಲುವಾ, ಮುನಂಬಮ್‌ ಮತ್ತು ಕೊಚ್ಚಿ ನಗರದ ಹಲವೆಡೆ ತಂಗಿದ್ದು, ಡ್ರಗ್‌ ಡೀಲ್‌ಗಳನ್ನು ಸಂಘಟಿಸಲು ಈತ ಕೊಚ್ಚಿಯಲ್ಲಿ ತಂಗಿದ್ದಾಗಿ ಮಾಹಿತಿ ಲಭಿಸಿದೆ. ಶಾರೀಕ್‌ನ ಚಲನವಲನಗಳನ್ನು ನಿಯಂತ್ರಿಸುವ ವ್ಯಕ್ತಿ ಕೊಚ್ಚಿಯಲ್ಲಿಇರುವ ಬಗ್ಗೆ ತನಿಖಾ ತಂಡಕ್ಕೆ ಸುಳಿವು ಸಿಕ್ಕಿದೆ.

ದಕ್ಷಿಣ ಭಾರತ ಕೇಂದ್ರೀಕರಿಸಿ ಭಯೋತ್ಪಾದಕ ಚಟುವಟಿಕೆಗಳ ನಿಧಿ ಸಂಗ್ರಹ ಕೇರಳದಲ್ಲಿ ನಡೆಸಲಾಗುತ್ತಿತ್ತು ಎಂದು ತನಿಖಾ ತಂಡಕ್ಕೆ ಮಾಹಿತಿ ಲಭಿಸಿದೆ. ಭಯೋತ್ಪಾದಕ ಚಟುವಟಿಕೆಗಳ ನಿಧಿ ಸಂಗ್ರಹಕ್ಕಾಗಿ ಚಿನ್ನ ಕಳ್ಳಸಾಗಾಟ ಹಾಗೂ ಮಾದಕ ವಸ್ತು ಕಳ್ಳಸಾಗಾಟ ನಡೆಸಲಾಗುತ್ತಿದೆ ಎಂದೂ ಸಂಶಯಿಸಲಾಗಿದೆ. ಈ ರೀತಿಯ ದೇಶವಿರೋಧಿ ಕೃತ್ಯಗಳನ್ನು ನಡೆಸುವ ಗುಂಪುಗಳಿಗೆ ಯಾವುದೇ ರಾಜಕೀಯ ಬೆಂಬಲ ಇದೆಯೇ ಎಂಬ ಬಗ್ಗೆಯೂ ಎನ್‌ಐಎ ಪರಿಶೀಲಿಸುತ್ತಿದೆ.

ಮಂಗಳೂರು ನಾಗುರಿನಲ್ಲಿನ.19ರಂದು ನಡೆದ ಕುಕ್ಕರ್‌ ಬಾಂಬು ಸ್ಫೋಟದಲ್ಲಿಕಾಸರಗೋಡು ಜಿಲ್ಲೆಯ ಕೆಲವರಿಗೆ ನಂಟು ಇರುವುದಾಗಿ ತನಿಖಾ ತಂಡ ಶಂಕೆ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿಎನ್‌ಐಎ ತನಿಖೆಯನ್ನು ಕಾಸರಗೋಡಿಗೂ ವಿಸ್ತರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಕಾಸರಗೋಡು ಜಿಲ್ಲೆಯ ಚಂದೇರಾ ಪೊಲೀಸ್‌ ಠಾಣೆ ವ್ಯಾಪ್ತಿಯ ಯುವತಿ ಸಹಿತ ಸುಮಾರು ಹತ್ತರಷ್ಟು ಮಂದಿ ಕೇರಳದಿಂದ ವಿದೇಶಕ್ಕೆ ಹೋಗಿ ಅಲ್ಲಿಂದ ಸಿರಿಯಾ ಮತ್ತು ಅಪಘಾನಿಸ್ತಾನದಲ್ಲಿರುವ ಜಾಗತಿಕ ಭಯೋತ್ಪಾದಕ ಸಂಘಟನೆ ಐಸಿಸ್‌ಗೆ ಸೇರಿದ್ದರು. ಈ ಪೈಕಿ ಕೆಲವರು ಅಲ್ಲಿ ನಡೆದ ಯುದ್ಧದಲ್ಲಿ ಮೃತಪಟ್ಟಿದ್ದರು. ಕೆಲವರು ಈಗಲೂ ಅಫಘಾನಿಸ್ಥಾನ್‌ನ ಸೆರೆಮನೆಯಲ್ಲಿ ಕಳೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿಈ ತಂಡಕ್ಕೆ ಸೇರಿದ ಮಂದಿಯೊಂದಿಗೆ ಮಂಗಳೂರು ಸ್ಫೋಟ ಪ್ರಕರಣದೊಂದಿಗೆ ಯಾವುದಾದರೂ ರೀತಿಯ ನಂಟು ಇರಬಹುದೇ ಎಂಬುದನ್ನು ಪತ್ತೆ ಮಾಡಲು ತನಿಖೆಯನ್ನು ಕಾಸರಗೋಡಿಗೂ ವಿಸ್ತರಿಸುವ ಸಾಧ್ಯತೆ ಇದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30359
ಶರಣ್‌ ರಾಜ್

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು