News Karnataka Kannada
Sunday, May 05 2024
ಮಂಗಳೂರು

ಮಂಗಳೂರು: ಜ್ಯುವೆಲರಿ ಸಿಬ್ಬಂದಿ ಹತ್ಯೆ ಪ್ರಕರಣ, ದುಷ್ಕರ್ಮಿಯ ಇನ್ನಷ್ಟು ಚಿತ್ರಗಳು ಬಿಡುಗಡೆ

Police release more pictures of jewellery staff murder case
Photo Credit : News Kannada

ಮಂಗಳೂರು: ನಗರದ ಹಂಪನ ಕಟ್ಟೆಯ ಜ್ಯುವೆಲರಿಯೊಂದರಲ್ಲಿ ಕಳೆದ ಶುಕ್ರವಾರ ಹಾಡುಹಗಲೇ ನಡೆದ ಸಿಬ್ಬಂದಿ ಕೊಲೆ, ಅಂಗಡಿ ದರೋಡೆ ಪ್ರಕರಣದ ದುಷ್ಕರ್ಮಿಯ ಇನ್ನಷ್ಟು ಚಿತ್ರಗಳನ್ನು ಪೊಲೀಸರು ಶುಕ್ರವಾರ ಬಿಡುಗಡೆ ಮಾಡಿದ್ದಾರೆ.

ಹಂಪನಕಟ್ಟೆ ಮಿಲಾಗ್ರಿಸ್ ಬಳಿ ಫೆ.3ರಂದು ಚಿನ್ನಾಭರಣ ಅಂಗಡಿಯಲ್ಲಿ ಅತ್ತಾವರ ನಿವಾಸಿ ರಾಘವೇಂದ್ರ ಆಚಾರ್ (55) ಅಪರಿಚಿತ ದುಷ್ಕರ್ಮಿ ಇರಿದ ಪರಿಣಾಮ ಮೃತಪಟ್ಟಿದ್ದರು. ಘಟನೆ ನಡೆದಾಗ ಅಂಗಡಿಯಲ್ಲಿ ಅವರೊಬ್ಬರೇ ಇದ್ದರು.

ಮುಸುಕುಧಾರಿಯೊಬ್ಬ ಅಂಗಡಿಯಿಂದ ಹೊರ ಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮಧ್ಯಾಹ್ನದ ಊಟ ಮುಗಿಸಿ ಅಂಗಡಿಗೆ ಹಿಂತಿರುಗಿದಾಗ ಅಂಗಡಿ ಮಾಲಕರು ಘಟನೆ ಬಗ್ಗೆ ತಿಳಿದುಕೊಂಡಿದ್ದರು.

ಈತನ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇದ್ದಲ್ಲಿ ತಕ್ಷಣ ಸಂಪರ್ಕಿಸಿ:

ಪಿ ಎ ಹೆಗಡೆ -ಎಸಿಪಿ ಸಿಸಿಬಿ, ಮಂಗಳೂರು ನಗರ -ಮೊ: 9945054333,
ಮಹೇಶ್ ಕುಮಾರ್ , ಎಸಿಪಿ ಕೇಂದ್ರ ಉಪವಿಭಾಗ, ಮಂಗಳೂರು ನಗರ – ಮೊ: 9480805320

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು