News Karnataka Kannada
Tuesday, May 14 2024
ಮಂಗಳೂರು

ಮಂಗಳೂರು: ಪಿಎಫ್ಐ ಕಛೇರಿಗಳಿಗೆ ಬೀಗ ಜಡಿದ ಪೊಲೀಸರು

Mangaluru: PFI offices sealed by police
Photo Credit : News Kannada

ಮಂಗಳೂರು: ಕೇಂದ್ರ ಸರಕಾರವು ಪಿಎಫ್‌ಐ ಮತ್ತಿತರ  ಸಂಘಟನೆಗಳನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಸೂಚನೆಯಂತೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ  ನಿಷೇಧಿತ ಸಂಘಟನೆಯ ಕಚೇರಿಗಳಿಗೆ  ಪೊಲೀಸರು ಬೀಗ ಜಡಿದಿದ್ದಾರೆ‌.

ಕಳೆದ ಎರಡು ದಿನಗಳಿಂದ ಬೀಗ ಹಾಕಿರುವ ನಗರದ ನೆಲ್ಲಿಕಾಯಿ ರಸ್ತೆಯಲ್ಲಿರುವ ಪಿಎಫ್ಐ ಕಛೇರಿ ಬೀಗ ಒಡೆದು ಕಛೇರಿಯಲ್ಲಿ ತಪಾಸಣೆ  ನಡೆಸಿ, ಬಳಿಕ  ಕಛೇರಿಗೆ ಬೀಗ ಜಡಿದು ಸೀಲ್ ಹಾಕಿ ಸೀಝ್ ಮಾಡಿದ್ದಾರೆ.

ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಮಾತನಾಡಿ ಇಂದು ಮುಂಜಾನೆ ಸರ್ಕಾರ ಬ್ಯಾನ್ ಮಾಡಿರುವ ಸಂಘಟನೆಗಳ ಕಛೇರಿಗಳನ್ನು ಸೀಝ್ ಮಾಡಲುಇಲಾಖೆಗೆ ಸೂಚನೆ ಬಂದಿತ್ತು. ಈ ಹಿನ್ನಲೆಯಲ್ಲಿ ಕಛೇರಿಯಲ್ಲಿ ವಸ್ತುಗಳನ್ನು ಸೀಜ್ ಮಾಡಿ ಕಛೇರಿಗೆ ಸೀಲ್ ಮಾಡಲಾಗಿದೆ ಎಂದರು.

ಪಣಂಬೂರು, ಸುರತ್ಕಲ್, ಬಜ್ಪೆ, ಉಳ್ಳಾಲ, ಕೊಣಾಜೆ, ಮಂಗಳೂರು ಗ್ರಾಮಾಂತರ, ಪಾಂಡೇಶ್ವರ, ಬಂದರ್ ಠಾಣೆ ವ್ಯಾಪ್ತಿಯ ಕಚೇರಿಗಳಿಗೆ ದಾಳಿ ಮಾಡಿ ದಾಖಲೆ ಪತ್ರಗಳು, ಕಂಪ್ಯೂಟರ್ ಸಹಿತ ಇತರ ಸೊತ್ತುಗಳನ್ನು ವಶಕ್ಕೆ ‌ಪಡೆದು ಬೀಗ ಜಡಿಯಲಾಗಿದೆ‌.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು