News Karnataka Kannada
Sunday, May 12 2024
ಮಂಗಳೂರು

ಮಂಗಳೂರು: ಜನವರಿ 22 ರಂದು ನಡೆಯಲಿದೆ ಮಂಗಳೂರು ಕಂಬಳ

ಮಂಗಳೂರು ಕಂಬಳ
Photo Credit : News Kannada

ಮಂಗಳೂರು: ನಮ್ಮ ತುಳುನಾಡಿನಲ್ಲಿ ಸಂಪ್ರದಾಯ ಹಾಗೂ ಆಧುನಿಕತೆಯನ್ನು ಸದಾ ಸೂರ್ಯಚಂದ್ರರಂತೆ ಸಮಾನ ಪ್ರಾಮುಖ್ಯತೆಯಿಂದ ಗೌರವಿಸಲಾಗಿದೆ. ಈ ಮಣ್ಣಿನ ಇದೇ ವಿಶಿಷ್ಟ ಗುಣ ಮಂಗಳೂರು ನಗರದ ಯುವಕರಲ್ಲಿ ಇಚ್ಛಾಶಕ್ತಿಯಾಗಿ ಜಾಗ್ರತಗೊಂಡು ಕ್ಯಾಪ್ಟನ್ ಬೃಜೇಶ್ ಚೌಟ ಇವರ ನೇತೃತ್ವದಲ್ಲಿ ಮಂಗಳೂರು ಕಂಬಳ ಎಂಬ ಒಂದು ಪ್ರಯತ್ನವಾಗಿ ರೂಪುಗೊಂಡಿತು.

ತುಳುನಾಡಿನ ಐತಿಹಾಸಿಕ ಜಾನಪದ ಕ್ರೀಡೆ ಕಂಬಳವನ್ನು ಪಟ್ಟಭದ್ರ ಹಿತಾಸಕ್ತಿಗಳು ಪ್ರಾಣಿ ದಯಾ ಸಂಘಗಳ ಮುಖವಾಡ ಧರಿಸಿ ಕತ್ತು ಹಿಸುಕಿ ಕೊನೆಗಾಣಿಸುವ ಪ್ರಯತ್ನಗಳನ್ನು ಮಾಡಿದಾಗ ನಮ್ಮ ಸಂಸ್ಕೃತಿಯನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಒಂದು ಅಮೂಲ್ಯವಾದ ಆಸ್ತಿಯಾಗಿ ನೀಡುವ ದಿಕ್ಕಿನಲ್ಲಿ ಒಂದು ಪ್ರಯತ್ನ ಮಂಗಳೂರು ಕಂಬಳ.

ಕಳೆದ 6 ವರ್ಷಗಳಿಂದ ಮಂಗಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ಸಿ ಎಂ ಡಿ ಎಂ ಆರ್ ಜಿ ಗ್ರೂಪ್‌ನ ಕೆ ಪ್ರಕಾಶ್ ಶೆಟ್ಟಿಯವರ ಗೌರವ ಅಧ್ಯಕ್ಷತೆಯಲ್ಲಿ ನಡೆದು ಬಂದಿರುವ ಮಂಗಳೂರು ಕಂಬಳ ಈ ವರ್ಷ ಜನವರಿ 22 ರಂದು ನಡೆಯಲಿದೆ.
ಸೇನೆಯಿಂದ ನಿವೃತ್ತರಾದ ನಮ್ಮ ಊರಿನ ಯುವ ಮುಖಂಡರಾದ ತಲಪಾಡಿ ದೊಡ್ಡಮನೆ ಕ್ಯಾಪ್ಟನ್ ಬೃಜೇಶ್ ಚೌಟ ಸಾರಥ್ಯದಲ್ಲಿ ಮಂಗಳೂರು ಕಂಬಳವು ಪ್ರತಿ ವರ್ಷವೂ ಹೆಚ್ಚು ಹೆಚ್ಚು ಜನರನ್ನು ಆಕರ್ಷಿಸುವತ್ತ ಹೊಸ ಪ್ರಯತ್ನಗಳನ್ನು ಮಾಡುತ್ತ ಬಂದಿದೆ.

ಎಳೆ ಮನಸ್ಸುಗಳನ್ನು ನಮ್ಮ ಈ ಆಚರಣೆಯ ಭಾಗವಾಗಿಸುವ ಸದುದ್ದೇಶದಿಂದ ‘ಕಲರ್ ಕೂಟ’ ಚಿತ್ರಕಲೆ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ. ಮೂರು ವಿಭಾಗಗಳಲ್ಲಿ 6 ವರ್ಷ ಮೇಲ್ಪಟ್ಟ ಮಕ್ಕಳಿಂದ ಎಲ್ಲರೂ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಭಾಗವಹಿಸಿದ ಎಲ್ಲರಿಗೂ ನೆನಪಿನ ಒಂದು ಕಾಣಿಕೆ ಹಾಗೂ ಆಕರ್ಷಕ ಬಹುಮಾನಗಳನ್ನು ನೀಡಿ ಗೌರವಿಸಲಾಗುತ್ತದೆ. ನಮ್ಮ ಕಂಬಳದ ಅನುಭವವನ್ನು ಪುಟ್ಟ ಹಾಗೂ ಯುವ ಪ್ರತಿಭೆಗಳು ತಮ್ಮ ಕುಂಚದಿಂದ ತಮ್ಮ ಹಾಳೆ ಹಾಗು ಮನಸ್ಸುಗಳಲ್ಲಿ ಸೃಷ್ಟಿಸಿ ಈ ಮಣ್ಣಿನ ಸಾಂಸ್ಕೃತಿಕ ಸಂಪತ್ತಿನ ರಾಯಭಾರಿಗಳಾಗಲಿ ಎಂಬ ಆಶಯ ನಮ್ಮದು.

ಸಾಮಾಜಿಕ ಜಾಲತಾಣಗಳ ಈ ಯುಗದಲ್ಲಿ ಹಿಂದಿನಿAದ ನಡೆದು ಬಂದ ನಮ್ಮ ಈ ಆಚರಣೆಯನ್ನು ಮುಂದಿನ ಪೀಳಿಗೆಯು ಹೆಮ್ಮೆ ಹಾಗೂ ಆಸಕ್ತಿಯಿಂದ ವಾರೀಸುದಾರರಾಗಿಸುವತ್ತ Reels ಹಾಗೂ Photography ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಮಂಗಳೂರು ಕಂಬಳ ಸಮಿತಿ ವತಿಯಿಂದ 6 ನೇ ವರ್ಷದ ಹೊನಲು ಬೆಳಕಿನ ನಮ್ಮ ಮಂಗಳೂರು ಕಂಬಳವು ದಿನಾಂಕ 22 .01. 2023 ರವಿವಾರ ಬೆಳಿಗ್ಗೆ 8.15 ಕ್ಕೆ ಉದ್ಘಾಟನೆ ಕಾರ್ಯಕ್ರಮದ ಮೂಲಕ ಆರಂಭಗೊಳ್ಳುವುದು.

ಅದೇ ದಿನ ಸಂಜೆ 6.30 ಕ್ಕೆ ನಾಡಿನ ಧಾರ್ಮಿಕ, ಶೈಕ್ಷಣಿಕ. ರಾಜಕೀಯ, ಕ್ರೀಡೆ, ಚಲನಚಿತ್ರ ಕ್ಷೇತ್ರದ ಸಾಧಕರ, ಹಿರಿಯರ, ಗಣ್ಯ ಮಾನ್ಯ ಅತಿಥಿಗಳ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.

ಮರುದಿನ ಜನವರಿ 23 ರ ಬೆಳಿಗ್ಗೆ ಬಹುಮಾನ ವಿತರಣಾ ಸಮಾರಂಭದ ಮೂಲಕ ಕಂಬಳ ಸಂಪನ್ನಗೊಳ್ಳಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು