News Karnataka Kannada
Thursday, May 02 2024
ಮಂಗಳೂರು

ಮಂಗಳೂರು: ನ. 26ರರಂದು ಕಕ್ಯಪದವಿನ ಸತ್ಯಧರ್ಮ ಜೋಡುಕೆರೆಯಲ್ಲಿ ಮೊದಲ ಕಂಬಳಕ್ಕೆ ಚಾಲನೆ

Mangaluru: The first kambala will be held at Sathyadharma Jodukere in Kakyapadu on November 26.
Photo Credit : News Kannada

ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಬಿಡುಗಡೆಗೊಳಿಸಿದ್ದ ವೇಳಾಪಟ್ಟಿಯಂತೇ ಇದೇ ವಾರ ಶಿರ್ವದಲ್ಲಿ ಜೋಡುಕರೆ ಕಂಬಳ ವಿದ್ಯುಕ್ತವಾಗಿ ಆರಂಭಗೊಳ್ಳಬೇಕಿತ್ತು ವೇಳಾಪಟ್ಟಿ ಮತ್ತೆ ಬದಲಾವಣೆ ಕಂಡಿದ್ದು ನವೆಂಬರ್ 26ರಂದು ಕಕ್ಯಪದವು ಸತ್ಯಧರ್ಮ ಜೋಡುಕೆರೆ ಕಂಬಳ ದೊಂದಿಗೆ ಈ ಸಾಲಿನ ಕಂಬಳಗಳಿಗೆ ಚಾಲನೆ ದೊರಕಲಿದೆ.

ಈ ಋತುವಿನ ಮೊದಲ 3ಕಂಬಳಗಳು ನವೆಂಬರ್ 5 ಶಿರ್ವಾ , ನವೆಂಬರ್ 12ಪಿಲಿಕುಳ ನವೆಂಬರ್ 19 ಪಜೀರು ಮುಂದೂಡಲ್ಪಟ್ಟಿರುವುದರಿಂದ ಕಂಬಳ 3ವಾರ ವಿಳಂಬವಾಗಲಿದೆ .ಇದರೊಂದಿಗೆ ಒಟ್ಟು ಕಂಬಳದ ಸಂಖ್ಯೆ 24 ರಿಂದ 21ಇಳಿಕೆಯಾಗಲಿದೆ. ಸಾಂಪ್ರದಾಯಿಕ ಕಂಬಳವಾಗಿರುವ ಶಿರ್ವ ಕಂಬ್ಳ ಹಗಲು ಮಾತ್ರ ನಡೆಯುತ್ತದೆ. ಈ ಬಾರಿ ಗದ್ದೆಯಲ್ಲಿ ಭತ್ತ ನಾಟಿ ವಿಳಂಬವಾಗಿ ಮಳೆಯ ನಡುವೆ ಕಟಾವು ಇನ್ನಷ್ಟು ನಡೆಯಬೇಕಿರುವುದರಿಂದ ಶಿರ್ವ ಕಂಬಳವನ್ನು 1ತಿಂಗಳು ಮುಂದೂಡಲಾಗಿದ್ದು ಡಿಸೆಂಬರ್ 13ರ ಮಂಗಳವಾರ ನಡೆಯಲಿದೆ.

ನವೆಂಬರ್ 19ರಂದು ನಿಗದಿಯಾಗಿದ್ದ ಪಜೀರು ಕಂಬಳ ಕರೆಗೆ ಮೊನ್ನೆಯಷ್ಟೇ ಶಿಲನ್ಯಾಸ ನಡೆದಿದೆ. ಕರೆ ಇನ್ನಷ್ಟು ಸಿದ್ಧವಾಗಬೇಕಿದ್ದರಿಂದ ಹೊಸ ದಿನಾಂಕ ನೀಡಲಾಗಿಲ್ಲ. ಈ ನಡುವೆ ಈ ಪ್ರದೇಶದ 3-4ಕಂಬ್ಳ ಸಮಿತಿಗಳು ಸೇರಿಕೊಂಡು ಈ ಬಾರಿ ಪಜೀರಿನಲ್ಲಿ ಕಂಬಳ ನಡೆಸುವ ಮಾತುಕತೆಯೂ ನಡೆಯುತ್ತಿದೆ. ಕಟಪಾಡಿ ಜಪ್ಪು ಸಹಿತ ಇತರ ಕೆಲವು ಕಂಬ್ಳಗಳ ದಿನಾಂಕಗಳಲ್ಲಿ ಸಣ್ಣಪುಟ್ಟ ಬದಲಾವಣೆಯಾಗಿದೆ ಇಂಥ ದಿನಾಂಕ ಹೊಂದಾಣಿಕೆ ಮುಂದೆಯೂ ನಡೆಯಬಹುದು ಎಂದು ಸಮಿತಿಯ ಅಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ ತಿಳಿಸಿದ್ದಾರೆ.

ಕಂಬಳ ಸಮಿತಿಯು ಪಿಲಿಕುಳ ಕಂಬಳಕ್ಕೆ ನವೆಂಬರ್ 12ರ ದಿನಾಂಕ ನೀಡಿತ್ತು. ಆದರೆ ಕರೆ ಸಿದ್ಧತೆ ಕೆಲಸವೇ ಆರಂಭಗೊಂಡಿಲ್ಲ. ಈ ನಡುವೆ ಈ ಬಾರಿ ಕಂಬ್ಲ ಮಾಡೋಣ ಎಂದು ಆಸಕ್ತಿ ತೋರಿಸಿದ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ.ವಿ ವರ್ಗಾವಣೆಗೊಂಡಿದ್ದಾರೆ. ಹೊಸ ಜಿಲ್ಲಾಧಿಕಾರಿ ಎಂ ವಿ ರವಿಕುಮಾರ್ ಇನ್ನಷ್ಟು ಅಧಿಕಾರ ವಹಿಸಿಕೊಳ್ಳಲಿದ್ದು, ಹೀಗಾಗಿ ಈ ಬಾರಿಯೂ ಕಂಬಳ ನಡೆಯುವ ಸಾಧ್ಯತೆ ಗೋಚರಿಸುತ್ತಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30359
ಶರಣ್‌ ರಾಜ್

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು