News Karnataka Kannada
Friday, May 10 2024
ಮಂಗಳೂರು

ಮಂಗಳೂರು ಧರ್ಮಪ್ರಾಂತ್ಯದ ಪಾಲನಾ ಪರಿಷತ್ತಿನ ಸುವರ್ಣ ಮಹೋತ್ಸವ

Mangaluru: Golden Jubilee celebrations of the Pastoral Parishad of the Diocese
Photo Credit : R Bhat

ಮಂಗಳೂರು, ಡಿ.10: “ಧರ್ಮಪ್ರಾಂತ್ಯದ ಪಾಲನಾ ಪರಿಷತ್ತುಧರ್ಮಸಭೆಯಲ್ಲಿನ ಸಹಭಾಗಿತ್ವದ ದೃಷ್ಟಿಕೋನದ ಅಭಿವ್ಯಕ್ತಿಯಾಗಿದೆ. ಮಂಗಳೂರು ಧರ್ಮಪ್ರಾಂತ್ಯವು ನಂಬಿಕೆ, ಪರಸ್ಪರ ಸಹಕಾರ, ನಿರಂತರ ಸಂವಾದ ಮತ್ತು ದೇವರ ಚಿತ್ತದ ವಿವೇಚನೆಯ ಮೂಲಭೂತ ತತ್ವಗಳ ಮೇಲೆ ನಿರ್ಮಿಸಲಾದ ಸಮುದಾಯವಾಗಿದೆ. ನಿಮ್ಮ ಸೇವೆ ಮತ್ತುಒಗ್ಗಟ್ಟಿನ ಮೂಲಕ ನಂಬಿಕೆಗೆ ಸಾಕ್ಷಿಯಾಗಿರುವ ನಿಮ್ಮೆಲ್ಲರನ್ನು ನಾನು ಪ್ರಶಂಸಿಸುತ್ತೇನೆ”ಎಂದು ಗೋವಾ ಮತ್ತು ಡಾಮನ್‌ ಕಾರ್ಡಿನಲ್ ಫಿಲಿಪ್ ನೇರಿಫೆರಾವೊ ಹೇಳಿದರು.

ಮಂಗಳೂರಿನ ಕಂಕನಾಡಿಯ ಫಾದರ್ ಮುಲ್ಲರ್‌ ಕನ್ವೆನ್ಷನ್ ಸೆಂಟರ್‌ನಲ್ಲಿ ಶನಿವಾರ, ಡಿಸೆಂಬರ್ 10, 2022 ರಂದು ನಡೆದ ಮಂಗಳೂರು ಧರ್ಮಪ್ರಾಂತ್ಯದ ಪಾಲನಾ ಪರಿಷತ್ತಿನ (ಡಿಪಿಪಿ) ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲು ಮಂಗಳೂರಿನಲ್ಲಿ ಅವರ ಗೌರವಾನ್ವಿತ ಕಾರ್ಡಿನಲ್ ಫಿಲಿಪ್ ನೇರಿ ಆಗಮಿಸಿದ್ದರು.

ನೂತನವಾಗಿ ಆಯ್ಕೆಯಾದ ಕಾರ್ಡಿನಲ್‌ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಇಂದಿನ ಸಂದರ್ಭದಲ್ಲಿ ಕ್ರೈಸ್ತರ ಒಗ್ಗಟ್ಟಿನ ಕುರಿತು ಮಾತನಾಡಿದ ಕಾರ್ಡಿನಲ್ ಫೆರಾವೊ, “ಸೇವೆಯ ಮೂಲಕ ನಾಯಕತ್ವ, ಮತ್ತು ಸಹಯೋಗ ಮತ್ತು ಸಮಾನತೆಯು ಪಾಲನಾ ಪರಿಷತ್ತನ್ನು ಬಲಪಡಿಸುವ ಪ್ರಮುಖ ಅಂಶಗಳಾಗಿವೆ. ಧರ್ಮಸಭೆಯಲ್ಲಿನ ನಾಯಕತ್ವವುಏಕತೆ ಮತ್ತು ಭ್ರಾತೃತ್ವದಿಂದ ಕೂಡಿರಬೇಕು, ಇದು ಪೋಪ್ ಫ್ರಾನ್ಸಿಸ್‌ಅವರು ರೂಪಿಸಿದ ಸಿನೊಡಲ್ ಚರ್ಚ್ಅನ್ನು ನಿರ್ಮಿಸಲು ನಮಗೆ ಸಹಾಯ ಮಾಡುತ್ತದೆ.

ಕಾರ್ಡಿನಲ್ ಮತ್ತುಇತರೆಲ್ಲಾಗಣ್ಯರುದೀಪ ಬೆಳಗಿಸುವ ಮೂಲಕ ಸುವರ್ಣ ಮಹೋತ್ಸವದ ಉದ್ಘಾಟನೆ ನಡೆಯಿತು. ತದನಂತರ ಕಾರ್ಡಿನಲ್‌ ಅಧ್ಯಕ್ಷತೆಯಲ್ಲಿ ದಿವ್ಯ ಬಲಿಪೂಜೆ ಪ್ರಾರಂಭವಾಯಿತು. ಗಣ್ಯರು ಮತ್ತು ಡಿಪಿಪಿ ಪದಾಧಿಕಾರಿಗಳು ಪೂಜೆಯ ಆರಂಭದಲ್ಲಿ ದೀಪ ಬೆಳಗಿಸುವ ಮೂಲಕ ಆಚರಣೆಯನ್ನು ಉದ್ಘಾಟಿಸಿದರು.

ಕಾರ್ಡಿನಲ್ ಫಿಲಿಪೆ ನೇರಿತಮ್ಮ ಪ್ರವಚನದಲ್ಲಿ, ಸಮುದಾಯದಲ್ಲಿ ಸಹಭಾಗಿತ್ವವನ್ನು ನಿರ್ಮಿಸಲು ಮತ್ತುಸಮಾಜದ ಪರಿವರ್ತನೆಕಾಣಲುಯೇಸುಕ್ರಿಸ್ತನ ಮಾದರಿಯಂತೆ ನಮ್ಮ ಮಾತು ಮತ್ತು ಕಾರ್ಯಗಳಲ್ಲಿ ಪ್ರವಾದಿಯಾಗಿರಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮಂಗಳೂರಿನ ಬಿಷಪ್‌ಅತೀ ವಂದನೀಯಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ, ಬೆಂಗಳೂರು ಆರ್ಚ್ ಬಿಷಪ್‌ಅತೀ ವಂದನೀಯಡಾ| ಪೀಟರ್ ಮಚಾಡೋ, ಕರ್ನಾಟಕ ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶರು ಜೋನ್ ಮೈಕಲ್‌ ಡಿಕುನ್ಹಾ ಮತ್ತು ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಮಾಜಿ ನಿರ್ದೇಶಕರಾದ ಫಿಲೋಮಿನಾ ಲೋಬೋ, ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ  ಐವನ್ ಡಿ ಸೋಜಾ, ವಿಧಾನ್ ಸಭೆಯ ಮಾಜಿ ಶಾಸಕಾರಾದ  ಜೆ.ಆರ್. ಲೋಬೋ, ಫಾದರ್ ಮುಲ್ಲರ್‌ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ರಿಚರ್ಡ್ಕುವೆಲ್ಲೊ, ಧರ್ಮಕೇಂದ್ರದ ಸಾರ್ವಜನಿಕ ಸಂಪರ್ಕಾಧಿಕಾರಿ ವಂದನೀಯ. ಜೆ. ಬಿ. ಸಲ್ಡಾನ್ಹಾ ಮತ್ತು  ರಾಯ್‌ ಕ್ಯಾಸ್ಟೆಲಿನೊ, ಪಾಲನಾ ಪರಿಷತ್ತಿನ ಪ್ರಸ್ತುತ ಕಾರ್ಯದರ್ಶಿ ಡಾ|ಜಾನ್ ಡಿ’ಸಿಲ್ವಾ ಮತ್ತು ಮಾಜಿ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

ಎಲ್ಲಾ ಸಂಕಷ್ಟಗಳ ವಿರುದ್ಧ ಹೋರಾಡಲು ಏಕತೆ ಮುಖ್ಯ ಎಂದು ಕರ್ನಾಟಕ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್‌ಡಿ’ಕುನ್ಹಾ ಹೇಳಿದರು. “ನಾವೆಲ್ಲರೂಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಮಾತ್ರ ಬದಲಾಗುತ್ತಿರುವ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಧರ್ಮಸಭೆಯ ವಿಶ್ವಾಸಕ್ಕೆ ಸಾಕ್ಷಿಯಾಗಬಹುದು. ನಮ್ಮ ನಂಬಿಕೆಯನ್ನು ಬೋಧಿಸುವ, ಪ್ರತಿಪಾದಿಸುವ ಮತ್ತು ಪ್ರಚಾರ ಮಾಡುವ ಹಕ್ಕನ್ನು ನಮ್ಮ ಸಂವಿಧಾನವು ಖಾತರಿ ಪಡಿಸಿದೆ.” ಎಂದರು.

ಆರ್ಚ್ ಬಿಷಪ್ ಪೀಟರ್ ಮಚಾದೊ ಅವರು ಈ ಸಂದರ್ಭದಲ್ಲಿ ಪ್ರಕಟಿಸಲಾದ “ಏಕ್ತಾರಾಚಿಂಭಾಂಗ್ರಾಳಿಂ ಮೆಟಾಂ” (ಏಕತೆಯ ಸುವರ್ಣ ಹೆಜ್ಜೆಗಳು) ಸ್ಮರಣಿಕೆಯನ್ನು ಬಿಡುಗಡೆ ಮಾಡಿದರು. ಸ್ಮರಣಿಕೆಯು ಮಂಗಳೂರಿನ ಕ್ಯಾಥೋಲಿಕ್ ಸಮುದಾಯದ ಸಂಗತಿಗಳು, ಅಂಕಿ ಅಂಶಗಳು ಮತ್ತು ಸಾಧನೆಗಳನ್ನು ದಾಖಲಿಸಿದೆ.

“ಇಂದಿನ ಸಮಾಜದಲ್ಲಿ ಪ್ರವಾದಿಗಳಾಗಲು ಕರೆಯಲಾಗಿದೆ” ಎಂಬ ವಿಷಯದಕುರಿತು ಮಾತನಾಡಿದಆರ್ಚ್ಬಿಷಪ್ ಪೀಟರ್ ಮಚಾದೊ, “ಅನೈಕ್ಯತೆಯ ಭಾವ ಕ್ರಿಶ್ಚಿಯನ್ ಧರ್ಮದದೊಡ್ಡಕುಂದುಕೊರತೆಯಾಗಿದೆೆ. ಮೇಲಿನಿಂದ ಬರುವ ದೇವರ ಅನುಗ್ರಹವು ನಂಬಿಕೆಯಲ್ಲಿಐಕ್ಯವಾಗಿರಲು ಮತ್ತು ಸಂಪನ್ಮೂಲಗಳನ್ನು ಹುಡುಕಲು ಮತ್ತುಸಮಾಜದ ಕೆಳಸ್ಥರದಲ್ಲಿ ಮತುಉಆಂಚಿನಲ್ಲಿರುವವರನ್ನುತಲುಪಲು ನಮಗೆ ಅನುವು ಮಾಡಿಕೊಡುತ್ತದೆ, ಎಂದರು.

ಮಂಗಳೂರಿನ ಕ್ರೈಸ್ತ ಸಮುದಾಯದಗತಕಾಲದ ವೀರರ ಅಮೋಘ ಸಾಧನೆಯನ್ನು ಸ್ಮರಿಸಿದ ಡಾ.ಫಿಲೋಮಿನಾ ಲೋಬೊ, ಮಂಗಳೂರು ಕೆಥೋಲಿಕ್ ಸಮುದಾಯ ಸಮಾಜದ ಮುಖ್ಯವಾಹಿನಿಯಲ್ಲಿ ಪ್ರತಿಭಾನ್ವಿತ ಸಮುದಾಯವಾಗಿದೆಎಂದರು. ಅವರು ಹೇಳಿದರು, “ಇದು ಬಲವಾದ ಸಮುದಾಯವಾಗಿ ಬೆಳೆಯಲು ಸಾಕಷ್ಟು ಸಾಮರ್ಥ್ಯವನ್ನು ಹೊಂದಿದೆ. ಧರ್ಮಸಭೆಎಂದರೆ ಕೇವಲ ಪಾದ್ರಿಗಳು ಮತ್ತು ಕನ್ಯಾಸ್ತ್ರೀಯರು ಮಾತ್ರವಲ್ಲ. ಪ್ರತಿಯೊಬ್ಬ ನಿಷ್ಠಾವಂತರು ಸಂಪನ್ಮೂಲಗಳು ಮತ್ತು ಪ್ರತಿಭೆಗಳನ್ನು ಸಮಾಜದ ಒಳಿತಿಗಾಗಿ ಬಳಸಿದಾಗ ಚರ್ಚ್ ಪೂರ್ಣಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಸಮಾಜಕ್ಕೆಉತ್ತಮ ನಾಯಕರನ್ನು ತಯಾರು ಮಾಡಲು ಮತ್ತು ರೂಪಿಸಲು ಈ ಆಚರಣೆ ಕಣ್ಣು ತೆರೆದಿದೆ, ಎಂದರು.

ಬಿಷಪ್ ಅಲೋಶಿಯಸ್ ಪಾವ್ಲ್ಡಿಸೋಜ ಅವರು ಸಮುದಾಯದ ಬೆಳವಣಿಗೆಯಲ್ಲಿ ಪಾಲನಾ ಪರಿಷತ್ತಿನ ಪಾತ್ರದ ಕುರಿತು ಮಾತನಾಡಿದರು. ಅವರು 50 ವರ್ಷಗಳಲ್ಲಿ ದಾಖಲಿಸಿದ ಗಮನಾರ್ಹಅಭಿವೃದ್ಧಿ ಮತ್ತು ಬೆಳವಣಿಗೆಯ ಬಗ್ಗೆ ಸಂತೋಷ ಪಟ್ಟರು, ದೇವರ ಅನುಗ್ರಹವು ಹೇರಳವಾಗಿದೆ ಮತ್ತು ಧರ್ಮ ಸಭೆಯಲ್ಲಿ ಶ್ರೀ ಸಾಮಾನ್ಯರ ಸಹಯೋಗ ಮತ್ತು ಬೆಂಬಲವು ಅಪಾರವಾಗಿದೆ ಎಂಬುದಕ್ಕೆ ಸ್ಪಷ್ಟ ಸೂಚನೆಗಳಾಗಿವೆ ಎಂದು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷರಾದ ಅತಿ ವಂದನೀಯ ಡಾ.ಪೀಟರ್‌ ಪಾವ್ಲ್ ಸಲ್ಡಾನ್ಹಾ ಮಾತನಾಡಿ, “ನಾವು ಈ ದೇಶದ ಪ್ರಜೆಗಳು. ನಮ್ಮ ಹಕ್ಕುಗಳನ್ನು ರಕ್ಷಿಸಲು ನಾವು ಧ್ವನಿ ಎತ್ತಬೇಕು ಮತ್ತು ಪ್ರತಿಕ್ರಿಯಿಸಬೇಕು.”ಆತ್ಮ ವಿಶ್ವಾಸ ಮತ್ತುಒಗ್ಗಟ್ಟಿನಿಂದ ಕೆಲಸ ಮಾಡುವುದು ಒಗ್ಗಟ್ಟನ್ನು ಉತ್ತೇಜಿಸುವ ಪ್ರಮುಖ ಅಂಶಗಳಾಗಿವೆ ಎಂದು ಅವರು ಒತ್ತಿ ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಧರ್ಮಾಧ್ಯಕ್ಷರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಸಂಚಾಲಕರಾದ ನ್ಯಾಯವಾದಿ ಎಂ.ಪಿ ನೊರೊನ್ಹಾ ಸ್ವಾಗತಿಸಿದರು. “ಈ ಆಚರಣೆಯ ಉದ್ದೇಶವು ಹಿಂದಿನ ಯಶಸ್ಸನ್ನುಆಚರಿಸುವುದು ಮಾತ್ರವಲ್ಲದೆ ಎಲ್ಲಾ ಪಾಲನಾ ಪರಿಷತ್ ಸದಸ್ಯರು ಮತ್ತು ಸಮುದಾಯದ ಯುವಕರಲ್ಲಿ ಜಾಗೃತಿ ಮೂಡಿಸಲು ಮತ್ತು ನಾಯಕತ್ವದ ಗುಣವನ್ನು ಬೆಳೆಸುವ ಮೂಲಕ ಅವರನ್ನು ಸಮುದಾಯದ ನಾಯಕರನ್ನಾಗಿ ಮಾಡಲು ಯೋಜನೆ ರೂಪಿಸುವುದು”ಎಂದು ಹೇಳಿದರು. “ಇಂದಿನ ಆಚರಣೆಯು ಒಂದು ಮೂಹೂರ್ತ” ನೊರೊನ್ಹಾ ಹೇಳಿದರು.

ರಾಕ್ಣೊ ವಾರ ಪತ್ರಿಕೆಯ ನಿಯೋಜಿತ ಸಂಪಾದಕ ವಂದನೀಯ ರೂಪೇಶ್ ಮಾಡ್ತಾ ಮತ್ತು ಅನಿತಾ ವೇಗಸ್‌ ಕಾರ್ಯಕ್ರಮ ನಿರೂಪಿಸಿದರು. ಪಾಲನಾ ಪರಿಷತ್ತಿನ ಕಾರ್ಯದರ್ಶಿ ಡಾ|ಜಾನ್ ಡಿ ಸಿಲ್ವಾ ವಂದಿಸಿದರು. ಆತೀ ವಂದನೀಯ ಮ್ಯಾಕ್ಸಿಮ್‌ಎಲ್ ನೊರೊನ್ಹಾ, ಶ್ರೇಷ್ಠ ಗುರುಊಟದ ಮೊದಲು ಪ್ರಾರ್ಥಿಸಿದರು. 2000 ಕ್ಕೂ ಹೆಚ್ಚು ಶ್ರೀಸಾಮಾನ್ಯರು, ಯಾಜಕರು ಮತ್ತು ಕನ್ಯಾಸ್ರೀಗಳು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು