News Karnataka Kannada
Monday, April 29 2024
ಮಂಗಳೂರು

ಮಂಗಳೂರು: ಸಂಕಷ್ಟದಲ್ಲಿ ದ.ಕ ಹಾಲು ಉತ್ಪಾದಕರ ಒಕ್ಕೂಟ, ಹಾಲಿನ ವಿಶೇಷ ಪ್ರೋತ್ಸಾಹ ಧನಕ್ಕೆ ಕತ್ತರಿ

Dakshina Kannada Milk Producers' Union cuts special incentive for milk
Photo Credit : News Kannada

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಕಾರ್ಯ ವ್ಯಾಪ್ತಿಯ ಒಕ್ಕೂಟದಲ್ಲಿ 734 ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಪ್ರತಿದಿನ 5.70 ಲಕ್ಷ ಲೀಟರ್ ಹಾಲು ಶೇಖರಣೆ ಗುರಿ ಇದೆ. ಆದರೆ ಅನಿರೀಕ್ಷಿತ ಮಳೆ, ಜಾನುವಾರುಗಳ ಚರ್ಮಗಂಟು ರೋಗ ಮತ್ತು ಪಶು ಆಹಾರದ ದರ ಹೆಚ್ಚಳದಿಂದ ಹಾಲಿನ ಶೇಖರಣೆ ಕಡಿಮೆಯಾಗಿದ್ದು, ಒಕ್ಕೂಟದಲ್ಲಿ ಹಾಲಿನ ಶೇಖರಣೆ ಸರಾಸರಿ 4.70 ಲಕ್ಷ ಲೀಟರ್‌ನಷ್ಟಿದೆ. ಸುಮಾರು 70 ಸಾವಿರ ಲೀ. ಹಾಲಿನ ಕೊರತೆ ಕಂಡುಬಂದಿದೆ. ಹೀಗಾಗಿ ಹೈನುಗಾರರಿಗೆ ನೀಡುತ್ತಿದ್ದ ವಿಶೇಷ ಪ್ರೋತ್ಸಾಹ ಧನದಲ್ಲಿ 1.05 ರೂ. ಹಿಂತೆಗೆಯಲಾಗಿದೆ.

ಒಕ್ಕೂಟದಿಂದ ಪ್ರಸ್ತುತ ಪ್ರತೀ ಲೀ. ಹಾಲಿಗೆ 2.05 ರೂ. ವಿಶೇಷ ಪ್ರೋತ್ಸಾಹ ಧನ ನೀಡಲಾಗುತ್ತಿತ್ತು. ಅದರಲ್ಲಿ 1.05 ರೂ. ಹಿಂಪಡೆಯಲಾಗಿದೆ. ಸಂಘಗಳ ಅಭಿವೃದ್ಧಿಯನ್ನು ಗಣನೆಗೆ ಪರಿಗಣಿಸಿ ಪ್ರತಿ ಲೀಟರ್‌ಗೆ 5 ಪೈಸೆ ಮಾರ್ಜಿನ್ ಹೆಚ್ಚಿಸಿ ಬುಧವಾರದಿಂದ 1 ರೂ. ವಿಶೇಷ ಪ್ರೋತ್ಸಾಹ ಧನ ಮುಂದುವರಿಸಲಾಗಿದೆ.

ಹಾಲಿನ ಕೊರತೆ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಕಾರ್ಯ ವ್ಯಾಪ್ತಿಯ ಒಕ್ಕೂಟದಲ್ಲಿ 734 ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಪ್ರತಿದಿನ 5.70 ಲಕ್ಷ ಲೀ. ಹಾಲು ಶೇಖರಣೆ ಗುರಿ ಇದೆ. ಆದರೆ ಅನಿರೀಕ್ಷಿತ ಮಳೆ, ಜಾನುವಾರುಗಳ ಚರ್ಮಗಂಟು ರೋಗ ಮತ್ತು ಪಶು ಆಹಾರದ ದರ ಹೆಚ್ಚಳದಿಂದ ಹಾಲಿನ ಶೇಖರಣೆ ಕಡಿಮೆಯಾಗಿದ್ದು, ಒಕ್ಕೂಟದಲ್ಲಿ ಹಾಲಿನ ಶೇಖರಣೆ ಸರಾಸರಿ 4.70 ಲಕ್ಷ ಲೀಟರ್‌ನಷ್ಟಿದೆ. ಸುಮಾರು 70 ಸಾವಿರ ಲೀ. ಹಾಲಿನ ಕೊರತೆ ಕಂಡುಬಂದಿದೆ.

ಖರೀದಿ ದರ ಹೆಚ್ಚಳ

ಹಿಂದೆ ಇತರ ಒಕ್ಕೂಟಗಳಿಂದ 1 ಲೀ ಟರ್‌ಗೆ 30 ರೂಪಾಯಿನಂತೆ ಹಾಲು ಖರೀದಿಸಲಾಗುತ್ತಿತ್ತು. ಈಗ ಹಾಲಿನ ಕೊರತೆಯಿಂದಾಗಿ 36.50 ರೂಪಾಯಿನಂತೆ ಪಾವತಿಸಬೇಕಿದ್ದು, ಒಕ್ಕೂಟಕ್ಕೆ ಹೆಚ್ಚಿನ ನಷ್ಟ ಉಂಟಾಗುತ್ತಿದೆ. ಹಿಂದೆ ಹಾಲಿನ ಪುಡಿ ಕೆ.ಜಿ.ಗೆ 215ರಿಂದ 230 ರೂಪಾಯಿ ಇತ್ತು. ಈಗ ಹಾಲಿನ ಪುಡಿ ದರ 350ರಷ್ಟು ಏರಿಕೆಯಾಗಿದ್ದು, ಹಾಲಿನ ಪುಡಿಯನ್ನು ಹಾಲಾಗಿ ಪರಿವರ್ತನೆ ಮಾಡಿ ಮಾರಾಟ ಮಾಡಿದಾಗ ಹೆಚ್ಚಿನ ನಷ್ಟ ಉಂಟಾಗುತ್ತಿದೆ.

ಸಿಂಗಪುರದಲ್ಲೂ ನಮ್ಮ ‘ನಂದಿನಿ’ ಹವಾ, ಹಾಲು ರಫ್ತಿಗೆ ಒಪ್ಪಂದ, ₹500 ಕೋಟಿ ವಹಿವಾಟು ನಿರೀಕ್ಷೆ

2022ರ ಅಕ್ಟೋಬರ್‌ನಲ್ಲಿ ಹಾಲು ಉತ್ಪಾದಕ ಸದಸ್ಯರಿಗೆ ಪ್ರತಿ ಲೀಟರ್‌ಗೆ ಕನಿಷ್ಠ ದರ 29 ರೂ. ನೀಡಲಾಗುತ್ತಿತ್ತು. ಒಕ್ಕೂಟದ ಲಾಭಾಂಶದಿಂದ ಪ್ರತಿ ಲೀಟರ್‌ಗೆ ವಿಶೇಷ ಪ್ರೋತ್ಸಾಹ ಧನವಾಗಿ ಖರೀದಿ ದರ 2.05 ರೂಪಾಯಿ ಹೆಚ್ಚಳ ಮಾಡಿ, 31.05 ರೂಪಾಯಿ ಮತ್ತು ಮುಂದೆ ಸರಕಾರದ ನಿರ್ದೇಶನ ಹಾಗೂ ಕಹಾಮದ ಆದೇಶದಂತೆ 2 ರೂಪಾಯಿ ಹೆಚ್ಚಿಸಿ, ನ.25ರಿಂದ 33.05 ರೂ. ಕನಿಷ್ಠ ದರ ಪಾವತಿಯಾಗುತ್ತಿದೆ.

3 ಕೋಟಿ ವಿನಿಯೋಗ

ವಿಶೇಷ ಪ್ರೋತ್ಸಾಹ ಧನಕ್ಕೆ ಒಕ್ಕೂಟವು ಮಾಸಿಕ ಸುಮಾರು 3 ಕೋಟಿ ರೂಪಾಯಿ ವಿನಿಯೋಗಿಸುತ್ತಿದ್ದು, ಮುಂದಿನ ಮೂರು ತಿಂಗಳಲ್ಲಿ 9ರಿಂದ 10 ಕೋಟಿ ರೂ. ನಷ್ಟವಾಗಲಿದೆ. ಒಕ್ಕೂಟದಲ್ಲಿ 64 ಕೋಟಿಯಷ್ಟು ಅಭಿವೃದ್ಧಿ ನಿಧಿಯಿದ್ದು, ವಾರ್ಷಿಕ 3ರಿಂದ 4 ಕೋಟಿ ಬಡ್ಡಿ ಬರುತ್ತಿದೆ. ಇದನ್ನು ಹಾಲು ಖರೀದಿಗೆ ಬಳಸಿದಲ್ಲಿ ಒಂದು ತಿಂಗಳ ಹಾಲಿನ ಪ್ರೋತ್ಸಾಹ ಧನ ಮಾತ್ರ ನೀಡಲು ಸಾಧ್ಯವಾಗಲಿದೆ. ನಷ್ಟದಿಂದ ಹೊರಬರಲು ವಿಶೇಷ ಪ್ರೋತ್ಸಾಹ ಧನ ಹಿಂಪಡೆಯಲು ಜ.7ರಂದು ನಡೆದ ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು