News Karnataka Kannada
Thursday, May 09 2024
ಮಂಗಳೂರು

ಮಂಗಳೂರು: ನದಿಗಳ ರೇಖಾಚಿತ್ರಗಳ ವಿಶಿಷ್ಟ ಕಲಾ ಯೋಜನೆಗೆ ಚಾಲನೆ

Mangaluru: A unique art project of drawings of rivers launched
Photo Credit : By Author

ಮಂಗಳೂರು: ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ & ಕಲ್ಚರಲ್ ಹೆರಿಟೇಜ್ (ಇಂಟಾಚ್) ನ ಮಂಗಳೂರು ಅಧ್ಯಾಯ ಆರ್ಟ್ ಕೆನರಾ ಟ್ರಸ್ಟ್ ಸಹಯೋಗದಲ್ಲಿ ಕಲಾವಿದ ಜೀವನ್ ಸಾಲಿಯಾನ್ ಅವರಿಂದ ಮಂಗಳೂರಿನ ನದಿಗಳ ರೇಖಾಚಿತ್ರದ ವಿಶಿಷ್ಟ ಕಲಾ ಯೋಜನೆಗೆ ಭಾನುವಾರ ಸೆಪ್ಟೆಂಬರ್ ೨೫, ೨೦೨೨ ವಿಶ್ವ ನದಿಗಳ ದಿನದಂದು ಬೆಂಗ್ರೆ ಬಿಎಂಎಸ್ ಫೆರಿ ಪಾಯಿಂಟ್‌ನಲ್ಲಿ ಬೆಳಿಗ್ಗೆ ೮:೪೫ ಗಂಟೆಗೆ ಚಾಲನೆ ನೀಡಿತು.

ಸಮಾರಂಭದಲ್ಲಿ ಬೋಳೂರು ಅಮೃತ ವಿದ್ಯಾಲಯದ ಕ್ಯಾಂಪಸ್ ನಿರ್ದೇಶಕ ಯತೀಶ್ ಬೈಕಂಪಾಡಿ ಮತ್ತು ತೋಟಬೆಂಗ್ರೆ ಮಹಾಜನ ಸಭಾದ ಅಧ್ಯಕ್ಷ ಕೇಶವ ಕರ್ಕೇರ ಅವರು ಉಪಸ್ಥಿತರಿದ್ದರು.

ಮುಖ್ಯ ಅತಿಥಿ ಯತೀಶ್ ಬೈಕಂಪಾಡಿ ಅವರು ದೋಣಿಯ ಚಿತ್ರ ಬಿಡಿಸಿ ಯೋಜನೆಗೆ ಚಾಲನೆ ನೀಡಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದ ಪ್ರಸಿದ್ಧ ಸಚಿತ್ರ ಪ್ರವಾಸ ಕಥನವನ್ನು ರಚಿಸಿದ ಡೊಮ್ ಮೊರೇಸ್ ಮತ್ತು ಮಾರಿಯೋ ಮಿರಾಂಡಾ ಮತ್ತು ಸಹೋದರರಾದ ಆರ್.ಕೆ.ನಾರಾಯಣ್ ಮತ್ತು ಆರ್.ಕೆ.ಲಕ್ಷ್ಮಣ್ ಅವರಂತಹ ಬರಹಗಾರರು ಮತ್ತು ಕಲಾವಿದರ ಪ್ರಭಾವಶಾಲಿ ಸಹಯೋಗವನ್ನು ಸ್ಮರಿಸಿದರು. “ಇಂದು ನೀವು ಅಂತಹದೆಯಾದ ಆಸಕ್ತಿದಾಯಕ ಯೋಜನೆಯನ್ನು ಪ್ರಾರಂಭಿಸಿದ್ದೀರಿ. ನೀವು ಅದೇ ಮಟ್ಟದ ಯಶಸ್ಸಿನೊಂದಿಗೆ ಸಾಧಿಸುವಿರಿ ಎಂದು ನಾನು ಆಶಿಸುತ್ತೇನೆ,” ಎಂದು ಅವರು ಹೇಳಿದರು.

ಕೇಶವ ಕರ್ಕೇರ ಅವರು ತಮ್ಮ ಭಾಷಣದಲ್ಲಿ ಜನರ ಜೀವನಾಡಿಯಾಗಿರುವ ನದಿಯ ಮಾಲಿನ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದರು. “ಇಂದು ನದಿಯ ಮಾಲಿನ್ಯದಿಂದ ಜೀವನೋಪಾಯಕ್ಕಾಗಿ ಬದುಕುವ ಜನರಿಗೆ ತೊಂದರೆಯಾಗುತ್ತಿದೆ. ಇದು ಆರೋಗ್ಯದ ಅಪಾಯವನ್ನು ಉಂಟುಮಾಡುತ್ತದೆ, ಜಲಚರಗಳ ಅವನತಿಗೆ ಕಾರಣವಾಗುತ್ತಿದೆ. ಈ ಯೋಜನೆಯು ಸಮಸ್ಯೆಯನ್ನು ಪರಿಹರಿಸಲು ಅಧಿಕಾರಿಗಳ ಕಣ್ಣು ತೆರೆಯುತ್ತದೆ ಎಂದು ನಾನು ಭಾವಿಸುತ್ತೇನೆ,” ಎಂದು ಹೇಳಿದರು.

ಕಲಾವಿದ ಜೀವನ್ ಸಾಲಿಯಾನ್ ಅವರು ಪ್ರಕೃತಿಯನ್ನು ಚಿತ್ರಿಸುವಲ್ಲಿ ಉತ್ತಮ ಅನುಭವವನ್ನು ಹೊಂದಿರುವುದರಿAದ ಈ ಪ್ರದೇಶದ ನಿರ್ಲಕ್ಷಿಸಲ್ಪಟ್ಟ ನೈಸರ್ಗಿಕ ಮತ್ತು ನಿರ್ಮಿತ ಪರಂಪರೆಯತ್ತ ಗಮನ ಸೆಳೆಯಲು ಈ ಕಲಾ ಯೋಜನೆಯನ್ನು ಕಲ್ಪಿಸಿದೆ ಎಂದು ವಿವರಿಸಿದರು.

ಸ್ಥಳೀಯ ಮಕ್ಕಳು ತಮ್ಮದೇ ಆದ ರೇಖಾಚಿತ್ರಗಳನ್ನು ರಚಿಸುವ ಮೂಲಕ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಮಂಗಳೂರಿನ ಮಹಾಲಸಾ ಕಾಲೇಜ್ ಆಫ್ ವಿಷುಯಲ್ ಆರ್ಟ್ನ ಉಪನ್ಯಾಸಕ ಸೈಯದ್ ಆಸಿಫ್ ಅಲಿ ಭಾಗವಹಿಸಿದ ಮಕ್ಕಳಿಗೆ ಮಾರ್ಗದರ್ಶನ ನೀಡಿದರು.

ಸ್ಥಳೀಯ ಮಾಜಿ ಕಾರ್ಪೊರೇಟರ್ ಮೀರಾ ಕರ್ಕೇರ, ಬೆಂಗ್ರೆ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲಾ ಸಮಿತಿ ಅಧ್ಯಕ್ಷ ರಾಕೇಶ್ ವಿ. ಸುವರ್ಣ, ಶಾಲಾ ಶಿಕ್ಷಕಿಯರಾದ ಸುಮಾ ಮತ್ತು ಅಶ್ವಿನಿ ಉಪಸ್ಥಿತರಿದ್ದರು. ರಾಜೇಂದ್ರ ಕೇದಿಗೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸುಭಾಸ್ ಚಂದ್ರ ಬಸು, ನೇಮಿರಾಜ್ ಶೆಟ್ಟಿ, ಆರ್ಕಿಟೆಕ್ಟ್ ನಿರೇನ್ ಜೈನ್ ಮತ್ತು ಇಂಟಾಚ್ ಮತ್ತು ಆರ್ಟ್ ಕೆನರಾ ಟ್ರಸ್ಟ್ನ ಇತರ ಸದಸ್ಯರು ಉಪಸ್ಥಿತರಿದ್ದರು.

ಈ ಕಲಾ ಯೋಜನೆಯ ಬಗ್ಗೆ:

ನೇತ್ರಾವತಿ ಮತ್ತು ಫಲ್ಗುಣಿ ನದಿಗಳ ನಡುವೆ ಇರುವ ಮಂಗಳೂರು ನಗರವು ನದಿಗಳೊಂದಿಗೆ ಬಲವಾದ ಸಂಬAಧವನ್ನು ಹೊಂದಿದೆ. ನಗರದ ಸ್ಥಳೀಯ ತುಳು ಹೆಸರಾದ ‘ಕುಡ್ಲ’ ಎಂದರೆ ‘ಎರಡು ನದಿಗಳ ಸಂಗಮ ಸ್ಥಳ’. ‘ಭೂಮಿ, ನದಿ ಮತ್ತು ಆಚೆಗೆ – ಸ್ಕೆಚಿಂಗ್ ಮತ್ತು ಡ್ರಾಯಿಂಗ್ ಮೂಲಕ ಮಂಗಳೂರಿನ ಪರಂಪರೆಯನ್ನು ಅನ್ವೇಷಿಸುವುದು’ ಎಂಬ ಶೀರ್ಷಿಕೆಯಡಿ ಆಯೋಜಿಸಲಾಗಿರುವ ಈ ವಿನೂತನ ಯೋಜನೆಯು ಯುವ ಕಲಾವಿದ ಮತ್ತು ಕಲಾ ಶಿಕ್ಷಕ ಜೀವನ್ ಸಾಲಿಯಾನ್ ಅವರು ನಗರದ ನದಿ ತೀರದ ಸ್ಥಳಗಳ ಆಯ್ದ ರೇಖಾಚಿತ್ರಗಳ ಸಚಿತ್ರ ಮೊನೊಗ್ರಾಫ್‌ನೊಂದಿಗೆ ಮಂಗಳೂರಿನ ನೈಸರ್ಗಿಕ ಮತ್ತು ನಿರ್ಮಿತ ಪರಂಪರೆಯನ್ನು ದಾಖಲಿಸಲು ಪ್ರಯತ್ನಿಸುತ್ತದೆ.

ಸುಮಾರು ಎರಡು ತಿಂಗಳ ಅವಧಿಯ ಈ ಯೋಜನೆಯು ನಗರದಾದ್ಯಂತ ವಿವಿಧ ಪಾರಂಪರಿಕ ತಾಣಗಳಲ್ಲಿ ಶಾಲಾ ಮಕ್ಕಳೊಂದಿಗೆ ಕಾರ್ಯಾಗಾರಗಳನ್ನು ಒಳಗೊಂಡಿರುತ್ತದೆ. ನಗರದ ಬಲ್ಲಾಳ್‌ಬಾಗ್‌ನಲ್ಲಿರುವ ಕೊಡಿಯಾಲಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಮೂಲ ರೇಖಾಚಿತ್ರಗಳು ಮತ್ತು ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ.

ಈ ಯೋಜನೆಯನ್ನು ಮಂಗಳೂರು ಕಲೆ / ಆರ್ಕೈವಲ್ ಹೆರಿಟೇಜ್ (ಮಾಪ್) ಅಡಿಯಲ್ಲಿ ಆಯೋಜಿಸಲಾಗಿದೆೆ.
ಹೆಚ್ಚಿನ ಮಾಹಿತಿಗಾಗಿ ಇಂಟಾಚ್ ಮಂಗಳೂರು ಅಧ್ಯಾಯದ ಸಂಚಾಲಕ ಸುಭಾಸ್ ಬಸು ಅವರನ್ನು ಸಂಪರ್ಕಿಸಿ: ೮೭೬೨೩೬೮೦೪೮.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು