News Karnataka Kannada
Saturday, May 04 2024
ಮಂಗಳೂರು

ಮಾಂಡೋವಿ ಮೋಟಾರ್ಸ್ ಹಂಪನಕಟ್ಟೆಯಲ್ಲಿ ಜುಲೈ 23 ರಂದು ”ಆಟಿದ ಕೂಟ” ಕಾರ್ಯಕ್ರಮ

Mandovi Motors
Photo Credit : News Kannada

ಮಂಗಳೂರು: ಇದೇ ಜುಲೈ 23 (ಭಾನುವಾರ) ರಂದು ಮಾಂಡೋವಿ ಮೋಟಾರ್ಸ್ ಹಂಪನಕಟ್ಟೆಯ ಶೋರೂಮ್ ನಲ್ಲಿ ಮಳೆಗಾಲದ ಅಪರೂಪದ ವಿಶೇಷ ತಿಂಡಿ ತಿನಿಸುಗಳ ಆಹಾರ ಮೇಳೆ ” ಆಟಿದ ಕೂಟ” ಏರ್ಪಡಿಸಲಾಗಿದೆ. ಬೆಳಿಗ್ಗೆ 10 ರಿಂದ ಸಂಜೆ 7 ಗಂಟೆ ತನಕ ಕಾರ್ಯಕ್ರಮ ನಡೆಯಲಿದೆ. ಈ ವಿಶೇಷ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು ಸುಮಾರು 30ಕ್ಕೂ ಅಧಿಕ ವಿಶೇಷ ಆಹಾರ ಮಳಿಗೆಗಳಲ್ಲಿ, ಹಲವಾರು ತಿಂಡಿ ತಿನಿಸುಗಳ ತಾಜಾ ಹಣ್ಣಿನ ಬಗೆ ಬಗೆಯ ಐಸ್ ಕ್ರೀಂಗಳು, ಹಲಸಿನ ಹೋಳಿಗೆ, ಸಾಂಪ್ರದಾಯಿಕ ಗೃಹ ತಯಾರಿಕೆಯ ಉತ್ಪನ್ನಗಳು ಉಭ್ಯವಿದ್ದು, ಸಾರ್ವಜನಿಕರು ಇದರ ವೀಕ್ಷಣೆಯನ್ನು ತಮ್ಮ ಕುಟುಂಬದ ಹಾಗೂ ಗೆಳೆಯರೊಂದಿಗೆ ಆಗಮಿಸಿ, ಆಟಿಯ ನಿಜವಾದ ಸೊಬಗನ್ನು ಅನುಭವಿಸಬೇಕೆಂದು ಮಾಂಡೋವಿ ಮೋಟಾರ್ಸ್ ಮನವಿ ಮಾಡಿದೆ.

ಇನ್ನು ಈ ಕಾರ್ಯಕ್ರಮ ಬೆಳಿಗ್ಗೆ 10ಗಂಟೆಗೆ ಪ್ರಾರಂಭಗೊಳಲಿದ್ದು, ಸಂಗೀತ್ ಬಹಾರ್ ಕಲಾವಿದರಿಂದ ಕರೋಕೆ ಕಾರ್ಯಕ್ರಮ ನಡೆಯಲಿದೆ. ಸಂಜೆ 4 ಗಂಟೆಗೆ ಸರಿಯಾಗಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಕಾಸರಗೋಡು ಇವರ ಸಂಯೋಜನೆಯಲ್ಲಿ “ಅಂಗದ ಸಂಧಾನ” ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದ್ದು ಹಿಮ್ಮೇಳದಲ್ಲಿ ರಾಮಕೃಷ್ಣ ಮಯ್ಯ ಹಾಗೂ ಬಳಗ, ಮತ್ತು ಮುಮ್ಮೆಳದಲ್ಲಿ ಕೆ. ಗೋವಿಂದ ಭಟ್ ಡಾ|| ಪ್ರಭಾಕರ್ ಝೋಶಿ ಹಾಗೂ ಜಬ್ಬಾರ್ ಸುಮೋ ಸಂಪಾಜೆ ಇತರ ಪ್ರಖ್ಯಾತ ಕಲಾವಿದರು ಭಾಗವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 7259014044 ಸಂಖ್ಯೆಗೆ ಸಂಪರ್ಕಿಸುವಂತೆ ಎಂದು ಮಾಂಡೋವಿ ಮೋಟಾರ್ಸ್ ನ ಡಿ.ಜಿ.ಎಂ ಶ್ರೀ ಶಶಿಧರ್ ಕಾರಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು