News Karnataka Kannada
Monday, April 22 2024
Cricket
ಮಂಗಳೂರು

ಮಂಗಳೂರಿನಲ್ಲಿ 9 ಕಡೆಗಳಲ್ಲಿ ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಕೇಂದ್ರ ಸ್ಥಾಪನೆ

Grihalakshmi project
Photo Credit : News Kannada

ಮಂಗಳೂರು: ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು, ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಈ ಯೋಜನೆಯಡಿ ನೋಂದಣಿಗಾಗಿ 9 ಕೇಂದ್ರಗಳನ್ನು ತೆರೆಯಲಾಗಿದೆ. ಅಲ್ಲದೇ 3 ವಲಯ ಕಚೇರಿಗಳಲ್ಲಿ 6 ಕೇಂದ್ರಗಳು ಆರಂಭವಾಗಿವೆ. ಅವುಗಳೆಂದರೆ, ಮಹಾನಗರಪಾಲಿಕೆಯ ಕೇಂದ್ರ ಕಛೇರಿ, ಕದ್ರಿ ವಲಯ ಕಛೇರಿ, ಸುರತ್ಕಲ್ ವಲಯ ಕಛೇರಿ, ಕಸಬ ಬೇಂಗ್ರೆ ಪಿಎಚ್ ಸಿ ಕಛೇರಿ ಸೆಂಟರ್, ಕುಳೂರು ಆರೋಗ್ಯ ಕೇಂದ್ರ, ಕುಂಜತ್ತ್ ಬೈಲ್ ಕ್ಲಿನಿಕ್, ವಾಮಾಂಜೂರು ಪ್ರಾಥಮಿಕ ಕೇಂದ್ರ, ಶಕ್ತಿನಗರ ಆರೋಗ್ಯ ಕೇಂದ್ರ, ಬಂದರ್ ಪಿಎಚ್ ಸಿ ಸೆಂಟರ್, ಎಕ್ಕೂರು ಪಿಎಚ್ ಸಿ ಸೆಂಟರ್, ಎಕ್ಕೂರು ಪಿ ಎಚ್ ಸಿ ಸೆಂಟರ್, ಪಡೀಲ್ ಪಿಎಚ್ ಸಿ ಸೆಂಟರ್ ಇಲ್ಲಿ ನೋಂದಾವಣಿ ಮಾಡಿಕೊಳ್ಳಬಹುದಾಗಿದೆ.

ಈ ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆಯನ್ನು ಪರಿಶೀಲಿಸಲು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಜು.20ರ ಗುರುವಾರ ಮಂಗಳೂರು ಮಹಾನಗರ ಪಾಲಿಕೆ ಕಚೇರಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಆನಂದ್ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು