News Karnataka Kannada
Monday, April 29 2024
ಮಂಗಳೂರು

ಮಂಡೆಕೋಲು: ಲಂಚ ಸ್ವೀಕರಿಸಿ ಸಿಕ್ಕಿಬಿದ್ದ ಗ್ರಾಮಕರಣಿಕನಿಗೆ ಶಿಕ್ಷೆ ಪ್ರಕಟ

ಹೆಂಡತಿ ಕೊಲೆ ಮಾಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಆಕೆಯ ಪತಿಗೆ ಬೀದರ್‌ನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದೆ.
Photo Credit : News Kannada

ಮಂಡೆಕೋಲು:  ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಕರಣಿಕರೊಬ್ಬರಿಗೆ ಮಂಗಳೂರಿನ ನ್ಯಾಯಾಲಯ ನಾಲ್ಕು ವರ್ಷ ಜೈಲು ಶಿಕ್ಷೆ ಮತ್ತು 70 ಸಾವಿರ ದಂಡ ವಿಧಿಸಿ ಆದೇಶ ನೀಡಿದೆ.

ಸುಳ್ಯ ಮಂಡೆಕೋಲಿನ ಗೋಪಾಲಕೃಷ್ಣ ಅವರ ಅಕ್ರಮ ಸಕ್ರಮದ ಅರ್ಜಿ ವಿಲೇವಾರಿಗೆ 60,000 ರೂ. ಲಂಚದ ಹಣಕ್ಕೆ ಗ್ರಾಮಕರಣಿಕ ಮಹೇಶ್‌ ಎಂಬವರು ಬೇಡಿಕೆ ಇಟ್ಟಿದ್ದು, 2016ರ ಜೂ. 7ರಂದು 45,000 ರೂ.ಗಳನ್ನು ಲಂಚದ ಹಣವಾಗಿ ಸ್ವೀಕರಿಸುವ ಸಂದರ್ಭ ಮಂಗಳೂರಿನ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಬಂಧಿಸಿದ್ದರು.

ಈ ಬಗ್ಗೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ನ್ಯಾಯಾಧೀಶ ಬಿ.ಬಿ.ಜಕಾತಿ ಅವರು ಮಾ. 2ರಂದು ಆರೋಪಿ ಎಸ್‌.ಮಹೇಶ್‌ನಿಗೆ 4 ವರ್ಷಗಳ ಜೈಲು ಹಾಗೂ 70,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದು, ದಂಡ ಕಟ್ಟಲು ವಿಫ‌ಲನಾದರೆ ಮತ್ತೆ 8 ತಿಂಗಳ ಜೈಲು ಶಿಕ್ಷೆಗೆ ಆದೇಶಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು