News Karnataka Kannada
Saturday, April 27 2024
ಮಂಗಳೂರು

ಅಮಲು ಪದಾರ್ಥ ಸೇವಿಸಿ ರಸ್ತೆ ಡಿವೈಡರ್ ನಲ್ಲಿ ದಾಂಧಲೆ: ಯುವಕನ ಬಂಧನ

Man arrested for breaking into road divider after consuming drugs
Photo Credit : News Kannada

ದೇರಳಕಟ್ಟೆ: ಅಮಲು ಪದಾರ್ಥ ಸೇವಿಸಿ ನಶೆಯಲ್ಲಿ ತೇಲುತ್ತಿದ್ದ ಯುವಕನೋರ್ವ ನಾಟೆಕಲ್ ಎಂಬಲ್ಲಿ ರಸ್ತೆ ಡಿವೈಡರ್ ನಲ್ಲಿ ದಾಂಧಲೆ ನಡೆಸಿದ್ದು ಸ್ಥಳಕ್ಕೆ ಬಂದ ಕೊಣಾಜೆ ಪೊಲೀಸರು ಯುವಕನನ್ನ ಸಿನಿಮೀಯ ರೀತಿಯಲ್ಲಿ ಲಾಕ್ ಮಾಡಿ ಜೈಲಿಗಟ್ಟಿದ್ದಾರೆ.

ಉಳ್ಳಾಲ ಮುಕ್ಕಚ್ಚೇರಿ, ಕೈಕೋ ರೋಡ್ ನಿವಾಸಿ ಅಬ್ಬೂಬಕ್ಕರ್ ಸಿದ್ಧೀಕ್(24) ಬಂಧಿತ ಯುವಕ. ನಿನ್ನೆ ದೇರಳಕಟ್ಟೆ ಸಮೀಪದ ನಾಟೆಕಲ್ ಜಂಕ್ಷನ್ ನಲ್ಲಿ ಘಟನೆ ನಡೆದಿದೆ. ಅಮಲು ಪದಾರ್ಥ ಸೇವಿಸಿ ನಶೆಯಲ್ಲಿದ್ದ ಸಿದ್ಧೀಕ್ ರಸ್ತೆ ಮಧ್ಯದ ಡಿವೈಡರ್ ನಲ್ಲಿ ಕಲ್ಲು ಮತ್ತು ಚೂರಿ ಹಿಡಿದು ಧಾಂದಲೆ ನಡೆಸುತ್ತಿದ್ದ. ಈ ವೇಳೆ ಯಾರೋ ಪೊಲೀಸರಿಗೆ ದೂರು ನೀಡಿದ್ದು ಸ್ಥಳಕ್ಕೆ ಬಂದ ಕೊಣಾಜೆ ಮತ್ತು ಟ್ರಾಫಿಕ್ ಪೊಲೀಸರು ಕಾರ್ಯಾಚರಣೆ ನಡೆಸಿ ಸಿನಿಮೀಯ ರೀತಿಯಲ್ಲಿ ಸಿದ್ಧೀಕನನ್ನ ಲಾಕ್ ಮಾಡಿ ಪೊಲೀಸ್ ವಾಹನಕ್ಕೆ ತಳ್ಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು