News Karnataka Kannada
Thursday, May 02 2024
ಮೈಸೂರು

ಬಂಡೀಪುರ: ಗಾಯಗೊಂಡು ಕುಂಟುತ್ತಾ ರಸ್ತೆ ದಾಟಿದ ಮರಿಯಾನೆ

Elephant crosses road limping after being injured
Photo Credit : News Kannada

ಬಂಡೀಪುರ: ಮರಿಯಾನೆಯೊಂದು ಗಾಯಗೊಂಡು ತಾಯಿಯೊಟ್ಟಿಗೆ ಕುಂಟುತ್ತಾ ಸಾಗಿದ ದೃಶ್ಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಊಟಿ ರಸ್ತೆಯಲ್ಲಿ ವಾಹನ ಸವಾರರ ಕ್ಯಾಮರದಲ್ಲಿ ಸೆರೆಯಾಗಿದೆ.

ತಾಯಿ ಆನೆ ಜೊತೆ ಹೆಜ್ಜೆ ಹಾಕಿದ ಮರಿಯಾನೆಯ ಎಡಗಾಲಿಗೆ ಪೆಟ್ಟಾಗಿದೆ. ಈ ದೃಶ್ಯವನ್ನು ಪ್ರವಾಸಿಗರೊಬ್ಬರು ಮೊಬೈಲ್‌ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.

ಎರಡು ದೊಡ್ಡ ಆನೆಗಳು ಹಾಗು ಇನ್ನೆರಡು ಮರಿಯಾನೆಗಳು ರಸ್ತೆ ದಾಟುತ್ತಿರುವುದನ್ನು ದೃಶ್ಯದಲ್ಲಿ ಕಾಣಬಹುದಾಗಿದ್ದು ಕಾಲು ನೋವಿನಿಂದ ಬಳಲುತ್ತಿರುವ ಮರಿಯಾನೆಗೆ ಮತ್ತೊಂದು ಆನೆ ನೆರವಿಗೆ ಬರುವುದು ದೃಶ್ಯದಲ್ಲಿದೆ.

ಮರಿಯಾನೆಗೆ ಸೂಕ್ತ ಚಿಕಿತ್ಸೆಯ ಅಗತ್ಯವಿದೆ ಎಂದು ಪರಿಸರಪ್ರೇಮಿಗಳು ಒತ್ತಾಯಿಸಿದ್ದು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಸಿಎಫ್ ರಮೇಶ್ ಕುಮಾರ್ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು