News Karnataka Kannada
Thursday, May 09 2024
ಕ್ರೈಮ್

ಮಕ್ಕಳ ರಕ್ಷಣೆಯ ಹೊಣೆ ಹೊತ್ತವನಿಂದ ಬಾಲಕಿ ಮೇಲೆ ಅತ್ಯಾಚಾರ: ಹೀನ ಕೃತ್ಯಕ್ಕೆ ಪತ್ನಿಯ ಸಾಥ್‌

Girl raped by man responsible for child protection, wife joins wife in heinous act
Photo Credit : IANS

ನವದೆಹಲಿ: ಉತ್ತರ ದಿಲ್ಲಿಯ ಬುರಾರಿಯಲ್ಲಿ 12ನೇ ತರಗತಿ ವಿದ್ಯಾರ್ಥಿನಿ ಮೇಲೆ ನಿರಂತರ ಅತ್ಯಾಚಾರ ನಡೆಸಿದ ಆರೋಪದಡಿ ದೆಹಲಿ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕನೊಬ್ಬನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಆರೋಪಿಯು 2020 ರಿಂದ 2021 ರ ನಡುವೆ ತನ್ನ ಸ್ನೇಹಿತನ ಅಪ್ರಾಪ್ತ ಮಗಳ ಮೇಲೆ ನಿರಂತರ ಅತ್ಯಾಚಾರ ನಡೆಸಿದ್ದ. ಈ ಕೃತ್ಯಕ್ಕೆ ಆತನ ಹೆಂಡತಿಯೂ ಸಹಕಾರ ಒದಗಿಸಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪತ್ನಿಗೆ ತನ್ನ ಪತಿ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸುತ್ತಿರುವುದು ತಿಳಿದಿದ್ದರೂ ಆಕೆಯೂ ಕೂಡ ವಿಷಯ ಮುಚ್ಚಿಟ್ಟು, ಅಕ್ರಮ ಕೃತ್ಯಕ್ಕೆ ಸಹಕಾರ ಒದಗಿಸುತ್ತಿದ್ದಳು. ಇದೇ ಕಾರಣದಿಂದ ಪೊಲೀಸರು ಆಕೆಯ ಮೇಲೂ ಎಫ್‌ಐಆರ್‌ನಲ್ಲಿ ಸೆಕ್ಷನ್ 120-ಬಿ (ಅಪರಾಧ ಪಿತೂರಿ) ಮೂಲಕ ಪ್ರಕರಣ ದಾಖಲಿಸಿದ್ದಾರೆ.

ಸಂತ್ರಸ್ತೆ 12ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಆರೋಪಿಯನ್ನು ಆಕೆ ಮೊದಲ ಬಾರಿಗೆ ಚರ್ಚ್‌ ನಲ್ಲಿ ಭೇಟಿಯಾಗಿದ್ದಳು. ತಂದೆ ನಿಧನರಾಗಿದ್ದ ಕಾರಣ ಬಾಲಕಿ ಖಿನ್ನತೆಗೆ ಒಳಗಾಗಿದ್ದು, ಇದನ್ನೆ ಬಳಸಿಕೊಂಡ ಆರೋಪಿ ಆಕೆಯೊಂದಿಗೆ ಸ್ನೇಹ ಬೆಳೆಸಿ, ಸಹಾಯ ಮಾಡುವ ನೆಪದಲ್ಲಿ ನಿರಂತರ ಅತ್ಯಾಚಾರ ನಡೆಸಿದ್ದ. ಇಂತಹ ಕೃತ್ಯ ನಡೆದಿರುವುದನ್ನು ಆರೋಪಿಯ ಹೆಂಡತಿ ಬಳಿ ಸಂತ್ರಸ್ತ ಬಾಲಕಿ ಹೇಳಿದಾಗ ಆಕೆ ಬಾಲಕಿಗೆ ರಕ್ಷಣೆ ಕೊಡುವ ಬದಲು ಚಿತ್ರಹಿಂಸೆ ನೀಡಿದ್ದಳು. ಅಲ್ಲದೆ ಆಕೆ ಗರ್ಭಿಣಿಯಾದಾಗ ಬಲವಂತವಾಗಿ ಗರ್ಭಪಾತದ ಮಾತ್ರೆಗಳನ್ನು ತಿನ್ನಿಸಿದ್ದಳು.

ಸದ್ಯ ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಆರೋಪಿ ಮತ್ತು ಆತನ ಪತ್ನಿ ವಿರುದ್ಧ ಐಪಿಸಿ ಸೆಕ್ಷನ್ 376(2)(ಎಫ್), 506, 509, 323, 313, 120ಬಿ, ಮತ್ತು 34 ಮತ್ತು ಪೋಕ್ಸೋ ಕಾಯ್ದೆಯ ಸೆಕ್ಷನ್ 6/21 ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು