News Karnataka Kannada
Friday, May 17 2024
ಮಂಗಳೂರು

ಎಲ್‌ಪಿಸಿ ಆರೋಪಿ ಬಂಗಾರ್ ಕೂಳಿ ಹನೀಫ್ ಬಂಧನ

LPC accused Bangar Kuli Haneef arrested
Photo Credit : News Kannada

ಮಂಗಳೂರು: ಬಂಗಾರ್ ಕೂಳಿ(ಬಂಗಾರದ ಹಲ್ಲು) ಖ್ಯಾತಿಯ ಹನೀಫ್ ಅಲಿಯಾಸ್ ಮೊಹಮ್ಮದ್ ಹನೀಫ್ ನನ್ನು ಪೊಲೀಸರು ಬಂಧಿಸಿದ್ದಾರೆ. 19 ವರ್ಷದ ಎಲ್‌ಪಿಸಿ ಆರೋಪಿ ‘ಬಂಗಾರ್ ಕೂಳಿ’ ಹನೀಫ್ ಕಳೆದ ಕೆಲವು ವರ್ಷಗಳಿಂದ ದರೋಡೆ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದವನಾಗಿದ್ದ. ತಲೆ ಮರೆಸಿಕೊಂಡು ತಿರುಗಾಡುತ್ತಿದ್ದ. ಇದೀಗ ಆತನನ್ನು ಸಿಸಿಬಿ ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಜಪೆ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಸಿಆರ್ 192/2004 U/S 395 R/W 34 IPC ಪ್ರಕಾರ ಪ್ರಕರಣ ದಾಖಲಾಗಿದೆ.

ಮುರಿದು ಬಿದ್ದ ಹಲ್ಲಿನ ಜಾಗದಲ್ಲಿ ಈಗ ಹನೀಫ ಚಿನ್ನದ ಹಲ್ಲನ್ನು ಹೊಂದಿದ್ದಾನೆ. ಹೀಗಾಗಿ ಈತ ‘ಬಂಗಾರ್ ಕೂಳಿ’ ಎಂದೇ ಖ್ಯಾತಿ ಪಡೆದಿದ್ದ. ಈತ ಮಂಗಳೂರಿನ ಮಲ್ಲೂರು ಉಲ್ಲಾಯಬೆಟ್ಟು ಮೂಲದವನು ಎಂದು ತಿಳಿದು ಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು