News Karnataka Kannada
Tuesday, April 30 2024
ಮಂಗಳೂರು

ಮಂಗಳೂರು: ಕೆಐಓಸಿ ಎಲ್ ಲಿಮಿಟೆಡ್ ವತಿಯಿಂದ ಎರಡು ದಿನದ ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿ

A two-day state-level chess tournament organised by KIOCL Ltd.
Photo Credit : By Author

ಮಂಗಳೂರು: ಭಾರತ ಸರ್ಕಾರದ ಉದ್ಯಮ ವಾಗಿರುವ ಕೆಐಓಸಿ ಎಲ್ ಲಿಮಿಟೆಡ್ ಕಂಪನಿ ಯು “5ನೇ ಕುದುರೆಮುಖ ಟ್ರೋಫಿ” ಎರಡು ದಿನದ ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿಯನ್ನು ಕಾವೂರು ಟೌನ್ ಶಿಪ್ ನ ನೆಹರು ಭವನದಲ್ಲಿ ಡಿಸೆಂಬರ್ 10 ಮತ್ತು 11 ರಂದು ಆಯೋಜಿಸಿತ್ತು.

ರಾಷ್ಟ್ರಮಟ್ಟದ ಚೆಸ್ ಪಂದ್ಯಾವಳಿಯನ್ನು 2022 ರ ಡಿಸೆಂಬರ್ 10 ರಂದು ದೀಪ ಬೆಳಗಿಸಿ, ಟ್ರೋಫಿಯನ್ನು ಅನಾವರಣಗೊಳಿಸುವ ಡೆಮೊ ಚೆಸ್ ಬೋರ್ಡ್‌ನಲ್ಲಿ ಪ್ಯಾದೆಗಳನ್ನು ಚಲಿಸುವುದರ ಮೂಲಕ ಮಂಗಳೂರು ಉತ್ತರ ವಲಯದ ಎಂ ಎಲ್ ಎ ಮಾನ್ಯ ಡಾಕ್ಟರ್ ವಯ್ ಭಾರತ್ ಶೆಟ್ಟಿ ರವರು ಉದ್ಘಾಟಿಸಿದರು.

ಎರಡನೇ ದಿನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕೆಐಓಸಿ ಎಲ್ ಕಂಪನಿಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ  ಟಿ ಸಾಮೀನಾಥನ್, ಹಣಕಾಸು ನಿರ್ದೇಶಕರಾದ  ಎಸ್ ಕೆ ಗೋರೈ, ಉತ್ಪಾದನೆ ಮತ್ತು ಯೋಜನೆಗಳ ನಿರ್ದೇಶಕರಾದ  ಕೆ. ವಿ ಭಾಸ್ಕರ ರೆಡ್ಡಿ, ಉತ್ಪಾದನೆ ಮತ್ತು ಯೋಜನೆಗಳ ಮುಖ್ಯ ಪ್ರಧಾನ ವ್ಯವಸ್ಥಾಪಕರಾದ  ಜಿ‌ವಿ ಕಿರಣ್, ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ರಾಮಕೃಷ್ಣ ರಾವ್ ಹೆಚ. ಮತ್ತು, ವೇದಿಕೆಯಲ್ಲಿ ಆಸೀನರಾಗಿದ್ದರು. ದಕ್ಷಿಣ ಕನ್ನಡ ಚೆಸ್ ಅಸೋಸಿಯೇಷನ್ ಪ್ರೆಸಿಡೆಂಟ್  ರಮೇಶ್ ಖೋಟೆಯವರು ಉಪಸ್ಥಿತರಿದ್ದರು.

ಕೆ ಐ ಓಸಿ ಎಲ್ ಸೀನಿಯರ್ ಮ್ಯಾನೇಜರ್(ಮಾನವ ಸಂಪನ್ಮೂಲ ಹಾಗೂ ಸಮನ್ವಯ ) ಹಾಗೂ ಚೆಸ್ ಕಮಿಟಿ ಸಂಯೋಜಕರಾದ ಎಸ್ ಮುರ್ಗೆಶ್ ರವರು ಪಂದ್ಯಾವಳಿಯ ಆಯೋಜನೆಯ ಬಗ್ಗೆ ವಿವರಿಸಿದರು. ಅಂತರಾಷ್ಟ್ರೀಯ ಆರ್ಬಿಟರ್ ಬಿ ಎಚ್ ವಸಂತ್,ಡಿಪ್ಯೂಟಿ ಆರ್ಬಿಟರ್ ಗಳು  ಸಾಕ್ಷಾತ್,ಉಮನಾಥ್ ಕಾಪು, ಸೌಂದರ್ಯ, ಬಾಬು ಪೂಜಾರಿ, ನಯನ್ ಕಾರ್ಕಳ ಪಂದ್ಯಾವಳಿಯನ್ನು ನಡೆಸಿ ಕೊಟ್ಟರು.

ಎರಡು ದಿನದ ಪಂದ್ಯಾವಳಿಯಲ್ಲಿ ತಮಿಳುನಾಡು, ಗೋವ, ಕರ್ನಾಟಕ, ಕೇರಳ, ರಾಜಸ್ತಾನ್, ಮಧ್ಯ ಪ್ರದೇಶ ಉತ್ತರ ಪ್ರದೇಶ ಆದಿಯಾಗಿ, ದೇಶದ ವಿವಿಧ ರಾಜ್ಯಗಳಿಂದ, ನಾಲ್ಕು ವರ್ಷದ ಬಾಲಕ ಹಾಗೂ 83 ವರ್ಷದ ವೃದ್ಧರನ್ನು ಒಳಗೊಂಡು ಒಟ್ಟು 416 ಅಭ್ಯರ್ಥಿಗಳು ಪಾಲ್ಗೊಂಡಿದ್ದರು.

ಒಟ್ಟು 184 ಟ್ರೋಫಿ ಹಾಗೂ ರೂ. 3,00,000/- ಮೊತ್ತದ ನಗದು ಬಹುಮಾನವನ್ನು 7, 9, 11, 13, 15 ವರ್ಷದೊಳಗಿನ ವಯೋಮಾನದ ಮಕ್ಕಳಿಗೆ , ಹುಡುಗ ಹುಡುಗಿಯರಿಗೆ ಪ್ರತ್ಯೇಕವಾಗಿ ಬಹುಮಾನ ಮತ್ತು ಟ್ರೋಫಿ ವಿತರಿಸಲಾಯಿತು. “ಕಿರಿಯ ಆಟಗಾರ” ವಿಭಾಗ, ದಕ್ಷಿಣ ಕನ್ನಡ ಆಟಗಾರ ವಿಭಾಗ, ಹಿರಿಯ ಆಟಗಾರ, ವಿಕಲಚೇತನ ಹಾಗೂ ಮುಕ್ತ ವರ್ಗ ವಿಭಾಗದಲ್ಲಿ ಅನೇಕ ಬಹುಮಾನಗಳನ್ನು ವಿತರಿಸಲಾಯಿತು. ಶ್ರೇಷ್ಠ ಆಟಗಾರ ಹಾಗೂ ಪಂದ್ಯದ ಚಾಂಪಿಯನ್ ಶಿಪ್ ಟ್ರೋಫಿ ಹಾಗೂ ನಗದು ಬಹುಮಾನವನ್ನು ಗೋವದ  ಋತ್ವಿಜ್ ಪರಾಬ್ ಹಾಗೂ 1  ರನ್ನರ್ ಅಪ್ ತಮಿಳನಾಡಿನ  ಮಣಿಗಂಡನ್ನ್ ಎಸ್ ಮತ್ತು 2  ರನ್ನರ್ ಅಪ್ ಕರ್ನಾಟಕದ ಧನುಷ್ ರಾಮ್ ಎಂ ಪಡೆದುಕೊಂಡರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು