News Karnataka Kannada
Tuesday, April 30 2024
ವಿದೇಶ

ನೇಪಾಳದಲ್ಲಿ ಪ್ರವಾಹಕ್ಕೆ ಸಿಲುಕಿ 41 ಮಂದಿ ಸಾವು

At least 41 killed in floods in Nepal
Photo Credit : IANS

ಕಠ್ಮಂಡು: ನೇಪಾಳದಲ್ಲಿ ಕಳೆದ ಎರಡು ತಿಂಗಳಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 41 ಕ್ಕೆ ಏರಿದೆ ಎಂದು ಅಲ್ಲಿನ ಗೃಹ ಸಚಿವಾಲಯ ತಿಳಿಸಿದೆ.

77 ಜಿಲ್ಲೆಗಳ ಪೈಕಿ 50 ಜಿಲ್ಲೆಗಳಲ್ಲಿ ಭಾರಿ ಹಾನಿ ಸಂಭವಿಸಿದೆ, ಮಳೆ ಸಂಬಂಧಿತ ಘಟನೆಗಳಲ್ಲಿ ಕನಿಷ್ಠ 55 ಜನರು ಗಂಭೀರ ಗಾಯಗೊಂಡಿದ್ದಾರೆ ಎಂದು ವಿಪತ್ತು ಮತ್ತು ಸಂಘರ್ಷ ನಿರ್ವಹಣಾ ವಿಭಾಗದ ಮುಖ್ಯಸ್ಥ, ಜಂಟಿ ಕಾರ್ಯದರ್ಶಿ ಮಹಾದೇವ ಪಂಥ್ ತಿಳಿಸಿದ್ದಾರೆ.

ಸಂಖುವಸಭಾ, ತಪ್ಲೆಜಂಗ್, ಪಂಚತಾರ್, ಡೋಲಾಖಾ, ಮಕವಾನ್‌ಪುರ್ ಮತ್ತು ಮಹೋತ್ತರಿ ಸೇರಿದಂತೆ ಆರು ಜಿಲ್ಲೆಗಳ ಹಲವರು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. 130 ಮನೆಗಳಿಗೆ ಸಂಪೂರ್ಣ ಹಾನಿಯಾಗಿದೆ. ಪಂಚತಾರ್, ಸಂಖುವಸಭಾ ಮತ್ತು ತಾಪ್ಲೆಜಂಗ್ ಸೇರಿದಂತೆ ನೇಪಾಳದ ಪೂರ್ವ ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಜೀವ ಮತ್ತು ಆಸ್ತಿ ನಷ್ಟ ವರದಿಯಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು