News Karnataka Kannada
Monday, April 29 2024
ಮಂಗಳೂರು

ಪುತ್ತೂರಲ್ಲಿ ಮತ್ತೆ ಹಿಂದುತ್ವದ ಲೋಕಲ್‌ ಫೈಟ್‌: ಪುತ್ತಿಲ ಪರಿವಾರ ವರ್ಸಸ್‌ ಬಿಜೆಪಿ

Local fight of Hindutva in Puttur again: Puttila Parivar vs BJP
Photo Credit : News Kannada

ಪುತ್ತೂರು: ವಿಧಾನಸಭಾ ಚುನಾವಣೆಯ ಬಳಿಕ ಹಿಂದುತ್ವದ ಶಕ್ತಿ ಕೇಂದ್ರ ಪುತ್ತೂರಿನಲ್ಲಿ ಮತ್ತೆ ಹಿಂದುತ್ವದ ಫೈಟ್ ನಡೆದಿದೆ. ಬಿಜೆಪಿ ಮತ್ತು‌ ಅರುಣ್ ಪುತ್ತಿಲ ಪರಿವಾರದ ನಡುವೆ ರಾಜಕೀಯ ಫೈಟ್ ನಡೆಯುತ್ತಿದ್ದು, ವಿಧಾನಸಭಾ ಚುನಾವಣೆಯ ಬಳಿಕ ಇದೀಗ ಪುತ್ತಿಲ ಪರಿವಾರ ಬೆಂಬಲಿತರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿಯೂ ಸ್ಪರ್ಧೆ ಮಾಡುತ್ತಿದ್ದು, ಬಿಜೆಪಿ ಮುಖಂಡರಿಗೆ ದೊಡ್ಡ ತಲೆನೋವು ತಂದಿದೆ.

ಪುತ್ತೂರು ತಾಲೂಕಿನ ನಿಡ್ಪಳ್ಳಿ ಮತ್ತು ಆರ್ಯಾಪು ಗ್ರಾಮಪಂಚಾಯತ್ ನ ತಲಾ ಒಂದು ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಪುತ್ತಿಲ ಪರಿವಾರ ಬೆಂಬಲಿತರು ಸ್ಪರ್ಧೆ ಮಾಡುತಿದ್ದಾರೆ. ಜುಲೈ 26ರಂದು ಚುನಾವಣೆ ನಡೆಯಲಿದ್ದು, ಮತ್ತೆ ಬಿಜೆಪಿಗೆ ಪರ್ಯಾಯವಾಗಿ ಚುನಾವಣಾ ಕಣಕ್ಕೆ ಪುತ್ತಿಲ ಪರಿವಾರ ಸದಸ್ಯರು ಇಳಿದಿದ್ದಾರೆ. ಎರಡೂ‌ ಸ್ಥಾನಗಳಿಗೆ ತಮ್ಮ ಅಭ್ಯರ್ಥಿಯನ್ನು ಪುತ್ತಿಲ ಪರಿವಾರದವರು ನಿಲ್ಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪುತ್ತಿಲ ಪರಿವಾರ ಮುಖಂಡರು, ಕಾರ್ಯಕರ್ತರ ಒತ್ತಾಯದ ಮೇರೆಗೆ ಚುನಾವಣೆಗೆ ಸ್ಪರ್ಧೆ ನಡೆಯುತ್ತಿದೆ.  ಹಿಂದುತ್ವಕ್ಕಾಗಿ ಹೋರಾಡಿದ ಅರುಣ್ ಕುಮಾರ್‌ ಪುತ್ತಿಲ ಅವರಿಗೆ ಈ ಹಿಂದೆಯೂ ಬಿಜೆಪಿ ಅನ್ಯಾಯ ಮಾಡಿದೆ. ಮಾಜಿ ಶಾಸಕ ಸಂಜೀವ ಮಠಂದೂರು ಹಿಂದೆ ಬಿಜೆಪಿ‌ ಜಿಲ್ಲಾಧ್ಯಕ್ಷ ಆಗಿದ್ದಾಗಲೂ ಅರುಣ್ ಪುತ್ತಿಲ ಬೆಂಬಲಿಗರು ಅವರನ್ನು ಬೆಂಬಲಿಸಿದ್ದರು. ಅಲ್ಲದೆ ಸಂಜೀವ ಮಠಂದೂರು ಶಾಸಕ‌ ಸ್ಥಾನಕ್ಕೆ ಸ್ಪರ್ಧಿಸಿದಾಗಲೂ ಅವರಿಗೆ ಬೆಂಬಲ ನೀಡಿದ್ದರು. ಆದರೆ ಅರುಣ್ ಪುತ್ತಿಲರಿಗೆ ಪಕ್ಷದಲ್ಲಿ ಈವರೆಗೂ ಸ್ಥಾನಮಾನ ನೀಡಿಲ್ಲ. ಜವಾಬ್ದಾರಿ ನೀಡುವಂತಹ‌ ಮನೋಭಾವವೂ ಅವರಲ್ಲಿ‌ ಕಾಣುತ್ತಿಲ್ಲ. ಸ್ಥಾನಮಾನ ಸಿಗುವವರೆಗೂ ಇದೇ ರೀತಿ ಚುನಾವಣೆಗೆ ಸ್ಪರ್ಧಿಸಲು ತೀರ್ಮಾನಿಸಲಾಗಿದೆ.

ಇದು ಬಿಜೆಪಿಗೆ ಸಡ್ಡು ಹೊಡೆಯುವ, ಬಿಜೆಪಿಗೆ ಪರ್ಯಾಯವಾಗಿ ಸ್ಪರ್ಧೆಯಲ್ಲ. ಆದರೆ ನಮ್ಮ ಗುರಿ ಹಿಂದುತ್ವದ ಆಧಾರದಲ್ಲಿ ಕೆಲಸ ಮಾಡಬೇಕು ಎಂಬುದು. ಕಾರ್ಯಕರ್ತರ ಆಶಯಕ್ಕೆ ಬೆಲೆಕೊಡಬೇಕು ನಮ್ಮ ಒತ್ತಾಯ. ಅದರ ಹೊರತು ಬಿಜೆಪಿಗೆ ಪರ್ಯಾಯವಾಗಿ ನಮ್ಮ ಮುಖಂಡರು ಸ್ಪರ್ಧೆ ಮಾಡುತ್ತಿಲ್ಲ ಎಂದು ಪರಿವಾರ ಮುಖಂಡರು ಹೇಳಿದ್ದಾರೆ.

ಬಿಜೆಪಿಯಿಂದಲೂ ಸ್ಪರ್ಧೆ: ಇದೇ ನಿಡ್ಪಳ್ಳಿ ಮತ್ತು ಆರ್ಯಾಪು ಗ್ರಾಪಂ ಚುನಾವಣೆಯಲ್ಲಿ ಎರಡೂ ಸ್ಥಾನಗಳಿಗೆ ಬಿಜೆಪಿ ಬೆಂಬಲಿತರೂ ಸ್ಪರ್ಧೆ ಮಾಡಲಿದ್ದಾರೆ. ಪುತ್ತೂರು ತಾಲೂಕಿನ 22 ಪಂಚಾಯತ್ ಗಳಲ್ಲಿ 20 ಪಂಚಾಯತ್ ನಲ್ಲಿ ಬಿಜೆಪಿ ಕೈಯಲ್ಲಿದೆ. ತೆರವಾದ ಎರಡೂ ಸ್ಥಾನಗಳಲ್ಲೂ ಬಿಜೆಪಿ ಸದಸ್ಯರಿದ್ದರು. ಆ ಕಾರಣದಿಂದ ಬಿಜೆಪಿ ಎರಡೂ ಸ್ಥಾನಗಳಲ್ಲೂ ಜಯಗಳಿಸಲಿದೆ.

ಪಕ್ಷೇತರ, ಕಾಂಗ್ರೆಸ್ ಸ್ಪರ್ಧೆಯಿಂದ ಬಿಜೆಪಿಗೆ ಯಾವುದೇ ಸಮಸ್ಯೆಯಿಲ್ಲ. ಬಿಜೆಪಿ ಗೆಲ್ಲುವುದು ನಿಶ್ವಿತ ಎಂಬುದು ಬಿಜೆಪಿ ಮುಖಂಡರ ವಿಶ್ವಾಸ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು