News Karnataka Kannada
Monday, May 20 2024
ಮಂಗಳೂರು

ಕದ್ರಿ: ಹಿಂದೂ ರುದ್ರಭೂಮಿಯ ತಡೆಗೋಡೆ ನಿರ್ಮಿಸುವ ಕಾಮಗಾರಿಗೆ ಚಾಲನೆ

Kadri: Work on construction of retaining wall of Hindu burial ground begins
Photo Credit : News Kannada

ಮಂಗಳೂರು: ಮಂಗಳೂರು ಮಹಾನಗರಪಾಲಿಕೆಯ ಕದ್ರಿ ವಾರ್ಡಿನ ಕದ್ರಿ ಹಿಂದೂ ರುದ್ರಭೂಮಿಗೆ 1 ಕೋಟಿ ರೂ ವೆಚ್ಚದಲ್ಲಿ ತಡೆಗೋಡೆ ನಿರ್ಮಿಸುವ ಕಾಮಗಾರಿಗೆ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್‌ ಚಾಲನೆ ನೀಡಿದರು.

ರುದ್ರಭೂಮಿಯ ಮೇಲ್ಭಾಗದಲ್ಲಿರುವ ಶ್ರೀ ಮಲರಾಯ ದೇವಸ್ಥಾನದ ದರೆ ಕುಸಿಯುವ ಆತಂಕವಿದ್ದು, ಅದನ್ನು ರಕ್ಷಿಸಲು ಈ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ. ಈ ಕಾಮಗಾರಿ ಪೂರ್ಣಗೊಂಡ ಬಳಿಕ ಮಲರಾಯ ದೇವಸ್ಥಾನದ ಭೂಭಾಗ ಸುಭದ್ರವಾಗಲಿದ್ದು, ರುದ್ರಭೂಮಿಯ ಜಾಗವೂ ಸುರಕ್ಷಿತವಾಗಲಿದೆ ಎಂದು ಶಾಸಕರು ಈ ಸಂದರ್ಭದಲ್ಲಿ ಹೇಳಿದರು.

ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಜಯಾನಂದ ಅಂಚನ್, ಉಪಮೇಯರ್ ಪೂರ್ಣಿಮಾ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶಕಿಲಾ ಕಾವಾ, ಕಿಶೋರ್ ಕೊಟ್ಟಾರಿ,ಸ್ಥಳೀಯ ಕಾರ್ಪೋರೇಟರ್ ಕದ್ರಿ ಮನೋಹರ್ ಶೆಟ್ಟಿ, ಪ್ರಮುಖರಾದ ಎ.ಜೆ ಶೆಟ್ಟಿ, ಎಚ್.ಕೆ ಪುರುಷೋತ್ತಮ, ರಾಜೇಶ್, ಮನೋಹರ್ ಸುವರ್ಣ, ರವೀಂದ್ರನಾಥ್ ಶೆಟ್ಟಿ, ತಾರಾನಾಥ್ ಶೆಟ್ಟಿ, ದಿನೇಶ್ ದೇವಾಡಿಗ, ನಿರಂಜನ್ ಸಾಲ್ಯಾನ್, ವೆಂಕಟೇಶ್, ಸುರೇಶ್ ದೇವಾಡಿಗ ಕಂಬ್ಳ, ವಸಂತ್ ಜೆ ಪೂಜಾರಿ, ನಾಗೇಶ್ ಕದ್ರಿ, ಗಾಡ್ವಿನ್, ವಸಂತ್,ಮಹೇಶ್ ಪಾಂಡ್ಯ, ಹೇಮಚಂದ್ರ, ರಾಘವೇಂದ್ರ, ಭರತ್, ನರೇಶ್ ರಾವ್, ಪ್ರದೀಪ್ ಆಚಾರ್ಯ, ಹರೀಶ್ ರಾವ್, ರವಿ ಕೀರ್ತಿ, ಅನಿಲ್ ಕದ್ರಿ, ಸಚಿನ್ ಕದ್ರಿ, ಸಹನ್ ಕದ್ರಿ, ಜಗದೀಶ್ ಕದ್ರಿ, ಅವಿನಾಶ್ ರೈ, ಕುಶಾಲ್ ನಾಥ್ ಶೆಟ್ಟಿ, ನಾಥು ಜೋಗಿ ಮುಂತಾದವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು