ಮಂಗಳೂರು: ಬೆಂಗಳೂರಿನಿಂದ ಮಂಗಳೂರಿಗೆ ಬಂದ ಇಂಡಿಗೋ ವಿಮಾನ ಲ್ಯಾಂಡಿಂಗ್ ವೇಳೆ ತೊಡಕು ಉಂಟಾದ ಘಟನೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಬೆಂಗಳೂರಿನಿಂದ ಮಂಗಳೂರಿಗೆ ಬಂದಿದ್ದ ಇಂಡಿಗೋ 6E6858 ವಿಮಾನ ಲ್ಯಾಂಡಿಂಗ್ ಆಗುವ ವೇಳೆ ತೊಂದರೆ ಉಂಟಾಗಿದೆ. ಈ ವೇಳೆ ಮತ್ತೊಮ್ಮೆ ವಿಮಾನವನ್ನು ಟೇಕ್ ಆಫ್ ಮಾಡಿ ಪುನಃ ಲ್ಯಾಂಡ್ ಮಾಡಲಾಗಿದೆ. ಸದ್ಯ ಪ್ರಯಾಣಿಕರು ಸುರಕ್ಷಿತವಾಗಿ ಬಂದಿಳಿದಿದ್ದಾರೆ.