News Karnataka Kannada
Thursday, May 02 2024
ದೆಹಲಿ

ಅನಿಲ ದರ ನಿಗದಿಗೆ ಹೊಸ ಮಾನದಂಡ : ಕಡಿಮೆಯಾಗಲಿದೆ ಗ್ಯಾಸ್‌ ಬೆಲೆ

Bengaluru: A cylinder for commercial use will be reduced to a small extent from today
Photo Credit : News Kannada

ಹೊಸದಿಲ್ಲಿ : ನೈಸರ್ಗಿಕ ಅನಿಲದ ದರ ನಿಗದಿಗಪಡಿಸುವ ಹೊಸ ಮಾನದಂಡ ಜಾರಿ ಮಾಡಲು ಕೇಂದ್ರ ಒಪ್ಪಿಗೆ ನೀಡಿದೆ. ಈ ಮಾನದಂಡ ಜಾರಿಗೆ ಬಂದ ಬಳಿಕ ಗೃಹ ಬಳಕೆಯ ಪಿಎನ್‌ಜಿ ಮತ್ತು ವಾಹನಗಳಿಗೆ ಬಳಸುವ ಸಿಎನ್‌ಜಿ ತೈಲದ ದರ ಶೇ. 10ರ ವರೆಗೆ ಕಡಿಮೆಯಾಗಲಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ನಾಯಕತ್ವದಲ್ಲಿ ಹಲವು ಮಹತ್ವದ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಗುವ ಬೆಲೆ ಏರಿಳಿತಗಳಿಂದ ಭಾರತದ ಗ್ರಾಹಕರನ್ನು ರಕ್ಷಿಸಲು ಇದು ನೆರವಾಗಲಿದೆ. ಹೊಸ ಮಾರ್ಗದರ್ಶಿ ಸೂತ್ರಗಳಿಗೆ ಕೇಂದ್ರ ಸಚಿವ ಸಂಪುಟದ ಸಹಮತ ಸಿಕ್ಕಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್‌ದೀಪ್ ಪುರಿ ಹೇಳಿದ್ದಾರೆ.

ಸಿಎನ್‌ಜಿ ಮತ್ತು ಪಿಎನ್‌ಜಿಗೆ ಇಂಡಿಯನ್ ಕ್ರೂಡ್ ಬ್ಯಾಸ್ಕೆಟ್‌ನ (ಭಾರತದ ಕಚ್ಚಾತೈಲ ಆಮದು ದರದ ಸರಾಸರಿ) ಶೇ.10ರಷ್ಟು (ಕಡಿಮೆ) ದರ ನಿಗದಿಪಡಿಸಲಾಗುವುದು. ಈ ದರವನ್ನು ತಿಂಗಳಿಗೆ ಒಮ್ಮೆ ಪರಿಷ್ಕರಿಸಲಾಗುವುದು. ಈ ಮೂಲಕ ದರ ನಿಗದಿ ಪ್ರಕ್ರಿಯೆಯಲ್ಲಿ ಸ್ಥಿರತೆ ಬರಲಿದೆ. ಅದರಜತೆಗೆ ಅನಿಲ ಉತ್ಪಾದಕರಿಗೆ ಬೆಲೆ ಹೊಯ್ದಾಟದಿಂದ ರಕ್ಷಣೆಯೂ ಸಿಗಲಿದೆ ಎಂದು ಹೇಳಿದ್ದಾರೆ.

ಪ್ರಸ್ತುತ ಭಾರತದಲ್ಲಿ ಉತ್ಪತ್ತಿಯಾಗುವ ನೈಸರ್ಗಿಕ ಅನಿಲ ದರ ನಿಗದಿಪಡಿಸಲು ಹೆನ್ರಿ ಹಬ್, ಅಲ್‌ಬೆನಾ, ನ್ಯಾಷನಲ್ ಬ್ಯಾಲೆನ್ಸಿಂಗ್ ಪಾಯಿಂಟ್ (ಬ್ರಿಟನ್) ಮತ್ತು ರಷ್ಯಾದ ಸರಾಸರಿ ದರಗಳನ್ನು ಪರಿಗಣಿಸಲಾಗುತ್ತಿದೆ. ಆರು ತಿಂಗಳಿಗೆ ಒಮ್ಮೆ ದರ ಪರಿಷ್ಕರಿಸಲಾಗುತ್ತಿದೆ. ಈ ನಾಲ್ಕು ಅನಿಲ ದರಗಳನ್ನು ಲೆಕ್ಕಹಾಕಿ ದೇಸಿ ದರ ನಿಗದಿಪಡಿಸುವ ಪ್ರಕ್ರಿಯೆ ದೊಡ್ಡ ಸರ್ಕಸ್ ಎನಿಸುತ್ತಿತ್ತು. ಈ ವ್ಯವಸ್ಥೆ ಬದಲಿಸಬೇಕೆಂಬ ಒತ್ತಾಯ ಬಹುದಿನಗಳಿಂದ ಕೇಳಿಬರುತ್ತಿತ್ತು.

ಪರಿಷ್ಕೃತ ಮಾರ್ಗಸೂಚಿಗಳ ಅನ್ವಯ ನೈಸರ್ಗಿಕ ಅನಿಲ ದರಗಳನ್ನು ಕಚ್ಚಾತೈಲದ ದರಕ್ಕೆ ಸಂಯೋಜಿಸಲಾಗಿದೆ. ಹಲವು ದೇಶಗಳಲ್ಲಿ ಈ ವ್ಯವಸ್ಥೆ ಈಗಾಗಲೇ ಜಾರಿಗೆ ಬಂದಿದೆ. ನಮ್ಮ ಬಳಕೆದಾರರಿಗೆ ಇದರಿಂದ ಅನುಕೂಲ, ಜಾಗತಿಕ ವಹಿವಾಟಿಗೂ ಅನುಕೂಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು