News Karnataka Kannada
Thursday, May 02 2024
ಮಂಗಳೂರು

ಬೆಂಗಳೂರು-ಮಂಗಳೂರು ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್: ವಾರಕ್ಕೆ 6ದಿನ ಮೈಸೂರು ಮಾರ್ಗವಾಗಿ ರೈಲು

Good news for Bengaluru-Mangaluru railway passengers: Train via Mysuru 6 days a week
Photo Credit :

ಮಂಗಳೂರು: ಬೆಂಗಳೂರು ಮಂಗಳೂರು ರೈಲ್ವೆ ಪ್ರಯಾಣಿಕರಿಗೆ ಕೇಂದ್ರ ರೈಲ್ವೆ ಸಚಿವಾಲಯ ಸಂತೋಷದ ಸುದ್ದಿ ನೀಡಿವೆ , ವಾರದಲ್ಲಿ 3ದಿನ ಸಂಚರಿಸುತ್ತಿದ್ದ ಮೈಸೂರು ಮಾರ್ಗವಾಗಿ ಬೆಂಗಳೂರು ಮಂಗಳೂರು ರೈಲು ಸೇವೆಯನ್ನು 6ದಿನಗಳಿಗೆ ಹೆಚ್ಚಿಸುವಂತೆ ನೈರುತ್ಯ ರೈಲ್ವೆ ಪ್ರಸ್ತಾಪನೆಗೆ ಕೇಂದ್ರ ರೈಲ್ವೆ ಸಚಿವಾಲಯ ಅನುಮೋದನೆ ನೀಡಿದೆ .ಇನ್ನು ಕೆಲವೇ ದಿನಗಳಲ್ಲಿ ವಾರದಲ್ಲಿ 6ದಿನ ಬೆಂಗಳೂರು ಮಂಗಳೂರು ರೈಲು ಮೈಸೂರು ಮಾರ್ಗವಾಗಿ ಸಂಚರಿಸಲಿವೆ.

ಹೊಸ ರೈಲು ಸಂಚಾರವನ್ನು ಹೆಚ್ಚಿಸಲು ನೈರುತ್ಯ ರೈಲ್ವೆ ಜುಲೈ 27 ರಂದು ಬರೆದಿದ್ದ ಪತ್ರಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ರೈಲ್ವೆ ಸಚಿವಾಲಯ ಆಗಸ್ಟ್ 17 ರಂದು ರೈಲು ಸಂಖ್ಯೆ ೦೬೫೪೭|548ರ ಬೆಂಗಳೂರು ಮಂಗಳೂರು ಎಕ್ಸ್ ಪ್ರೆಸ್ ಸೇವೆಗಳನ್ನು ಕ್ರಮಬದ್ಧಗೊಳಿಸುವ ಮೂಲಕ ರೈಲು ಸಂಚಾರವನ್ನು ವಾರಕ್ಕೆ 6ದಿನ ಗಳವರೆಗೆ ಹೆಚ್ಚಿಸುವ ಪ್ರಸ್ತಾಪವನ್ನು ಅನುಮೋದಿಸಿದೆ ಎಂದು ತಿಳಿಸಿದೆ.

ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಕಲೇಶಪುರ ತಾಲ್ಲೂಕಿನ ಹಲವು ಭಾಗದಲ್ಲಿ ಪದೇಪದೆ ಭೂಕುಸಿತ ಸಂಭವಿಸಿ ರಸ್ತೆ ಸಾರಿಗೆಗೆ ತೀವ್ರ ಅಡಚಣೆಯಾದ ಕಾರಣ ಪ್ರಯಾಣಿಕರ ಬೇಡಿಕೆ ಮೇರೆಗೆ ವಿಶೇಷ ರೈಲನ್ನು ಇತ್ತೀಚೆಗೆ ಪರಿಚಯಿಸಲಾಯಿತು . ಈ ಸೇವೆಯನ್ನು ಕಾರವಾರ ಅಥವಾ ವಾಸ್ಕೋಡಗಾಮ ತನಕ ವಿಸ್ತರಿಸಬೇಕೆಂಬ ಬೇಡಿಕೆಯೂ ಹೆಚ್ಚಾಗುತ್ತಿದೆ , ಮೈಸೂರು ಸಂಸದ ಪ್ರತಾಪ್ ಸಿಂಹ ಈಗ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದು ಕಾರವಾರಕ್ಕೆ ವಿಸ್ತರಣೆ ಮಾಡುವಂತೆ ಕೋರಿದ್ದಾರೆ ಮೈಸೂರು ಮತ್ತು ಗೋವಾದ 2ಜನಪ್ರಿಯ ಪ್ರವಾಸಿ ತಾಣಗಳ ನಡುವೆ ಸಂಪರ್ಕವನ್ನು ಒದಗಿಸುವಂತೆ ಮನವಿ ಸಲ್ಲಿಸಿದ್ದಾರೆ.

ಮೈಸೂರು ಗ್ರಾಹಕರ ಪರಿಷತ್ತಿನ ಯೋಗೇಂದ್ರ ಸ್ವಾಮಿ ವಾಸ್ಕೋಡಗಾಮ ತನಕ ರೈಲು ಸೇವೆ ವಿಸ್ತರಣೆಯಾದರೆ ನೈರುತ್ಯ ರೈಲ್ವೆ ಮತ್ತು ಪ್ರಯಾಣಿಸುವ ಸಾರ್ವಜನಿಕರಿಗೆ ಗೆಲುವು ಸಿಕ್ಕಂತಾಗುತ್ತದೆ ಎಂದು ಹೇಳಿದರು.

ಹಿಂದೆ ಕೊಂಕಣ ರೈಲ್ವೆ ಕಾರ್ಪೋರೇಶನ್ ಲಿಮಿಟೆಡ್ ಮೈಸೂರು ಮೂಲಕ ರೈಲು ಸಂಖ್ಯೆ ೧೬೫೨೩ |524ಬೆಂಗಳೂರು ಕಾರವಾರ ರಾತ್ರಿ ಎಕ್ಸ್ ಪ್ರೆಸ್ ರೈಲನ್ನು 2ವರ್ಷ ರದ್ದುಗೊಳಿಸಿದ ನಂತರ ಉಡುಪಿ , ಕೊಲ್ಲೂರು , ಮುರುಡೇಶ್ವರ , ಗೋಕರ್ಣ ಸೇರಿದಂತೆ ಕರಾವಳಿಯ ಇತರ ಭಾಗಗಳೊಂದಿಗೆ ಮೈಸೂರು ನೇರ ಸಂಪರ್ಕವನ್ನು ಹೊಂದಿಲ್ಲ.

ಅಗತ್ಯವಿದ್ದರೆ ನೈರುತ್ತ್ಯ ವಿಭಾಗದ ರೈಲು ಸಂಖ್ಯೆ ೧೬೫೮೫ |586ಮತ್ತು ರೈಲು ಸಂಖ್ಯೆ ೧೭೩೯೦|310ಯಶವಂತಪುರ ವಾಸ್ಕೋ ಡ ಗಾಮಾ ಯಶವಂತಪುರ ಡೈಲಿ ಎಕ್ಸ್ಪ್ರೆಸ್ ನಡುವೆ ರೇಕ್ ಹಂಚಿಕೆಯನ್ನು ಮಾಡಬಹುದು.

ವಾಸ್ಕೋ ಯಶವಂತಪುರ ಎಕ್ಸ್ ಪ್ರೆಸ್ ನ ಬೆಳಿಗ್ಗೆ ಐದರಿಂದ ರಾತ್ರಿ ಹತ್ತು ರವರೆಗೆ ನಿಷ್ಕ್ರಿಯವಾಗಿರುತ್ತದೆ ಮತ್ತು ಅದನ್ನು ಮೈಸೂರು ಸೇವೆಗೆ ಬಳಸಿಕೊಳ್ಳಬಹುದು ವಿಸ್ತರಣೆಯು 6ದಿನಗಳ ಬದಲಿಗೆ ವಾರದ 7ದಿನವೂ ಸೇವೆ ನೀಡಬಹುದು ಎಂದು ಮೈಸೂರು ಗ್ರಾಹಕರ ಪರಿಷತ್ತಿನ ಯೋಗೀಂದ್ರ ಸ್ವಾಮೀಜಿ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 4 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30359
ಶರಣ್‌ ರಾಜ್

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು