ಮಂಗಳೂರು: ಪವಿತ್ರ ಇಸ್ಲಾಮಿಕ್ ಹಬ್ಬವಾದ ಈದ್ ಮಿಲಾದ್ ನ್ನು ಪ್ರಪಂಚದಾದ್ಯಂತದ ಮುಸ್ಲಿಮರು ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಕಳೆದ ದಿನ ಆಚರಿಸಿದ್ದಾರೆ.
ಪ್ರವಾದಿ ಮೊಹಮ್ಮದರ ಜನ್ಮದಿನವನ್ನು ಈದ್ ಮಿಲಾದ್ ಹಬ್ಬವಾಗಿ ಮುಸ್ಲಿಮರು ಆಚರಿಸುತ್ತಾರೆ. ಸೆಪ್ಟೆಂಬರ್ 16 ರಿಂದ ಶುರುವಾದ ಆಚರಣೆ ಸೆಪ್ಟೆಂಬರ್ 27 ಮತ್ತು 28ರಂದು ಅಂತ್ಯಗೊಳ್ಳುತ್ತದೆ. ಎಲ್ಲೆಡೆ ಮುಸ್ಲಿಂ ಬಾಂದವರು ರ್ಯಾಲಿ ಹಮ್ಮಿಕೊಂಡು ಸಂಭ್ರಮಿಸಿದ್ದಾರೆ.
ಇನ್ನು ಮಂಗಳೂರಿನ ಮದೀನ ದರ್ವೇಶ್ ಮಜ್ಜಿದ್ ಮತ್ತು ಎಜ್ಯುಕೇಷನಲ್ ಟ್ರಸ್ಟ್ (ರಿ) ಇವರ ವತಿಯಿಂದ ಭಟ್ಕಲ ಬಝರ್ ಜೆ.ಎಮ್ ರೋಡ್. ಬಂದರ್ ಇಲ್ಲಿ ಈದ್ ಇ ಮಿಲಾದ್ ಮೆರವೆಣಿಗೆ ಹಮ್ಮಿಕೊಳ್ಳಲಾಗಿತ್ತು.
ಜಮಾತ್ ಪ್ರೆಸಿಡೆಂಟ್ಗಳು, ಜಮಾತ್ ಮೆಂಬರ್ಸ್ ಗಳ ನೇತೃತ್ವದಲ್ಲಿ ಆರಂಭಗೊಂಡ ಈ ರ್ಯಾಲಿ ಕುದ್ರೋಳಿಯಿಂದ 8;30ಕ್ಕೆ ಆರಂಭಗೊಂಡು 10;30ಕ್ಕೆ ಮುಕ್ತಾಯಗೊಂಡಿದೆ. ಈ ಸಂಭ್ರಮಚಾರಣೆಯಲ್ಲಿ ಮುಸ್ಲಿಂ ಬಾಂದವರು ಮುಕ್ತವಾಗಿ ಭಾಗಿಯಾಗಿ ಸಂಭ್ರಮಿಸಿದರು.