News Karnataka Kannada
Monday, April 29 2024
ಮಂಗಳೂರು

ಸಿ.ಎ.ಎಸ್.ಕೆ ಶತಮಾನೋತ್ಸವ ಟ್ರಸ್ಟ್, ಸಿಎಎಸ್‌ ಕೆಯಿಂದ ಸ್ಕಾಲರ್‌ಶಿಪ್‌ ವಿತರಣೆ

distribution-of-scholarships-by-cask-centenary-trust-cask
Photo Credit : News Kannada

ಮಂಗಳೂರು: ಸಿ.ಎ.ಎಸ್.ಕೆ ಶತಮಾನೋತ್ಸವ ಟ್ರಸ್ಟ್ ಮತ್ತು ಕ್ಯಾಥೋಲಿಕ್ ಅಸೋಸಿಯೇಷನ್ ಆಫ್ ಸೌತ್ ಕೆನರಾ ಅವರಿಂದ ೨೦೨೩ ಸಾಲಿನ ಸ್ಕಾಲರ್‌ಶಿಪ್ ವಿತರಣಾ ಕಾರ್ಯಕ್ರಮ ನಡೆಯಿತು.

೧೯೧೪ರಲ್ಲಿ ಸ್ಥಾಪನೆಯಾದ ಕ್ಯಾಥೋಲಿಕ್ ಅಸೋಸಿಯೇಶನ್ ಆಫ್ ಸೌತ್ ಕೆನರಾ (ಸಿಎಎಸ್‌ಕೆ) (ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು) ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಅಮೋಘ ಸೇವೆಯನ್ನು ನೀಡಿದೆ. ಸಿ.ಎ.ಎಸ್.ಕೆ. ಅನೇಕ ದತ್ತಿ ಮತ್ತು ಸಮುದಾಯ ಸೇವಾ ಯೋಜನೆಗಳನ್ನು ವಿಶೇಷವಾಗಿ ಕಳೆದ ಒಂದು ದಶಕದಲ್ಲಿ ಅನುಷ್ಠಾನಗೊಳಿಸುತ್ತಿದೆ. ಸುಮಾರು ೫,೬೬೫ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ಅಭಿವೃದ್ಧಿ ಕಾರ್ಯಕ್ರಮ, ೧,೫೪೩ ಶಿಕ್ಷಕರಿಗೆ ಶಿಕ್ಷಕರ ಪುಷ್ಟೀಕರಣ ಕಾರ್ಯಕ್ರಮ, ೫,೦೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪಾದರಕ್ಷೆಗಳು, ಗ್ರಾಮೀಣ ಶಾಲೆಗಳು ಮತ್ತು ಸಂಸ್ಥೆಗಳಲ್ಲಿ ೧೩ ಘಟಕಗಳಲ್ಲಿ ಸುರಕ್ಷಿತ ಕುಡಿಯುವ ನೀರಿನ ಘಟಕಗಳ ಸ್ಥಾಪನೆ, ೫ ಮನೆಗಳ ಪ್ರಾಯೋಜನೆ; ರಕ್ತ, ಅಂಗಾಂಗ ಮತ್ತು ದೇಹದ ದೇಣಿಗೆ’ ಮತ್ತು ವಾರ್ಷಿಕ ವಿದ್ಯಾರ್ಥಿವೇತನಗಳು ಮುಂತಾದುವು ಪ್ರಮುಖ ಯೋಜನೆಗಳಾಗಿವೆ. ೨೦೧೬ರಲ್ಲಿ ದತ್ತಿ ಚಟುವಟಿಕೆಗಳನ್ನು ಬೆಂಬಲಿಸಲು ಸಿ.ಎ.ಎಸ್.ಕೆ. ಶತಮಾನ ಟ್ರಸ್ಟ್ ಸ್ವತಂತ್ರ ಘಟಕವಾಗಿ ಸ್ಥಾಪಿಸಲಾಯಿತು.

ವಾರ್ಷಿಕ ಸ್ಕಾಲರ್‌ಶಿಪ್‌ಗಳು ೨೦೨೩ ಸಿ.ಎ.ಎಸ್.ಕೆ. ಮೂರು ವಿಭಾಗಗಳ ಅಡಿಯಲ್ಲಿ ವಿದ್ಯಾರ್ಥಿವೇತನವನ್ನು ಒದಗಿಸುತ್ತದೆ. ಎಂಡೋಮೆಂಟ್ ಫಂಡ್‌ಗಳಿಂದ, ‘ಕೋವಿಡ್ ಬೆಂಬಲ’ ನಿಧಿಯಿಂದ ಕೋವಿಡ್ ಸಾವುಗಳು ಅಥವಾ ಒಬ್ಬರು ಅಥವಾ ಇಬ್ಬರೂ ಪೋಷಕರ ಆಸ್ಪತ್ರೆಗೆ ದಾಖಲಾದ ಅಂಚಿನಲ್ಲಿರುವ ಕುಟುಂಬಗಳಿಗೆ, ನಿಯಮಿತ ವಾರ್ಷಿಕ ವಿದ್ಯಾರ್ಥಿವೇತನಗಳನ್ನು ಒದಗಿಸುತ್ತಿದೆ.

ಸ್ಕಾಲರ್‌ಶಿಪ್‌ಗಳನ್ನು ನೀಡುವ ಮುಖ್ಯ ಮಾನದಂಡಗಳು ಹೀಗಿವೆ. ಕಡಿಮೆ ಆರ್ಥಿಕ ಸ್ಥಿತಿ ಮತ್ತು ಕೌಟುಂಬಿಕ ಸಮಸ್ಯೆಗಳಿಂದ ಎದುರಿಸುತ್ತಿರುವ ಸಮಸ್ಯೆಗಳು (ತಂದೆ/ತಾಯಿ ಮರಣಹೊಂದಿದವರು, ಒಂಟಿ ಪೋಷಕರು, ದೈನಂದಿನ ವೇತನದಾರರು, ಮನೆಗೆಲಸದವರು, ಪ್ರಮುಖ ಕಾಯಿಲೆಗಳಿಂದ ಬಳಲುತ್ತಿರುವ ಪೋಷಕರು). ಫಲಾನುಭವಿಗಳನ್ನು ಜಾತಿ, ಮತ ಅಥವಾ ಧರ್ಮವನ್ನು ಲೆಕ್ಕಿಸದೆ ಸ್ಕಾಲರ್‌ಶಿಪ್‌ಗೆ ಆಯ್ಕೆ ಮಾಡಲಾಗುತ್ತದೆ.

ಧರ್ಮಾಧ್ಯಕ್ಷರಾದ ವಂದನೀಯ ಡಾ. ಪೀಟರ್ ಪೌಲ್ ಸಲ್ಡಾನ್ಹಾ ಅವರ ಪರವಾಗಿ ಮಂಗಳೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮೊ. ಮೆಕ್ಷಿಮ್ ನೊರೊನ್ಹಾ ಅವರು ೨೦೨೩, ಜುಲೈ ೮, ಶನಿವಾರದಂದು ಬಿಷಪ್ ಹೌಸ್ ಹಾಲ್‌ನಲ್ಲಿ ಸಿ.ಎ.ಎಸ್.ಕೆ.ಯ ಪ್ರಮುಖ ದಾನಿಗಳು, ಸದಸ್ಯರು ಮತ್ತು ಹಿತೈಷಿಗಳ ಉಪಸ್ಥಿತಿಯಲ್ಲಿ ವಿದ್ಯಾರ್ಥಿವೇತನವನ್ನು ವಿತರಿಸಿದರು. ಡಾ. ಥೆಲ್ಮಾ ಸಿಕ್ವೇರಾ ಅವರು ಸಮಾರಂಭದಲ್ಲಿ ಗೌರವಾನ್ವಿತ ಅತಿಥಿಗಳಾಗಿದ್ದರು.

ರೂ. ೧೬,೦೯,೦೦೦ ವೆಚ್ಚದಲ್ಲಿ ವಿದ್ಯಾರ್ಥಿವೇತನ: ಈ ವರ್ಷ ೨೫೦ ಅರ್ಜಿಗಳನ್ನು ಸ್ವೀಕರಿಸಿ, ೧೫೪ ವಿದ್ಯಾರ್ಥಿಗಳಿಗೆ, ರೂ. ೧೬,೦೯,೦೦೦ ವೆಚ್ಚದಲ್ಲಿ ವಿದ್ಯಾರ್ಥಿವೇತನವನ್ನು ನೀಡಲಾಗಿದೆ. ಫಲಾನುಭವಿಗಳಲ್ಲಿ ೬೦ ಶಾಲಾ ವಿದ್ಯಾರ್ಥಿಗಳು, ೩೦ ಪಿಯುಸಿ ವಿದ್ಯಾರ್ಥಿಗಳು, ೩೯ ಪದವಿ ವಿದ್ಯಾರ್ಥಿಗಳು, ೫ ನರ್ಸಿಂಗ್ ವಿದ್ಯಾರ್ಥಿಗಳು, ೬ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮತ್ತು ಇತರ ವೃತ್ತಿಪರ ಕೋರ್ಸ್ಗಳ ೧೪ ವಿದ್ಯಾರ್ಥಿಗಳು ಸೇರಿದ್ದಾರೆ. ಹೀಗೆ ಸಿ.ಎ.ಎಸ್.ಕೆ. ಲಭ್ಯವಿರುವ ಸಂಪನ್ಮೂಲಗಳೊಂದಿಗೆ ಸಮುದಾಯದ ಅಗತ್ಯಗಳನ್ನು ಪರಿಣಾಮಕಾರಿ ರೀತಿಯಲ್ಲಿ ಪೂರೈಸುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು