News Karnataka Kannada
Saturday, May 11 2024
ಮಂಗಳೂರು

ಧರ್ಮಸ್ಥಳ: ದಿ ಓಷ್ಯನ್ ಪರ್ಲ್ ನಲ್ಲಿ ಡಿ. ಹರ್ಷೇಂದ್ರ ಕುಮಾರ್ ಅವರ ಹುಟ್ಟುಹಬ್ಬ ಆಚರಣೆ

Dharmasthala: D. Harshendra Kumar's birthday celebrations at The Ocean Pearl
Photo Credit : By Author

ಧರ್ಮಸ್ಥಳ: ದಿ ಓಷ್ಯನ್ ಪರ್ಲ್ ಹೋಟೆಲ್ ನಲ್ಲಿ ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್ ಅವರ ಹುಟ್ಟುಹಬ್ಬ ಆಚರಣೆ ಅತ್ಯಂತ ಸಂಭ್ರಮದಿಂದ ಜರಗಿತು.

ನೂತನವಾಗಿ ಲೋಕಾರ್ಪಣೆಗೊಂಡ ದಿ ಓಷ್ಯನ್ ಪರ್ಲ್ ಉಜಿರೆ, ಡಿ.ಹರ್ಷೇಂದ್ರ ಕುಮಾರ್ ಹಾಗೂ ಸುಪ್ರಿಯಾ ಹರ್ಷೇಂದ್ರ ಕುಮಾರ್ ದಂಪತಿಯನ್ನು ಒಷ್ಯನ್ ಪರ್ಲ್ ಉಜಿರೆಯ ಮಾಲೀಕರಾದ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಅವರು ಹಾಗೂ ಒಷ್ಯನ್ ಪರ್ಲ್ ಗ್ರೂಪ್ ನ ವೈಸ್ ಪ್ರೆಸಿಡೆಂಟ್ ಶ್ರೀ ಬಿ ಎನ್ ಗಿರೀಶ್ ಆತ್ಮೀಯವಾಗಿ ಸ್ವಾಗತಿಸಿ ಹುಟ್ಟು ಹಬ್ಬದ ಶುಭಾಶಯ ಕೋರಿ ಅಭಿನಂದಿಸಿದರು.

ಈ ಸಂಧರ್ಬದಲ್ಲಿ ಖ್ಯಾತ ಯಕ್ಷಗಾನ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ ತಂಡ ಯಕ್ಷಗಾನ ನಾಟ್ಯ ವೈಭವದ ಮೂಲಕ ವಿಶೇಷವಾಗಿ ದಂಪತಿಗಳಿಗೆ ದೀಪಾರತಿ ಬೆಳಗುವ ಮೂಲಕ ಶುಭಾಶಯ ಸಲ್ಲಿಸಿದರು.

ಈ ವೇಳೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಿ.ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಶ್ರದ್ಧಾ ಅಮಿತ್, ಶ್ರೇಯಸ್ ಕುಮಾರ್, ನಿಶ್ಚಲ್ ಕುಮಾರ್, ಮೈತ್ರಿ, ಮಾನ್ಯ, ಆರ್ಯಾಮಾನ್, ಕಿಯಾಂಶ್, ಹಾಗೂ ಹರ್ಷೇಂದ್ರ ಕುಮಾರ್ ಅವರ ಕುಟುಂಬ ಸದಸ್ಯರು ಉಪಸ್ಥತರಿದ್ದು ಅತ್ಯಂತ ಸಂಭ್ರಮದಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಖುಷಿ ಪಟ್ಟರು.

ಈ ಸಂದರ್ಭದಲ್ಲಿ ಅತಿಥಿ ಸತ್ಕಾರ,ಸ್ವಚ್ಛತೆ ಹಾಗೂ ಗುಣಮಟ್ಟದ ಆಹಾರ ಬಗ್ಗೆ ಹೆಗ್ಗಡೆ ಕುಟುಂಬಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು, ಈ ಸಂದರ್ಭದಲ್ಲಿ ಓಷೀಯನ್ ಪರ್ಲ್ ಸಂಸ್ಥೆಯವರು ವಿಶೇಷವಾಗಿ ನಿರ್ಮಿಸಿದ ಡಿ.ಹರ್ಷೇಂದ್ರ ಕುಮಾರ್ ಅವರ ಜೀವನದ ಹಲವು ಮಜಲುಗಳನ್ನು ಪರಿಚಯಿಸುವ ಕಿರು ಚಿತ್ರವನ್ನು ಈ ಪ್ರಸ್ತುತ ಪಡಿಸಿದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು