News Karnataka Kannada
Sunday, May 19 2024
ಮಂಗಳೂರು

ಬಿಸಿ ರೋಡಿನ ಬ್ರಹ್ಮರ ಕೂಟ್ಲು ಟೋಲ್ ಪ್ಲಾಜಾ: ಇನ್ನೂ ಕಾರ್ಯರಂಭಗೊಳ್ಳದ ಮೂರನೇ ಬೂತ್

Brahmara Kootlu toll plaza on BC Road is the third booth which is yet to start functioning.
Photo Credit : News Kannada

ಮಂಗಳೂರು: ಸದಾ ಒಂದಿಲ್ಲೊಂದು ಸಮಸ್ಯೆಗಳಿಂದಲೇ ಸುದ್ದಿ ಆಗುತ್ತಿರುವ ಬಿಸಿ ರೋಡು ಸಮೀಪದ ರಾಷ್ಟ್ರೀಯ ಹೆದ್ದಾರಿ 75ರ ಬ್ರಹ್ಮರ ಕೂಟ್ಲು ಟೂಲ್ ಪ್ಲಾಜಾದಲ್ಲಿ ವಾಹನ ಸರದಿ ಸಾಲನ್ನು ತಪ್ಪಿಸುವ ಉದ್ದೇಶದಿಂದ ಮೂರನೇ ಬೂತ್ ನಿರ್ಮಿಸಲಾಗಿದ್ದು ಕಾಮಗಾರಿ ಪೂರ್ವಗೊಂಡು ವರ್ಷಗಳ ಕಳೆದರೂ ಕಾರ್ಯರಂಭಕ್ಕೆ ರಾಷ್ಟ್ರಿಯ ಪ್ರಾಧಿಕಾರ ಮನಸ್ಸು ಮಾಡಿಲ್ಲ.

ಹೆದ್ದಾರಿಯ ಎರಡು ಬದಿ ಶುಲ್ಕ ಸಂಗ್ರಾದ ತಲಾ ಎರಡೆರಡು ಬೂತ್ ಗಳಿದ್ದು ವಾಹನಗಳ ಒತ್ತಡ ಹೆಚ್ಚಿರುವ ಸಂದರ್ಭ ವಾಹನಗಳು ಸಾಲು ನಿಲ್ಲಬೇಕಾದ ಸ್ಥಿತಿ ಇವೆ ಅದನ್ನು ತಪ್ಪಿಸಲೆಂದೇ, ಮೂರನೇ ಬೂತ್ ನಿರ್ಮಿಸಲಾಗಿತ್ತು.

ನವಯುಗ ಸಂಸ್ಥೆಯ ತಲಪಡಿ ಯಜಮಾನಡಿ ಟೋಲ್ಲ್ಗಲ್ಲಿ ತಲಾ ಎರಡು ಕಡೆಯೂ ನಾಲ್ಕೈದು ಟೂಲ್ ಬೂತ್ ಗಳಿವೆ ಆದರೆ ಬ್ರಹ್ಮರ ಕೂಟಲಿನಲ್ಲಿ ಕೇವಲ ಎರಡು ಬೂತ್ ಗಳು ಕಾರ್ಯಚರಿಸುತ್ತಿವೆ, ವರ್ಷ ಕಳೆದಂತೆ ವಾಹನಗಳ ಸಂಖ್ಯೆ ಹೆಚ್ಚುತ್ತಿರುವ ಪರಿಣಾಮ ಬೆಳಗ್ಗೆ ಸಂಜೆ ಹೊತ್ತು ವಾಹನಗಳು ಟೋಲ್ ಪಾವತಿಗೆ ಕಾದು ನಿಲ್ಲುವ ಅನಿವಾರ್ಯ ಇದೆ.

ಮೂರನೇ ಟೋಲ್ ಬೂತ್ ಕಾಮಗಾರಿಯನ್ನು ಮೂರ್ನಾಲ್ಕು ವರ್ಷ ಹಿಂದೆ ಆರಂಭಿಸಿದರು ಪ್ರಾರಂಭದಲ್ಲಿ ತುಂಬೆ ಆಣೆಕಟ್ಟು ಬಳಿ ಅಳವಡಿಸಿರುವ ವಿದ್ಯುತ್ ಕಂಬಗಳು ಹೆದ್ದಾರಿಗೆ ತಾಗಿಕೊಂಡೆ ಇದ್ದ ಹಿನ್ನೆಲೆಯಲ್ಲಿ ವಿಳಂಬವಾಗುತ್ತಿದೆ ಎನ್ನಲಾಗಿತ್ತು . ಕಂಬಗಳ ಸ್ಥಳಾಂತರದ ಬಳಿಕವು ಕಾಮಗಾರಿ ವೇಗ ಪಡೆದುಕೊಂಡಿರಲಿಲ್ಲ ಆಮಗತಿಯಲ್ಲಿ ಸಾಗಿ ಕಳೆದ ವರ್ಷ ಪೂರ್ಣಗೊಂಡಿತ್ತು ಆದರೆ ಕಾರ್ಯ ಆರಂಭ ಮಾತ್ರ ಮುಹೂರ್ತ ಕೂಡಿ ಬಂದಿಲ್ಲ ವಾಹನ ಸವಾರರು ಕಾದು ನಿಂತು ಟೋಲ್ ಪಾವತಿಸಿ ಸಾಗುತ್ತಿದ್ದಾರೆ ಫಾಸ್ಟ್ ಟ್ಯಾಗ್ ಇದ್ದರು ಕಾಯುವಿಕೆ ಅನಿವಾರ್ಯವಾಗಿದೆ.

ಪ್ರಸ್ತುತ ದಿನಗಳಲ್ಲಿ ಮರಳು ಲಾರಿಗಳ ಸಂಚಾರ ಹೆಚ್ಚಾಗಿದ್ದು ರಾತ್ರಿಯಲ್ಲಿ ಹೆಚ್ಚು ಓಡಾಡುತ್ತಿವೆ ಬಹುತೇಕ ಲಾರಿಗಳು ಟೋಲ್ ತಪ್ಪಿಸಿಕೊಂಡು ಸರ್ವಿಸ್ ರಸ್ತೆಯಲ್ಲಿ ಸಾಗುತ್ತಿವೆ . ಕೆಲವು ದಿನಗಳ ಹಿಂದೆ ಮರಳು ಲಾರಿಗಳನ್ನು ನಿಲ್ಲಿಸಿ ಫಾಸ್ಟ್ ಟ್ಯಾಗ್ ಅಳವಡಿಸಿಕೊಳ್ಳುವಂತೆ ಸೂಚಿಸಿದ್ದು ಸುಮಾರು 15 ಲಾರಿ ಅವರನ್ನು ಬಿಟ್ಟರೆ ಉಳಿದವರು ತಪ್ಪಿಸುವ ಮಾರ್ಗವನ್ನೇ ಹಿಡಿದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು