News Karnataka Kannada
Friday, May 03 2024
ಮಂಗಳೂರು

ಬೆಳ್ತಂಗಡಿ: ಪಿ.ಡೀಕಯ್ಯ ಸಾವಿನ ಬಗ್ಗೆ ಸಿಒಡಿ ತನಿಖೆಗೆ ಆದೇಶಿಸಿದ ರಾಜ್ಯ ಸರ್ಕಾರ

Belthangady: The state government has ordered a COD probe into the death of P Dekaiah.
Photo Credit : By Author

ಬೆಳ್ತಂಗಡಿ: ಹಿರಿಯ ದಲಿತ ನಾಯಕ, ಬಹುಜನ ಚಳವಳಿಯ ನೇತಾರ, ಬಿಎಸ್ಎನ್ಎಲ್ ನಿವೃತ್ತ ಉದ್ಯೋಗಿ ಪಿ.ಡೀಕಯ್ಯ ಅವರ ಸಾವಿನ ಬಗ್ಗೆ ಸಿಒಡಿ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿದೆ.

ಕಳೆದ ಜುಲೈ 6 ರಂದು ಮನೆಯಲ್ಲಿ ಒಬ್ಬಂಟಿಯಾಗಿದ್ದ ಪಿ ಡೀಕಯ್ಯ ರವರು ಕುಸಿದು ಬಿದ್ದು ತಲೆಗೆ ಗಾಯಗೊಂಡ ಸ್ಥಿತಿಯಲ್ಲಿ ಬಿದಿದ್ದವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅವರು. ಜುಲೈ 8 ರಂದು ನಿಧನರಾಗಿದ್ದರು. ಮನೆಯವರ ಒಪ್ಪಿಗೆಯಂತೆ ಅಂಗಾಂಗಗಳ ದಾನ ಮಾಡಿದ ಬಳಿಕ ಜುಲೈ 9 ರಂದು ಬೆಳ್ತಂಗಡಿಯಲ್ಲಿ ಸಾರ್ವಜನಿಕ ದರ್ಶನದ ಬಳಿಕ ಬೌದ್ಧ ಧರ್ಮದ ಪ್ರಕಾರ ಹುಟ್ಟೂರು ತಾಲೂಕಿನ ಕಣಿಯೂರು ಗ್ರಾಮದ ಪೊಯ್ಯದಲ್ಲಿ ಧಪನ ಕಾರ್ಯ ನಡೆದಿತ್ತು.

ಬಳಿಕ ಜುಲೈ 15 ರಂದು ಪಿ ಡೀಕಯ್ಯ ಅವರ ಮನೆಯವರು ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಬೆಳ್ತಂಗಡಿ ಪೋಲಿಸ್ ಠಾಣೆಗೆ ದೂರು ನೀಡಿದರು ‌. ಈ ಭಾಗವಾಗಿ ಜುಲೈ 18 ರಂದು ಬೆಳ್ತಂಗಡಿ ತಹಶೀಲ್ದಾರ್ ಅವರ ನೇತೃತ್ವದಲ್ಲಿ ಶವವನ್ನು ಹೊರತೆಗೆದು ಜಿಲ್ಲೆಯ ವೈದ್ಯಕಾರಿಗಳ ತಂಡದ ಜೊತೆಗೆ ಶವ ಪರೀಕ್ಷೆ ಮಾಡಲಾಗಿತ್ತು ‌.

ಘಟನೆಯ ಬಗ್ಗೆ ವಿಸ್ತೃತ ತನಿಖೆ ನಡೆಸಿದ ಬೆಳ್ತಂಗಡಿ ಪೋಲಿಸರು ಮನೆಯವರ ದೂರಿನ ಆಧಾರದಲ್ಲಿ ತನಿಖೆ ನಡೆಸಿ ಹಲವರನ್ನು ತನಿಖೆಗೆ ಒಳಪಡಿಸಿದರು. ಈ ಮಧ್ಯೆ ಡೀಕಯ್ಯ ಅವರು ಕುಟುಂಬಸ್ಥರು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಪ್ರಕರಣದ ಬಗ್ಗೆ ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎಂದು ಸಿಒಡಿ ತನಿಖೆಗೆ ಒತ್ತಾಯಿಸಿದ್ದರು. ಇದೀಗ ನವೆಂಬರ್ 4 ರಂದು ಘಟನೆಯ ಬಗ್ಗೆ ರಾಜ್ಯ ಸರ್ಕಾರ ಸಿಒಡಿ ತನಿಖೆಗೆ ಆದೇಶಿಸಿದೆ. ಬೆಳ್ತಂಗಡಿ ಪೋಲಿಸ್ ಠಾಣೆಯಿಂದ ಪ್ರಕರಣದ ದಾಖಲೆಗಳನ್ನು ಸಿಒಡಿ ಇಲಾಖೆಗೆ ಒಪ್ಪಿಸುವಂತೆ ಆದೇಶಿಸಿದೆ. ಒಟ್ಟಾರೆ ಇಡೀ ಪ್ರಕರಣ ಮತ್ತೆ ಕುತೂಹಲ ಕೆರಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು