News Karnataka Kannada
Saturday, May 11 2024
ಮಂಗಳೂರು

ಬೆಳ್ತಂಗಡಿ: ಅ.2 ರಿಂದ 5.ರವರೆಗೆ ಉಜಿರೆ ಶಾರದಾ ಮಂಟಪದಲ್ಲಿ ಶ್ರೀ ಶಾರದಾ ಪೂಜೋತ್ಸವ

Belthangady: Sri Sharada Pujanotsava at Ujire Sharada Mantapa from Oct. 2 to 5.
Photo Credit : Twitter

ಬೆಳ್ತಂಗಡಿ: ಉಜಿರೆ ಶ್ರೀ ಶಾರದಾ ಪೂಜಾ ಸಮಿತಿ ವತಿಯಿಂದ ಶ್ರೀ ಶಾರದಾ ಮಂಟಪದಲ್ಲಿ 42ನೇ ವರ್ಷದ ಶ್ರೀ ಶಾರದಾ ಪೂಜೋತ್ಸವವು ಅ 2 ರಿಂದ 5 ರ ವರೆಗೆ ವಿವಿಧ ಧಾರ್ಮಿಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಅ.2 ರಂದು ಬೆಳಿಗ್ಗೆ ಶ್ರೀ ಗಣಪತಿ ಹವನ ಹಾಗು ಶ್ರೀ ಶಾರದಾ ಮೂರ್ತಿ ಪ್ರತಿಷ್ಠೆ ಸಂದರ್ಭದಲ್ಲಿ ಗಣ್ಯರಾದ ಜಿ.ಪ್ರಭಾತ್ ಭಟ್, ವೃಂದಾ ಶರತ್ ಕೃಷ್ಣ ಪಡುವೆಟ್ನಾಯ,ಲಕ್ಷ್ಮಿ ರಾಮಸ್ವಾಮಿ,ಜ್ಯೋತಿ ಪಿ.ನಾಯಕ್,ರೇಷ್ಮಾ ಮೋಹನ್ ಕುಮಾರ್ ಮತ್ತು ಅಪರ್ಣ ಶಿವಕಾಂತ ಗೌಡ ಉಪಸ್ಥಿತರಿರುವರು.

ಮುಂಡಾಜೆಯ ಕೀರ್ತನಾ ಕಲಾ ತಂಡ (ರಿ)ದಿಂದ ಭಕ್ತಿಗಾನ ಯಕ್ಷ ನೃತ್ಯ,ಸಂಜೆ ಶ್ರೀ ಮಹಮ್ಮಾಯಿ ಭಜನಾ ಮಂಡಳಿಯಿಂದ ಭಜನೆ ,ಸಾಮೂಹಿಕ ಶ್ರೀ ದುರ್ಗಾ ನಮಸ್ಕಾರ ಹಾಗು ರಾತ್ರಿ ಶ್ರೀ ದೇವಿಕಿರಣ್ ನೃತ್ಯ ಶಿಕ್ಷಕಿ ವಿದುಷಿ ಸ್ವಾತಿ ಜಯರಾಮ್ ಮತ್ತು ವಿದುಷಿ ಪೃಥ್ವಿ ಸತೀಶ್ ಅವರ ಶಿಷ್ಯವೃಂದದವರಿಂದ ಭರತನಾಟ್ಯ-ನೃತ್ಯಾರ್ಪಣಂ ನಡೆಯಲಿದೆ. ಅ 3 ರಂದು ಬೆಳಿಗ್ಗೆ ರಂಗವಲ್ಲಿ ಸ್ಪರ್ಧೆ,ಉಜಿರೆಯ ಮಾತೃ ಮಂಡಳಿಯವರಿಂದ ಭಜನೆ, ಸಂಜೆ ವಿದುಷಿ ಅನಸೂಯಾ ಪಾಠಕ್ ಮತ್ತು ಶಿಷ್ಯವೃಂದದವರಿಂದ ಶ್ರೀ ಕೃಷ್ಣ ಗಾನಸುಧಾ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ಶ್ರೀ ದೇವಿ ಕೃತಿಗಳ ಗಾಯನ ನಡೆಯಲಿದೆ.

ಅ 4 ರಂದು ಬೆಳಿಗ್ಗೆ ಉಜಿರೆ ಶ್ರೀ ಮರಿ ಯಂಬಿಕ ಭಜನಾ ಮಂಡಳಿಯವರಿಂದ ಭಜನೆ, ಗುರಿಪಳ್ಳ ಜಯನಗರ ಶ್ರೀ ರಾಘವೇಂದ್ರ ಭಜನಾ ಮಂಡಳಿಯವರಿಂದ ಕುಣಿತ ಭಜನೆ,ಸಂಜೆ ಉಜಿರೆಯ ಶ್ರೀ ಜನಾರ್ದನ ಸ್ವಾಮಿ ಭಜನಾ ಮಂಡಳಿಯವರಿಂದ ಭಜನೆ,ಪ್ರಿಯ ಸತೀಶ್ ಮತ್ತು ತಂಡದವರಿಂದ ನೃತ್ಯ ವೈವಿಧ್ಯ ನಡೆಯಲಿದೆ.

ಅ 5 ರಂದು ಬೆಳಿಗ್ಗೆ ಅಕ್ಷರಾಭ್ಯಾಸ,ಶ್ರೀ ದುರ್ಗಾ ಹೋಮ,ಮದ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ಉಜಿರೆಯ ಚಿಗುರಿದ ಕನಸು ತಂಡದ ಸಂತೋಷ್ ಆಚಾರ್ಯ ಅತ್ತಾಜೆ ನೇತೃತ್ವದಲ್ಲಿ ಭಕ್ತಿಗೀತೆಗಳು, ಸಂಜೆ ಕಲಾವಿದ ಡಿ. ಬಿ. ಪ್ರಕಾಶ್ ದೇವಾಡಿಗ ಬಳಗದಿಂದ ಸ್ಯಾಕ್ಸೋಫೋನ್ ವಾದನ ಹಾಗು ರಾತ್ರಿ ವಿವಿಧ ಸಾಂಸ್ಕೃತಿಕ ಕಲಾತಂಡ,ಸ್ತಬ್ದ ಚಿತ್ರಗಳು ಹಾಗು ಸಿಡಿಮದ್ದು ಪ್ರದರ್ಶನಗಳೊಂದಿಗೆ ಶ್ರೀ ಶಾರದಾ ಮೂರ್ತಿಯ ವೈಭವದ ಶೋಭಾಯಾತ್ರೆ ನಗರದ ಮುಖ್ಯ ರಸ್ತೆಗಳಲ್ಲಿ ಸಾಗಿ ದೇವಸ್ಥಾನದ ಕೆರೆಯಲ್ಲಿ ವಿಸರ್ಜಿಸಲಾಗುವುದು.

ಶಾರದೋತ್ಸವ ಪ್ರಯುಕ್ತ ಪುರುಷರು,ಮಹಿಳೆಯರು ಹಾಗು ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಭಕ್ತಾದಿಗಳು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಸಮಿತಿ ಅಧ್ಯಕ್ಷ ಮಾಧವ ಹೊಳ್ಳ,ಕಾರ್ಯದರ್ಶಿ ಅಜೇಯ ಶೆಟ್ಟಿ ಮತ್ತು ಸದಸ್ಯರು ವಿನಂತಿಸಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು