News Karnataka Kannada
Tuesday, May 07 2024
ಮಂಗಳೂರು

ಬೆಳ್ತಂಗಡಿ: ಆತ್ಮಹತ್ಯೆ ಪ್ರಕರಣ, ಓರ್ವ ಆರೋಪಿ ಬಂಧನ

ಜೈಪುರದಲ್ಲಿರುವ ಬಾಲಾಪರಾಧಿ ಗೃಹದಿಂದ 22 ಕ್ರಿಮಿನಲ್​ಗಳು ಪರಾರಿಯಾಗಿದ್ದು, ಇವರಲ್ಲಿ 22 ಮಕ್ಕಳ ಪೈಕಿ 13 ಜನರ ವಿರುದ್ಧ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ.
Photo Credit : Freepik

ಬೆಳ್ತಂಗಡಿ: ಸ್ವಸಹಾಯ ಸಂಘದ ಸಾಲ ಕಟ್ಟುವ ವಿಚಾರವಾಗಿ ಬೆದರಿಕೆ ಹಾಕಿ ಓರ್ವನ ಸಾವಿಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಬ್ಬ ಆರೋಪಿಯನ್ನು ಸೋಮವಾರ ಬಂಧಿಸಲಾಗಿದೆ.

ಬೆಳ್ತಂಗಡಿ ತಾಲೂಕಿನ ತೋಟತ್ತಾಡಿ ಗ್ರಾಮದ ನೆಲ್ಲಿಗುಡ್ಡೆ ನಿವಾಸಿ ಚಂದ್ರಶೇಖರ್ (24) ಎಂಬವರಿಗೆ ಸಂಘದ ಸಾಲ ಕಟ್ಟುವ ವಿಚಾರದಲ್ಲಿ ಅದೇ ಸಂಘದ ನಾಲ್ಕು ಜನ ಬೆದರಿಕೆ ಹಾಕಿದ ಕಾರಣ ಆ. 25ರಂದು ಆತ್ಮಹತ್ಯೆಗೆ ಯತ್ನಿಸಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸೆ. 23ರಂದು ಚಿಕಿತ್ಸೆ ಸ್ಪಂದಿಸದೆ ಸಾವನ್ನಪ್ಪಿದ್ದು ಈ ಬಗ್ಗೆ ಮನೆಯವರು ಧರ್ಮಸ್ಥಳ ಠಾಣೆಯಲ್ಲಿ ನಾಲ್ವರ ಮೇಲೆ ದೂರು ದಾಖಲಿಸಿದ್ದರು.

ಇದೀಗ ಪ್ರಕರಣದ ಓರ್ವ ಆರೋಪಿ ಎಂದು ಹೇಳಲಾದ ತೋಟತ್ತಾಡಿ ಗ್ರಾಮದ ಯೋಗೀಶ್ (34) ಎಂಬಾತನನ್ನು ಧರ್ಮಸ್ಥಳದ ಪಿ ಎಸ್ ಐ ಅನಿಲ್ ಕುಮಾರ್ ಅವರ ತಂಡ ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಆರೋಪಿಗೆ 14 ದಿನಗಳ ನ್ಯಾಯಾಂಗ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.ಉಳಿದ ಆರೋಪಿಗಳ ಬಂಧನಕ್ಕೆ ಧರ್ಮಸ್ಥಳ ಪೊಲೀಸರು ಬಲೆ ಬೀಸಿದ್ದಾರೆ.

 

ಸಹಾಯವಾಣಿಗೆ ಕರೆ ಮಾಡಿ:

ನೀವು ಆತ್ಮಹತ್ಯೆಯ ಯೋಚನೆ ಮಾಡುತ್ತಿದ್ದರೆ ಅಥವಾ ಅಂತವರ ಕುರಿತು ನಿಮಗೆ ತಿಳಿದಿದ್ದರೆ, ಸಹಾಯ ಅಗತ್ಯವಿರುವ ಯಾರಾದರೂ, ಕರೆ ಮಾಡಿ ಸುಶೇಗ್ ಚಾರಿಟೇಬಲ್ ಟ್ರಸ್ಟ್ 0824-2983444 ಗೆ ಏಕೆಂದರೆ ಪ್ರತಿಯೊಬ್ಬರ ಜೀವವು ಅಮೂಲ್ಯವಾದ್ದದ್ದು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು