ಬೆಳ್ತಂಗಡಿ: ಅಪ್ರಾಪ್ತ ಬಾಲಕಿಯ ಮೇಲೆ ಪರಿಚಿತ ಯುವಕನೋರ್ವ ಅತ್ಯಾಚಾರ ನಡೆಸಿದ್ದು ಇದೀಗ ಗರ್ಭಿಣಿ ಯಾಗಿರುವ ಬಾಲಕಿ ವೇಣೂರು ಪೊಲೀಸರಿಗೆ ದೂರು ನೀಡಿದ್ದಾಳೆ.
ಹೊಸಂಗಡಿಯಲ್ಲಿ ಘಟನೆ ನಡೆದಿದ್ದು ಎರಡು ವರ್ಷದ ಹಿಂದೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಯುವಕ ತನ್ನ ಬಳಿ ವೀಡಿಯೋ ಇರುವುದಾಗಿ ಹೇಳಿ ಬಾಲಕಿಗೆ ಬೆದರಿಕೆ ಹಾಕಿ ಆಕೆಯ ಮೇಲೆ ನಿರಂತರ ಅತ್ಯಾಚಾರ ನಡೆಸುತ್ತಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಬಾಲಕಿಯ ದೂರಿನಂತೆ ಸ್ಥಳೀಯ ನಿವಾಸಿ ಅರವಿಂದ(24) ಎಂಬಾತನ ವಿರುದ್ದ ವೇಣೂರು ಠಾಣೆಯಲ್ಲಿ ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.