News Karnataka Kannada
Monday, April 29 2024
ಮಂಗಳೂರು

ಬೆಳ್ತಂಗಡಿ: ಸಾಧನೆಗೆ ಪದವಿ ಮುಖ್ಯವಲ್ಲ- ಡಿ. ಹರ್ಷೇಂದ್ರ ಕುಮಾರ್.

Belthangady: Graduation is not important for achievement: D. Harshendra Kumar.
Photo Credit : By Author

ಬೆಳ್ತಂಗಡಿ: ಕಲಿಕೆಗೂ, ಅನುಭವಕ್ಕೂ ವ್ಯತ್ಯಾಸವಿದೆ. ಅನುಭವದಿಂದ ಅಭಿನವ ಪಾರ್ಥಸುಬ್ಬ ಎಂದೇ ಖ್ಯಾತರಾದ ಸೀತಾನದಿ ಗಣಪಯ್ಯರವರು ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯವಾದುದು ಎಂದು ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.‌ ಹರ್ಷೇಂದ್ರ ಕುಮಾರ್ ಹೇಳಿದರು.

ಅವರು ಗುರುವಾಯನಕೆರೆ ಬದ್ಯಾರು ಹಂಸಗಿರಿ ಶ್ರೀ ಶಿವದರ್ಶನ್ ಆಗ್ರೋ ಇಂಡಸ್ಟ್ರೀಸ್ ಆವರಣದಲ್ಲಿ ಅಭಿನವ ಪಾರ್ಥಿಸುಬ್ಬ ಸೀತಾನದಿ ಗಣಪಯ್ಯ ಶೆಟ್ಟಿಯವರ 35ನೇ ವರ್ಷದ ಸಂಸ್ಮರಣೆ-ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿಕ್ಷರಾಗಿದ್ದುಕೊಂಡು ಪ್ರಸಂಗ ಕರ್ತನಾಗಿ, ಯಕ್ಷ ಸಾಹಿತಿಯಾಗಿ, ಯಕ್ಷಗಾನ ಅರ್ಥಧಾರಿಯಾಗಿ, ಯಕ್ಷಗಾನ ಕಲಾ ವಿಮರ್ಶಕರಾಗಿ ಪ್ರಸಿದ್ದರಾಗಿದ್ದರು.‌ ಹಿಂದೆ ಎಲ್ಲರಿಗೂ ಓದುವ ಹವ್ಯಾಸವಿತ್ತು. ಪದವಿ ಪಡೆಯದಿದ್ದರೂ ಅನುಭವದಿಂದ ಸಾಧನೆ ಮಾಡಬಹುದು. ಪ್ರಯೋಗ ಶೀಲತೆಯಿಂದ ಸಾಧನೆ ಮಾಡಬಹುದು. ಹಿಂದೆ ಕಲಾವಿದರಿಗೆ ಗೌರವ ಕೊಡುತ್ತಿರಲಿಲ್ಲ. ಈಗ ಕಾಲ ಬದಲಾಗಿದೆ. ಕಲಾವಿದರಿಗೆ ತುಂಬಾ ಗೌರವ ಕೊಡುವ ಕಾಲ ಬಂದಿದೆ ಎಂದು ಅವರು ಹೇಳಿದರು.

ಬರೋಡ ತುಳುಕೂಟ ಅಧ್ಯಕ್ಷ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಮಾತನಾಡಿ, ತಮ್ಮ ತಮ್ಮ ಅನುಭವದಿಂದ ವಿದ್ವಾಂಸರಾಗಬಹುದು. ಅದಕ್ಕೆ ಸೀತಾನದಿ ಗಣಪಯ್ಯ ಶೆಟ್ಟಿಯವರು ಸಾಕ್ಷಿ. ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡ ಗಣಪಯ್ಯ ಶೆಟ್ಟರ ಸಂಸ್ಕರಣಾರ್ಥವಾಗಿ ಪ್ರತಿಷ್ಠಾನದ ವತಿಯಿಂದ ಮಾದರಿ ಕಾರ್ಯಕ್ರಮ ಆಯೋಜನೆ ಮಾಡಿಕೊಂಡು ಬರುತ್ತಿದ್ದಾರೆ. ಪ್ರತಿಷ್ಠಾನದ ವತಿಯಿಂದ ಶಿಕ್ಷಕರಿಗೆ, ಯಕ್ಷಗಾನ ಪ್ರಸಂಗಕರ್ತರಿಗೆ, ಕಲಾವಿದರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ ಎಂದರು.

ಸೀತಾನದಿ ಗಣಪಯ್ಯ ಶೆಟ್ಟಿ ಪ್ರತಿಷ್ಠಾನದ ಅಧ್ಯಕ್ಷ ಪಿ. ಕಿಶನ್ ಹೆಗ್ಡೆ ಅಧ್ಯಕ್ಷತೆ ವಹಿಸಿ ಶುಭ ಕೋರಿದರು. ಭುವನಪ್ರಸಾದ ಹೆಗ್ಡೆ ಸೀತಾನದಿ ಗಣಪಯ್ಯ ಶೆಟ್ಟರ ಸಂಸ್ಮರಣೆ ಮಾಡಿದರು. ಸೀತಾನದಿ ಗಣಪಯ್ಯ ಶೆಟ್ಟಿ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಪ್ರಸಂಗಕರ್ತ ದೇವದಾಸ್ ಈಶ್ವರಮಂಗಲ ಅವರಿಗೆ ಪ್ರಶಸ್ತಿ ಪ್ರದಾನಿಸಲಾಯಿತು ಪ್ರಶಸ್ತಿ ಸ್ವೀಕರಿಸಿ ಅನಿಸಿಕೆ ವ್ಯಕ್ತಪಡಿಸಿದರು. ಮಣಿಪಾಲ ಎಂ.ಐ.ಟಿ. ಪ್ರಾಧ್ಯಾಪಕ ಎಸ್.ವಿ. ಉದಯ ಕುಮಾರ್ ಅಭಿನಂದನ ಭಾಷಣ ಮಾಡಿದರು.

ಸೀತಾನದಿ ಪ್ರತಿಷ್ಠಾನದ ಕೋಶಾಧಿಕಾರಿ ಬೆಂಗಳೂರಿನ ಎಸ್. ಅಶೋಕ್ ಕುಮಾರ್ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು.
ಉದ್ಯಮಿ ಮುಂಬೈಯ ಪೊಲ್ಯ ಉಮೇಶ ಶೆಟ್ಟಿ, ಪ್ರತಿಷ್ಠಾನದ ಪದಾಧಿಕಾರಿಗಳಾದ ಸಿ. ತಾರನಾಥ ಹೆಗ್ಡೆ, ಕಾರ್ಯಕ್ರಮ ಸಂಯೋಜಕ ಹಂಸಗಿರಿಯ ಮಾಲಕ ಬಾಲಕೃಷ್ಣ ಸಿ.‌ನಾಯಕ್, ಪಡಂಗಡಿ ಜಯರಾಮ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಸೀತಾನದಿ ಪ್ರತಿಷ್ಠಾನ ಸಂಚಾಲಕ ವಿಠಲ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.ನಂತರ ಸಾಲಿಗ್ರಾಮ‌ ಮೇಳದಿಂದ ಮಾಗಧ ವಧೆ ಯಕ್ಷಗಾನ‌ ಪ್ರಸಂಗ ನಡೆಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು