ಬೆಳ್ತಂಗಡಿ: ಗುರುವಾಯನಕೆರೆ ಮೂಡಬಿದ್ರೆ ರಾಜ್ಯ ಹೆದ್ದಾರಿಯ ಪಡಂಗಡಿಯ ಪೆರ್ಣಮಂಜ ತಿರುವಿನಲ್ಲಿ ಕಾರು ಹಾಗೂ ಬೈಕ್ ಡಿಕ್ಕಿ ಹೊಡೆದ ಘಟನೆ ಶನಿವಾರ ನಡೆದಿದೆ.
ಬೈಕ್ ಸವಾರ ನಿಟ್ಟಡೆ ಗ್ರಾಮದ ದೇವರ ಗುಂಡಿ ಎಂಬಲ್ಲಿನ ರಂಜಿತ್ (19) ಗಾಯಗೊಂಡಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರು ಮೂಲದ ಕಾರು ಬೆಳ್ತಂಗಡಿಯಿಂದ ಮೂಡಬಿದ್ರೆಯತ್ತ ಪ್ರಯಾಣಿಸುತ್ತಿತ್ತು. ಈ ವೇಳೆ ಬೆಳ್ತಂಗಡಿ ಕಡೆ ಸಾಗುತ್ತಿದ್ದ ಬೈಕ್ ಗೆ ಡಿಕ್ಕಿ ಪಡೆದಿದೆ.
ಬೆಳ್ತಂಗಡಿ ಟ್ರಾಫಿಕ್ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.