News Karnataka Kannada
Monday, May 20 2024
ಮಂಗಳೂರು

ಬೆಳ್ತಂಗಡಿ: ಲಾಯಿಲ ಬಿಜೆಪಿ ಶಕ್ತಿ ಕೆಂದ್ರದಿಂದ ವಿಕಾಸ ಹಬ್ಬ

Belthangady: Development festival from Laila BJP Shakti Kendra
Photo Credit :

ಬೆಳ್ತಂಗಡಿ: ಪ್ರಧಾನಿಮಂತ್ರಿ ನರೇಂದ್ರ ಮೋದಿಯವರ ಕಾರ್ಯವೈಖರಿಯನ್ನು ಜಗತ್ತು ಒಪ್ಪಿಕೊಳ್ಳುವ ಹಂತದಲ್ಲಿ ನಾವಿದ್ದೇವೆ. ಈ ಮೂಲಕ ಭಾರತೀಯ ಜನತಾಪಾರ್ಟಿ ಸಿದ್ಧಾಂತ ಆದರ್ಶಗಳಿಂದಾಗಿ ಜಗದ್ವಂದ್ಯ ಭಾರತ ಕಲ್ಪನೆ ಸಾಕಾರಗೊಂಡಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು‌.

ಬಿಜೆಪಿ ಬೆಳ್ತಂಗಡಿ ಮಂಡಲದ ವತಿಯಿಂದ ಲಾಯಿಲ ಗ್ರಾ.ಪಂ.ಗೆ ಶಾಸಕರು 17.13 ಕೋ.ರೂ. ಅನುದಾನ ಒದಗಿಸಿದ ಹಿನ್ನೆಲೆ ಲಾಯಿಲ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಸಭಾಭವನದಲ್ಲಿ ಜು.10 ರಂದು ಹಮ್ಮಿಕೊಂಡ ಲಾಯಿಲ ಗ್ರಾಮದ ವಿಕಾಸ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು.

ಲಾಯಿಲದ ಅನೇಕ ಕಾರ್ಯಕರ್ತರ ಪರಿಶ್ರಮದಿಂದ ಸಿದ್ಧಾಂತದಡಿ ಜನಸೇವೆ ಮಾಡಿದ್ದರಿಂದ 25 ವರ್ಷ ಅಧಿಕಾರದ ಆಶೀರ್ವಾದ ಪಡೆದಿದೆ. ಈ ನೆಲೆಯಲ್ಲಿ ಲಾಯಿಲ ಗ್ರಾ.ಪಂ. ಕಳೆದ ಹಿಂದಿನ ಅನುದಾನಕ್ಕಿಂತ ಅತೀ ಹೆಚ್ಚಿನ 17 ಕೋ.ರೂ. ಅನುದಾನ ಒದಗಿಸಲಾಗಿದೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದ್ರೆ ಮಾತನಾಡಿ, ಭಾರತೀಯ ಜನತಾ ಪಾರ್ಟಿ ಸರ್ವಧರ್ಮದವರನ್ನು ಸಮಾನ ರೀತಿಯಲ್ಲಿ ಗೌರವಿಸುತ್ತಾ ಬಂದಿದೆ. ಪಕ್ಷದ ಕೆಲಸ ಕೇವಲ ಚುನಾವಣೆ ಸಂದರ್ಭದಲ್ಲಿ ಬಂದು ಓಟು ಕೇಳಿ ಹೋಗುವುದು ಮಾತ್ರ ಅಲ್ಲದೆ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಪಕ್ಷದ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಈ ರೀತಿಯ ಹೊಸ ಆಯಾಮಗಳನ್ನು ಪಕ್ಷ ಅಳವಡಿಸಿದ್ದೇವೆ. ಕೇವಲ ಅಧಿಕಾರ ಮಾತ್ರವಲ್ಲ ನಮ್ಮ ಗುರಿ ಸರ್ಕಾರದ ಪ್ರತಿಯೊಂದು ಯೋಜನೆಗಳು ಪ್ರತೀ ಮನೆ ಮನೆಗೂ ತಲುಪಿಸುವುದು ನಮ್ಮ ಕಮಾಡುತ್ತಿದ್ದೆ ಎಂದರು.

ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿ, ಬದಲಾವಣೆ ಏನೆಲ್ಲ ಆಗಿದೆ ಎಂದು ನೋಡಿದರೆ ಕೇವಲ ರಸ್ತೆ, ಮಾತ್ರ ಅಲ್ಲ ಗ್ರಾಮ ಪಂಚಾಯತಿಗಳಿಗೆ ಬರುವ ಅನುದಾನಗಳು ಹೆಚ್ಚಾಗಿದೆ, ಪದ್ಮಶ್ರೀ, ಪದ್ಮವಿಭೂಷಣ, ಆಯ್ಕೆಯಲ್ಲಿ ಸಮಾಜದ ಉದ್ಧಾರಕ್ಕಾಗಿ ಕೆಲಸ ಮಾಡಿದವರನ್ನು ಗುರುತಿಸುತ್ತಿದ್ದಾರೆ, ರಾಷ್ಟ್ರಪತಿ ಆಯ್ಕೆ ಈ ಮೊದಲು ಬೇರೆ ರೀತಿಯಲ್ಲಿ ಆಯ್ಕೆ ಮಾಡುತ್ತಿದ್ದರು, ಆದರೆ ಬಿಜೆಪಿ ಸರ್ಕಾರ ಜಾತಿ ಮತ ಪಂಥಗಳ ಹಂಗಿಲ್ಲದೆ ಸಮಾಜದ ಉದ್ಧಾರಕ್ಕೆ ತಮ್ಮನ್ನು ತೊಡಗಿಸಿಕೊಂಡಿರುವವರನ್ನು ರಾಷ್ಟ್ರಪತಿ, ರಾಜ್ಯಸಭೆಗೆ ಆಯ್ಕೆಯಲ್ಲಿ ಬದಲಾವಣೆ ಆಗಿದೆ. ಹೀಗೆ ಬಿಜೆಪಿ ಪಕ್ಷವು ದೇಶದಲ್ಲಿ, ರಾಜ್ಯದಲ್ಲಿ, ಹಾಗೆ ಗ್ರಾಮದಲ್ಲಿ ಬದಲಾವಣೆ ಮಾಡುತ್ತಿದ್ದೆ ಎಂದರು.

ಮಾಜಿ ಶಾಸಕ ಕೆ.ಪ್ರಭಾಕರ ಬಂಗೇರ, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೊರಗಪ್ಪ ನಾಯ್ಕ್, ಕಾರ್ಯದರ್ಶಿ ಧನಲಕ್ಷ್ಮೀ ಜನಾರ್ದನ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ ನಾವೂರು, ಲಾಯಿಲ ಗ್ರಾ.ಪಂ. ಅಧ್ಯಕ್ಷೆ ಆಶಾ ಬೆನೆಡಿಕ್ಟ್ ಸಲ್ಡಾನ, ಮಹಾಶಕ್ತಿ ಕೇಂದ್ರ ಅಧ್ಯಕ್ಷ ಅಜಿತ್ ಆರಿಗ, ಶಕ್ತಿಕೇಂದ್ರ ಅಧ್ಯಕ್ಷ ರಾಜೇಶ್ ಕನ್ನಾಜೆ ಉಪಸ್ಥಿತರಿದ್ದರು.

ಲಾಯಿಲ ಗ್ರಾ.ಪಂ.ನಲ್ಲಿ ಈವರೆಗೆ ಅಧ್ಯಕ್ಷ, ಸದಸ್ಯರು ಹಾಗೂ ಹಿರಿಯ, ಕಿರಿಯ ಕಾರ್ಯಕರ್ತರನ್ನು ಸಮ್ಮಾನಿಸಲಾಯಿತು. ವಿಕಾಸ ಹಬ್ಬದ ಸಂಚಾಲಕ ಗಿರೀಶ್ ಡೋಂಗ್ರೆ ಪ್ರಸ್ತಾವಿಸಿದರು. ಲಾಯಿಲ ಗ್ರಾ.ಪಂ. ಉಪಾಧ್ಯಕ್ಷ ಗಣೇಶ್ ಸ್ವಾಗತಿಸಿದರು. ರುಕ್ಮಯ ಕನ್ನಾಜೆ ಹಾಗೂ ಅರವಿಂದ ಕಾರ್ಯಕ್ರಮ ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು