News Karnataka Kannada
Monday, May 06 2024
ಮಂಗಳೂರು

ಚಾರ್ಮಾಡಿ ಘಾಟಿಯಲ್ಲಿ ಮತ್ತೆ ಕಾಡಾನೆ ಪ್ರತ್ಯಕ್ಷ: ಅರ್ಧ ಗಂಟೆಗೂ ಅಧಿಕ ಕಾಲ ಟ್ರಾಫಿಕ್ ಜಾಮ್

Belthangadi: Another wild sight at Charmadi ghat: traffic jam
Photo Credit :

ಬೆಳ್ತಂಗಡಿ: ಚಾರ್ಮಾಡಿ ಘಾಟಿಯ ಏಳನೇ ತಿರುವಿನಲ್ಲಿ ಬುಧವಾರ ಸಂಜೆ ಒಂಟಿ ಸಲಗ ರಸ್ತೆ ಬದಿಯಲ್ಲಿ ನಿಂತು ವಾಹನ ಸವಾರರಿಗೆ ಭಯ ಸೃಷ್ಟಿ ಮಾಡಿದೆ. ಸಂಜೆ ಮಂಗಳೂರು- ಹಾಸನ ಸರಕಾರಿ ಬಸ್ ಕೂದಲೆಳೆ ಅಂತರದಲ್ಲಿ ಕಾಡಾನೆಯ ದಾಳಿಯಿಂದ ಪಾರಾಗಿದೆ.
ಕಾಡಾನೆ ಕಂಡು ಸ್ವಲ್ಪ ದೂರದಲ್ಲಿ ಚಾಲಕ ಬಸ್ ನಿಲ್ಲಿಸಿದ್ದು,ರಸ್ತೆ ಬದಿ ಮರದ ಹತ್ತಿರ ನಿಂತಿದ್ದ ಕಾಡಾನೆ ಸ್ವಲ್ಪ ಸಮಯದ ಬಳಿಕ ಏಳನೇ ತಿರುವಿನ ಮತ್ತೊಂದು ಭಾಗದಲ್ಲಿ ಹೋಗಿ ನಿಂತಿದೆ.

ಬಸ್ ನ ಹಿಂದೆ ಹಲವು ವಾಹನಗಳು ಅರ್ಧ ಗಂಟೆಗೂ ಅಧಿಕ ಕಾಲ ಸಾಲುಗಟ್ಟಿ ನಿಂತಿದ್ದು ಒಂದೊಂದೇ ವಾಹನಗಳು ನಿಧಾನವಾಗಿ ಚಲಿಸಿದವು. ಈ ವೇಳೆ‌ ಸಲಗ ರಸ್ತೆಯ ಇನ್ನೊಂದು ಬದಿಯ ಸ್ವಲ್ಪ ದೂರದಲ್ಲಿ ನಿಂತಿತ್ತು. ಎರಡು ಬದಿಯಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಯಿತು.
ಆನೆ ಕಂಡು ಬಂದಿರುವ ವಿಚಾರ ತಿಳಿದ ಕೂಡಲೇ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಪಾಂಡುರಂಗ ಕಮತಿ, ರಾಜಾರಾಮ್ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕಾಡಾನೆ ಕಂಡು ಬಂದಿರಲಿಲ್ಲ.ಆದರೆ ಪರಿಸರದಲ್ಲಿ ತಿರುಗಾಟ ನಡೆಸಿರುವ ಕುರುಹುಗಳು ಕಂಡುಬಂದಿವೆ.

4ನೇ ಬಾರಿ: ಕಳೆದ ಮೂರು ವಾರಗಳಲ್ಲಿ ಚಾರ್ಮಾಡಿ ಘಾಟಿ ಪರಿಸರದಲ್ಲಿ ಬುಧವಾರ ಸೇರಿ ಕಾಡನೆ ನಾಲ್ಕನೇ ಬಾರಿ ಕಂಡು ಬಂದಿದೆ.
ಏ.26ರಂದು ರಾತ್ರಿ 9ಗಂಟೆ ಹೊತ್ತಿಗೆ,ಹಾಗೂ 27ರಂದು ಬೆಳಿಗ್ಗೆ 7ರ ಹೊತ್ತಿಗೆ,ಆ ಬಳಿಕ ಮೇ 9ರಂದು ರಾತ್ರಿ ಎರಡು ಹಾಗೂ ಮೂರನೇ ತಿರುವಿನ ಮಧ್ಯೆ ಒಂಟಿ ಸಲಗ ಕಂಡು ಬಂದಿತ್ತು. ಇದೀಗ ಮತ್ತೆ ಬುಧವಾರ ಕಾಡಾನೆಯ ದರ್ಶನವಾಗಿದೆ.

ವಾಹನ ಸವಾರರಿಗೆ ಅಪಾಯ: ಚಾರ್ಮಾಡಿ ಘಾಟಿ ಮೂಲಕ ಅಹರ್ನಿಶಿ ಅಧಿಕ ವಾಹನ ಸಂಚಾರ ಇದೆ.ಸಂಪೂರ್ಣ ಅರಣ್ಯ ಪ್ರದೇಶ ವಾಗಿರುವ ಇಲ್ಲಿ ಮೊಬೈಲ್ ನೆಟ್ ವರ್ಕ್ ಸಹಿತ ಯಾವುದೇ ಸೌಲಭ್ಯಗಳಿಲ್ಲ.ಇಂತಹ ಕಡೆ ಆಗಾಗ ಸಲಗ ಕಂಡು ಬರುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ.ಇಲ್ಲಿ ಸಾಕಷ್ಟು ದ್ವಿ-ಚಕ್ರ ತ್ರಿ-ಚಕ್ರ ವಾಹನಗಳು ಸಂಚರಿಸುತ್ತವೆ.ವಾಹನ ಸವಾರರು ಅತಿ ಹೆಚ್ಚಿನ ಮುನ್ನೆಚ್ಚರಿಕೆ ಜತೆ ಸಂಚಾರ ನಡೆಸುವುದು ಅಗತ್ಯವಾಗಿದೆ.ಈ ಹಿಂದೆ ಘಾಟಿ ಪ್ರದೇಶದಲ್ಲಿ ವಿರಳವಾಗಿ ಕಂಡು ಬರುತ್ತಿದ್ದ ಕಾಡಾನೆ ಇತ್ತೀಚಿನ ದಿನಗಳಲ್ಲಿ ಆಗಾಗ ಕಂಡು ಬರುವ ಜತೆ ರಸ್ತೆಯಲ್ಲೇ ಠಿಕಾಣಿ ಹೂಡುತ್ತಿದ್ದು ಭಯದ ವಾತಾವರಣ ಎದುರಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು