News Karnataka Kannada
Wednesday, May 08 2024
ಮಂಗಳೂರು

ಬಂಟ್ವಾಳ: ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಸಾರ್ವಜನಿಕರಿಗೆ ಸ್ವಾಗತ ಕೋರುವ ಟಾಯ್ಲೆಟ್

Toilet in front of Mini Vidhana Soudha to welcome the public
Photo Credit : News Kannada

ಬಂಟ್ವಾಳ:  ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಅಕ್ಕ – ಪಕ್ಕ ಬೇರೆ ಸ್ಥಳವಿದ್ದರೂ ಬಂಟ್ವಾಳ ಪುರಸಭೆ ಯ ಹಠ – ಮಾರಿ ಧೋರಣೆಯಿಂದ ತಾಲೂಕು ಆಡಳಿತ ಮಿನಿ ವಿಧಾನ ಸೌಧದ ಮುಂಬಾಗ ಸಾರ್ವಜನಿಕ ರಂಗಮಂದಿರ ಇದ್ಧ ಜಾಗದಲ್ಲಿ ಸಾರ್ವಜನಿಕ ಶೌಚಾಲಯವನ್ನು ಎಲ್ಲೋ ಒಂದು ಬದಿಯಲ್ಲಿ ನಿರ್ಮಿಸ ಬೇಕಾದ ಸ್ಥಳದಲ್ಲಿ ನಿರ್ಮಿಸ ದೇ ಜನ ಸಾಮಾನ್ಯರು ನಡೆದುಕೊಂಡು ಹೋಗುವ ಫುಟ್ ಪಾತ್ ಸ್ಥಳದಲ್ಲಿ ಹಾಗೂ ಮಿನಿ ವಿಧಾನ ಸೌಧದ ಎದುರಿನಲ್ಲಿ ನಿರ್ಮಿಸಿರುವುದು ಖಂಡನೀಯವಾಗಿದೆ .

ಇಷ್ಟೊಂದು ಸುಂದರವಾದ ಮಿನಿ ವಿಧಾನದ ಹಾಗೂ ಸಾರ್ವಜನಿಕರ ಚಲನ – ವಲನ ವಿರುವಂತಹ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಹಾಗೂ ಫುಟ್ ಪಾತ್ ಸ್ಥಳವನ್ನು ಆಯ್ಕೆ ಮಾಡಿರುವುದು ನಿಜವಾಗಿಯೂ ವಿಪರ್ಯಾಸವೇ ? ಶೌಚಾಲಯ ಕಟ್ಟಲು ಮಿನಿ ವಿಧಾನ ಸೌಧದ ಎದುರೇ ಬೇಕಿತ್ತೆ? ಬೇರೆ ಸ್ಥಳ ಸಿಗಳಿಲ್ಲವೇ ? ಈ ಶೌಚಾಲಯ ಸಾರ್ವಜನಿಕರಿಗೆ ಅಸಹ್ಯ ಮಾಡುವಂತಾಗಿದೆ ಇದನ್ನು ಸಾರ್ವಜನಿಕರು ಹಾಗೂ ಮಹಿಳೆಯರು ಬಳಸದೆ ಉಪಯೋಗ ಶೂನ್ಯ ವಾಗುವ ಸಾಧ್ಯತೆಯಿದೆ.

ಮಿನಿ ವಿಧಾನ ಸೌಧದ ಒಳಗಿರುವ ಶೌಚಾಲಯ ವು ಶುಚಿತ್ವ ಇರುವುದಿಲ್ಲ ಶೌಚಾಲಯಕ್ಕೆ ಸಾರ್ವಜನಿಕರು ಹೋಗಲು ಹಿಂದೇಟು ಹಾಕುತ್ತಿದ್ದಾರೆ ಮೊದಲು ಒಳಗಿರುವ ಶೌಚಾಲಯವನ್ನು ಶುಚಿತ್ವ ಗೊಳಿಸಬೇಕೆಂದು ಹಾಗೂ ಮಿನಿ ವಿಧಾನ ಸೌದದ ಎದುರು ಮತ್ತು ಫುಟ್ ಪಾತ್ ನಲ್ಲಿ ನಿರ್ಮಿಸಿತಿರುವ ಶೌಚಾಲಯವನ್ನು ಕೂಡಲೇ ಸೂಕ್ತ ಸ್ಥಳದಲ್ಲಿ ನಿರ್ಮಿಸಬೇಕೆಂದು ಜೆ.ಡಿ.ಯು. ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಮುಖಂಡರಾದ ಸುಪ್ರೀತ್ ಕುಮಾರ್ ಪೂಜಾರಿಯವರು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ .

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು