News Karnataka Kannada
Tuesday, April 30 2024
ಮಂಗಳೂರು

ಬಂಟ್ವಾಳ ಕ್ಷೇತ್ರದಲ್ಲಿ ಶಾಸಕ ರಾಜೇಶ್ ನಾಯ್ಕ್ ಬಿರುಸಿನ ಪ್ರಚಾರ

Bantwal MLA Rajesh Naik campaigns vigorously
Photo Credit : By Author

ಬಂಟ್ವಾಳ: ಜಿಲ್ಲೆಯ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿರುವ ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ,‌ಹಾಲಿ ಶಾಸಕ ರಾಜೇಶ್ ನಾಯ್ಕ್ ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಶನಿವಾರ ತಮಿಳುನಾಡು‌ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಬಂಟ್ವಾಳಕ್ಕೆ ಆಗಮಿಸಿ, ಮತ್ತಷ್ಟು ಹುರುಪು ತುಂಬಿಸಿದ್ದಾರೆ.

ಚುನಾವಣೆಗೆ ದಿನ ಘೋಷಣೆಗೂ ಮುನ್ನವೇ ಈ ಬಾರಿ ತನ್ನ ಸ್ಪರ್ಧೆಗೆ ಪಕ್ಷವೇ ಅವಕಾಶ ಕಲ್ಪಿಸುವ ವಿಶ್ವಾಶ ವ್ಯಕ್ತ ಪಡಿಸಿದ್ದ ಶಾಸಕ ರಾಜೇಶ್ ನಾಯ್ಕ್, ಈ ಬಾರಿ ಮೂರನೇ ಬಾರಿ ಬಂಟ್ವಾಳದ ಹುಲಿ ರಮಾನಾಥ ರೈ ವಿರುದ್ಧ ಸ್ಪರ್ಧೆ ಮಾಡುತ್ತಿದ್ದಾರೆ. 2013 ರ ನೊದಲ ಸ್ಪರ್ಧೆಯಲ್ಲಿ ಸೋಲುಂಡಿದ್ದ ರಾಜೇಶ್ ನಾಯ್ಕ್ 2018 ರಲ್ಲಿ 15 ಸಾವಿರ ಮತಗಳ ಅಂತರದಿಂದ ಜಯಸಾಧಿಸಿದ್ದರು.

ಅದರಂತೆ ಕಳೆದ ನಾಲ್ಕು ವರ್ಷ ಹತ್ತು ತಿಂಗಳ ಅವಧಿಯಲ್ಲಿ ಎರಡು ಸಾವಿರ ಕೋಟಿಗೂ ಅಧಿಕ ಅನುದಾನದ ಮೂಲಕ ಬಂಟ್ವಾಳದಲ್ಲಿ ಅಭಿವೃದ್ಧಿ ಕಾರ್ಯನಡೆಸಿದ್ದಾರೆ. ಅವರದೇ ಮಾತಿನಲ್ಲಿ ಹೇಳುವುದಾದರೆ,” ಬಂಟ್ವಾಳ ಕ್ಷೇತ್ರದ ಶಾಸಕನಾಗಿ ನಿಜವಾದ ರಾಜಧರ್ಮವನ್ನು ಪಾಲಿಸಿ, ಆಡಳಿತ ನಿರ್ವಹಿಸಿದ ತೃಪ್ತಿ ತನಗಿದೆ.

2018 ರಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕನಾಗಿ ಆಯ್ಕೆಯಾದ ಬಳಿಕ ಆರಂಭದಲ್ಲಿ ವಿರೋಧ ಪಕ್ಷದ ಶಾಸಕನಾಗಿದ್ದೆ, ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಬಳಿಕದ ಎರಡು ವರ್ಷ ಕೋವಿಡ್ ಎದುರಾಗಿತ್ತು.‌ಆ ಸಂಕಷ್ಡಗಳ‌ ನಡುವೆಯೂ ಜನರ ಜೊತೆಗಿದ್ದು ಸೇವೆ ನೀಡಿದ ತೃಪ್ತಿ ತನಗಿದೆ. ರಾಜಧರ್ಮವನ್ನು ಪಾಲಿಸಿ ಸವರ್ವಜನರಿಗೂ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ ಎಂದು ನೀಡಿದ ಮಾತಿಗೆ ಬದ್ದನಾಗಿ ಕ್ಷೇತ್ರದ ಜನರ ಹಿತ ಕಾಯುವ ಕೆಲಸ ಮಾಡಿದ್ದೇನೆ.

ಶಾಸಕನಾಗಿ 2 ಸಾವಿರ ಕೋಟಿಗೂ ಅಧಿಕ ಅನುದಾನಗಳ ಮೂಲಕ ಬಂಟ್ವಾಳ ಕ್ಷೇತ್ರದ ಸಮಗ್ರ ಅಭಿವೃದ್ಧಿಯನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ, ನನ್ನ ಅವಧಿಯಲ್ಲಿ  ಬಂಟ್ವಾಳ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೇ ಒಂದು ಕೋಮುಗಲಭೆ, ಅಹಿತಕರ ಘಟನೆಗಳು ನಡೆಯದಿರುವುದು ಬಹಳ ಸಂತೃಪ್ತಿ ತಂದಿದೆ.  ಕುಡಿಯುವ ನೀರು, ರಸ್ತೆ ಸಹಿತ ಜನರ ಮೂಲಭೂತ ಅಗತ್ಯಗಳಿಗೆ ಆದ್ಯತೆ ನೀಡಿರುವುದಾಗಿ ಹೆಮ್ಮೆಯಿಂದ ತಿಳಿಸುವ ಇವರು, ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಸುತ್ತಿರುವ ಬಿರುಸಿನ ಚುನಾವಣಾ ಪ್ರಚಾರದಲ್ಲಿ ಇದನ್ನೇ ಮುಖ್ಯ ವಿಷಯವನ್ನಾಗಿಸಿದ್ದಾರೆ.

ಭಾನುವಾರದಂದು ಕ್ಷೇತ್ರವ್ಯಾಪ್ತಿಯಲ್ಲಿ ಬಿಜೆಪಿ ವತಿಯಿಂದ ಮನೆಮನೆ ಮಹಾ ಅಭಿಯಾನವನ್ನು ಬೂತ್ ಮಟ್ಟದಲ್ಲಿ ನಡೆಸಲಾಗಿದ್ದು, ಬಂಟ್ವಾಳ ಕ್ಷೇತ್ರದಲ್ಲಿ ಅಭೂತಪೂರ್ವ ಸ್ಪಂದನೆ ದೊರೆತಿದೆ. ಪ್ರತಿಷ್ಠಿತ ಕ್ಷೇತ್ರವಾಗಿರುವ ಬಂಟ್ವಾಳಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೇ.6 ರಂದು ಆಗಮಿಸಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ಕಳೆದ ಚುನಾವಣೆಯ ಸಂದರ್ಭದಲ್ಲೂ ಯೋಗಿ ಆದಿತ್ಯ ನಾಥ್ ಭೇಟಿ ಬಂಟ್ವಾಳದ ಬಿಜೆಪಿ ಕಾರ್ಯಕರ್ತರಲ್ಲಿ ಹುರುಪುತುಂಬಿದ್ದು, ಈ ಬಾರಿಯ ಭೇಟಿ ಯಾವ ರೀತಿಯ ಲಾಭ ತಂದುಕೊಡುತ್ತದೆ ಎನ್ನುವುದನ್ನು ಕಾದುನೋಡಬೇಕಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು