News Karnataka Kannada
Friday, May 03 2024
ಮಂಗಳೂರು

ಬಂಟ್ವಾಳ: ಆ.14ರಂದು ಆಟಿದ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ

Bantwal: Kesard Onji Day programme to be held on August 14
Photo Credit : By Author

ಬಂಟ್ವಾಳ: ಸ್ವಾತಂತ್ರ್ಯದ ಅಮೃತಮಹೋತ್ಸವದ ಅಂಗವಾಗಿ ಆಟಿದ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮವು ಪಂಜಿಕಲ್ಲು ಬಾಲೇಶ್ವರ ಗರಡಿ ಗದ್ದೆಯಲ್ಲಿ ಆಗಸ್ಟ್ 14ರಂದು ನಡೆಯಲಿದೆ ಎಂದು ಆಟಿದ ಕೂಟ ಸಮಿತಿ ಗೌರವಾಧ್ಯಕ್ಷ, ಮಾಜಿಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.

ಪಂಜಿಕಲ್ಲಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಳುನಾಡ ಪರಂಪರೆಯ ಖಾದ್ಯ ವೈವಿಧ್ಯದೊಂದಿಗೆ ಪಾರಂಪರಿಕ ಆಟೋಟಗಳು ಇರಲಿವೆ. ಸುಮಾರು ಮೂರು ಸಾವಿರದಷ್ಟು ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಬೆಳಗ್ಗೆ ನಾಚಿಗೆ ಮುಳ್ಳು ಕಷಾಯ, ಬೇಂಗದ ಕೆತ್ತೆ ಕಷಾಯ, ಪತ್ರೋಡೆ, ಪದೆಂಜಿ ಉಪ್ಪುಕರಿ, ಪೆಲಕಾಯಿ ಗಟ್ಟಿ, ಮಧ್ಯಾಹ್ನ ಕಣಿಲೆ ಉಪ್ಪಡ್, ಚೇವು ಸೋನೆ ಸೊಪ್ಪು ಚಟ್ಟಿ, ಉಪ್ಪಡ್ ಪಚ್ಚಲ್ ಪಲ್ಯ, ಕುಡುತ ಸಾರ್ ಕರಿಚೇವು ಅಂಬಡೆ ಗಸಿ, ಪೂಂಬೆ ಚಟ್ಟಿ, ತಜಂಕ್ ಪೆಲತರಿ ಸುಕ್ಕ, ಕಂಚಲ್ ಪೀರೆ ಪೋಡಿ, ಕಜೆ ಅರಿ ನುಪ್ಪು, ಪೆಲಕಾಯಿ ಪಾಯಸ, ಸಂಜೆ ಪೆಲಕಾಯಿ ಗಾರಿ, ಪತ್ರೋಡೆ ಉಪ್ಪುಕರಿ, ರಾಗಿ ಮಣ್ಣಿ, ಕಡುಬು ಮಂಜಲ್ ಇರೆತ ಗಟ್ಟಿ, ತಜಂಕ್ ಅಂಬಡೆ, ಇಂದ್ ಹುಡಿ ಕಷಾಯ ಇರಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಪಿಯೂಸ್ ಎಲ್. ರೋಡ್ರಿಗಸ್, ಸಮಿತಿ ಪ್ರಧಾನ ಕಾರ್ಯದರ್ಶಿ ಸುದರ್ಶನ ಜೈನ್, ಕೋಶಾಧಿಕಾರಿ ದೇವಪ್ಪ ಕುಲಾಲ್, ಸಂಚಾಲಕರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ವಿವಿಧ ಪ್ರಮುಖರಾದ ಪದ್ಮಶೇಖರ ಜೈನ್, ಎಲ್ಲೂರು ರಾಜೀವ ಶೆಟ್ಟಿ, ಪದ್ಮನಾಭ ರೈ, ಸುರೇಶ್ ಜೋರ, ಪ್ರಕಾಶ್ ಕುಮಾರ್ ಜೈನ್, ಕೃಷ್ಣರಾಜ ಜೈನ್, ಸೀತಾರಾಮ ಶೆಟ್ಟಿ ಕಾಂತಾಡಿ, ದಿನೇಶ್ ಶೆಟ್ಟಿ, ಕೇಶವ ಪೂಜಾರಿ, ಸದಾನಂದ ಶೆಟ್ಟಿ, ಚೇತನ್ ಬುಡೋಳಿ, ರಾಜೇಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು