News Karnataka Kannada
Tuesday, April 30 2024
ದೆಹಲಿ

ದೆಹಲಿ: ಆ.12 ರಿಂದ ಸಾರ್ವಜನಿಕ ಮತ್ತು ಖಾಸಗಿ ಲಸಿಕೆ ಕೇಂದ್ರಗಳಲ್ಲಿ ಬೂಸ್ಟರ್ ಡೋಸ್ ಲಭ್ಯ

Delhi: Covid booster doses complete for 10 crore people
Photo Credit :

ದೆಹಲಿ: ಕೊರೋನಾ ವಿರುದ್ಧ ಬೂಸ್ಟರ್ ಡೋಸ್ ಆಗಿ ಕಾರ್ಬೆವ್ಯಾಕ್ಸ್ ಲಸಿಕೆಯನ್ನು ಕೇಂದ್ರ ಸರ್ಕಾರ ಅನುಮೋದಿಸಿದ್ದು, ಈ ಡೋಸ್ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ನೀಡಲಾಗುತ್ತದೆ.

ಕಾರ್ಬೆವ್ಯಾಕ್ಸ್ ತಯಾರಕರಾದ ಬಯೋಜಿಕಲ್ ಇ ಲಿಮಿಟೆಡ್ (BE), ಶುಕ್ರವಾರದಿಂದ ಸಾರ್ವಜನಿಕ ಮತ್ತು ಖಾಸಗಿ ರೋಗನಿರೋಧಕ ಕೇಂದ್ರಗಳಲ್ಲಿ ಕಾರ್ಬೆವಾಕ್ಸ್ ಬೂಸ್ಟರ್ ಡೋಸ್ ಲಭ್ಯವಿರುತ್ತದೆ ಎಂದು ಹೇಳಿದರು.

ಕಾರ್ಬೆವ್ಯಾಕ್ಸ್ ಲಸಿಕೆಯು ಆಗಸ್ಟ್ 12, 2022ರಿಂದ ಸಾರ್ವಜನಿಕ ಮತ್ತು ಖಾಸಗಿ ಲಸಿಕೆ ಕೇಂದ್ರಗಳಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ. ನೀವು ಅದನ್ನ ಕೋವಿನ್ ಅಪ್ಲಿಕೇಶನ್ ಮೂಲಕ ಬುಕ್ ಮಾಡಬಹುದು.

ಖಾಸಗಿ ಕೋವಿಡ್-19 ಲಸಿಕೆ ಕೇಂದ್ರಗಳಿಗೆ ಕಾರ್ಬೆವ್ಯಾಕ್ಸ್ ವೆಚ್ಚವು 250 ರೂ.ಗಳು, ಇದು ಸರಕು ಮತ್ತು ಮಾರಾಟ ತೆರಿಗೆಯನ್ನ ಒಳಗೊಂಡಿರುತ್ತದೆ. ಅಂತಿಮ ಬಳಕೆದಾರರಿಗೆ, ಲಸಿಕೆ 400 ರೂ.ಗಳು, ತೆರಿಗೆಗಳು ಮತ್ತು ಆಡಳಿತಾತ್ಮಕ ಶುಲ್ಕಗಳನ್ನ ಒಳಗೊಂಡಿರುತ್ತದೆ’ ಎಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು