News Karnataka Kannada
Friday, May 03 2024
ಮಂಗಳೂರು

ಬಂಟ್ವಾಳ: ರೈತರ ಜಾನಪದ ಕ್ರೀಡೆಯನ್ನು ಉಳಿಸಿ, ಬೆಳೆಸಬೇಕು- ರಾಜೇಶ್ ನಾಯ್ಕ್ ಉಳಿಪಾಡಿಗುತ್ತು

Bantwal: Farmers' folk sport should be preserved and nurtured: Rajesh Naik
Photo Credit : By Author

ಬಂಟ್ವಾಳ: ನಮ್ಮ ಮೂಲ ಸಂಸ್ಕೃತಿಯ ಜತೆ ರೈತರ ಜಾನಪದ ಕ್ರೀಡೆಯನ್ನು ಉಳಿಸಿ, ಬೆಳೆಸಬೇಕು. ತೀರಾ ಗ್ರಾಮೀಣ ಪ್ರದೇಶದಲ್ಲಿ ಕಂಬಳವನ್ನು ವ್ಯವಸ್ಥಿತವಾಗಿ ಸಂಘಟಿಸಿದ ಶ್ರೀ ರಾಮಾಂಜನೇಯ ಗೆಳೆಯರ ಬಳಗ ಅಭಿನಂದನೀಯರು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಹೇಳಿದರು.

ಅವರು ಬಂಟ್ವಾಳ ತಾಲೂಕು ಉಳಿ ಗ್ರಾಮದ ಕಕ್ಯಪದವಿನ ಮೈರ ಬರ್ಕೆಜಾಲು ನಲ್ಲಿ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ ನ.೨೬ರಂದು ನಡೆದ ದಶಮಾನೋತ್ಸವದ ಹೊನಲು ಬೆಳಕಿನ ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ರಾಜ್ಯ ಸರಕಾರದ ಐಪಿಎಸ್ ಅಧಿಕಾರಿ ಡಾ.ಬಿ.ಎಸ್.ಹರ್ಷ , ಪ್ರಮುಖರಾದ ಜಗನ್ನಾಥ ನಿರ್ಮಲ್ ನರಿಕೊಂಬು, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ರೋಹಿತ್ ಹೆಗ್ಡೆ ಎರ್ಮಾಳ್, ಪ್ರ.ತೀರ್ಪುಗಾರ ಗುಣಪಾಲ ಕಡಂಬ, ಜಗದೀಶ್ ಶೆಟ್ಟಿ ಬೋಳದಗುತ್ತು, ಸಂದೀಪ್ ಶೆಟ್ಟಿ ಪೊಡುಂಬ, ಯಶೋಧರ ಕರ್ಬೆಟ್ಟು, ಕಂಬಳ ಸಮಿತಿ ಅಧ್ಯಕ್ಷ ಕುಸುಮಾಧರ ಉರ್ಕಿ, ಬಿಜೆಪಿ ಬಂಟ್ವಾಳ ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ, ಕಂಬಳ ಸಮಿತಿ ನಿಕಟ ಪೂರ್ವ ಅಧ್ಯಕ್ಷ ಹರೀಶ್ಚಂದ್ರ ಪೂಜಾರಿ, ಉಳಿ ಗ್ರಾ.ಪಂ.ಅಧ್ಯಕ್ಷ ಸುರೇಶ್ ಮೈರ,ಉಪಾಧ್ಯಕ್ಷ ಚಿದಾನಂದ ರೈ ಕಕ್ಯ, ಧನಂಜಯ ಶೆಟ್ಟಿ, ರಾಮದಾಸ್ ಬಂಟ್ವಾಳ, ಡೊಂಬಯ ಅರಳ, ಪ್ರಕಾಶ್ ಅಂಚನ್, ನಟೇಶ್ ಪೂಜಾರಿ, ಪ್ರಭಾಕರ ಪ್ರಭು, ಹರ್ಷಿಣಿ ಪುಷ್ಪಾನಂದ, ರಮಾನಾಥ ರಾಯಿ, ನಂದರಾಮ ರೈ, ಗಣೇಶ್ ರೈ ಮಾಣಿ, ಪುರುಷೋತ್ತಮ ಶೆಟ್ಟಿ, ಶಶಿಕಾಂತ ಶೆಟ್ಟಿ, ಸಾಯಿ ಗಿರಿಧರ್ ಶೆಟ್ಟಿ ನಡುಮೊಗರು, ಡಾ. ಅಶ್ವಿನ್ ಸುರ್ ಕಾಮತ್, ಅಬ್ದುಲ್ ಖಾದರ್ ಇಕ್ರಾ, ಕಂಬಳ ಸಮಿತಿ ಪದಾಧಿಕಾರಿಗಳಾದ ತುಷಾರ್ ಭಂಡಾರಿ, ಲತೀಶ್ ಕುಕ್ಕಾಜೆ, ಸಾಂತಪ್ಪ ಪೂಜಾರಿ , ದಿನೇಶ್ ಕುಕ್ಕಾಜೆ, ಸುದರ್ಶನ್ ಬಜ, ಹಟದಡ್ಕ, ಸುಧಾಕರ ಶೆಟ್ಟಿ,ಉಮೇಶ್ ಪೂಜಾರಿ,ಪುರಂದರ ,ಪುರುಷೋತ್ತಮ ಪೂಜಾರಿ ಪಲ್ಕೆ,ಧರ್ಣಪ್ಪ ಪೂಜಾರಿ, ರಂಜಿತ್ ಮೈರಾ, ವಸಂತ ಸಾಲ್ಯಾನ್, ಸುರೇಶ್ ಪೂಜಾರಿ ಬಾರ್ದೊಟ್ಟು, ಶಿವಪ್ಪ ಪೂಜಾರಿ, ವಸಂತ ಡೆಚ್ಚಾರು ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಾಧಕರಾದ ಸಂಜೀವ ಶೆಟ್ಟಿ ಕಿಂಜಾಲು, ಶಿವಪ್ಪ ಪೂಜಾರಿ ಜೇಡರಬೆಟ್ಟು, ಬಾಲಕೃಷ್ಣ ಗೌಡ ಬಂಗಾಡಿ,ವಜ್ರ ಪೂಜಾರಿ, ಮೋನಪ್ಪ ಸಾಲ್ಯಾನ್, ವೈಭವ್‌ಕೆ. ಅರ್ಮುಡ್ತಾಯಅವರನ್ನು ಸಮ್ಮಾನಿಸಲಾಯಿತು.

ಶಿವಾನಂದ ಮೈರಾ ಪ್ರಸ್ತಾವಿಸಿ, ಸ್ವಾಗತಿಸಿದರು. ಶ್ರೀ ರಾಮಾಂಜನೇಯ ಗೆಳೆಯರ ಬಳಗದ ಅಧ್ಯಕ್ಷ ಲಕ್ಷ್ಮಣ ಪೂಜಾರಿ ನೇರಳಪಲ್ಕೆ ವಂದಿಸಿದರು ಪುರಂದರ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.

ಕಂಬಳ ಋತುವಿನ ಪ್ರಥಮ ಕಂಬಳದಲ್ಲಿ ದಾಖಲೆಯ ೨೧೩ ಜತೆ ಕೋಣಗಳು ವಿವಿಧ ವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು