News Karnataka Kannada
Friday, May 17 2024
ಮಂಗಳೂರು

ಬಂಟ್ವಾಳ: ಫ್ಯಾನ್ಸಿ ಅಂಗಡಿಗಳ ಮುಂದೆ ರಾರಾಜಿಸುತ್ತಿದೆ ಗೂಡು ದೀಪಗಳು

Bantwal: fancy shops
Photo Credit : By Author

ಬಂಟ್ವಾಳ: ಬೆಳಕಿನ ಹಬ್ಬ ದೀಪಾವಳಿಗೆ ನಾಡಿನೆಲ್ಲೆಡೆ ಭರದ ಸಿದ್ದತೆ ನಡೆಯುತ್ತಿದ್ದು, ಬಂಟ್ವಾಳ ತಾಲೂಕಿನಲ್ಲಿಯೂ ಪಟಾಕಿ ಮಳಿಗೆಗಳು ಗಮನ ಸೆಳೆಯುತ್ತಿದ್ದು, ಫ್ಯಾನ್ಸಿ ಅಂಗಡಿಗಳ ಮುಂದೆ ಗೂಡು ದೀಪಗಳು ರಾರಾಜಿಸುತ್ತಿದೆ.

ಕಳೆದ ಎರಡು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಕಳೆಗುಂದಿದ್ದ ಪಟಾಕಿ ಅಬ್ಬರ ಈ ವರ್ಷ ದ ದೀಪಾವಳಿಗ ಮಾರುಕಟ್ಟೆಯಲ್ಲಿ ಪಟಾಕಿ ಖರೀದಿಗೆ ಸಾರ್ವಜನಿಕರು ಹೆಚ್ಚಿನ ಉತ್ಸಾಹ ತೋರುತ್ತಿದ್ದಾರೆ.

ಬಹುತೇಕ ಅಂಗಡಿಗಳಲ್ಲಿ ಭಾನುವಾರವಾದರೂ ಹೆಚ್ಚಿನ ಜನ ಸಂದಣಿ ಇದ್ದು, ಥರಥರದ ಪಟಾಕಿಗಳು ಪಟಾಕಿಪ್ರಿಯರನ್ನು ಆಕರ್ಷಿಸುತ್ತಿದೆ.

ಬಣ್ಣ ಬಣ್ಣದ ಪಟಾಕಿಗಳು ಓಲೆಪಟಾಕಿ, ಬೀಡಿ ಪಟಾಕಿ, ಮಳೆ, ಮಾಲೆ, ಬಾಣ ಪಟಾಕಿಗಳು, ರಾಕೆಟ್‌, ಹೂವಿನ ಕುಂಡಗಳು, ಕಲರ್‌ ಚೇಂಜಿಂಗ್‌ ಬಟರ್‌ ಫ್ಲೈ, ಡಕ್‌, ಲಯನ್‌, ಸ್ಟಾರ್‌ ಬರ್ಸ್ಡ್ ಕ್ರ್ಯಾಕಿಂಗ್‌ ಫ್ಲವರ್‌ ಪಾಟ್‌ ಸೇರಿದಂತೆ ಇನ್ನೂ ಅನೇಕ ಹೊಸ ಮಾದರಿಯ ಪಟಾಕಿಗಳು ಮಾರುಕಟ್ಟೆಯಲ್ಲಿದೆ. ಅಲ್ಲದೆ, “ವಿಂಗ್ಸ್‌ ಫೌಂಟೇನ್‌’, ಟೂ ಪ್ಲಸ್‌ ಒನ್‌ ಎಂಬ ಹೂದಾನಿ, ಹೂದಾನಿ ಪಟಾಕಿ,ಬಟರ್‌ಫ್ಲೈ ಎಂಬ ಪಟಾಕಿ ಸೇರಿದಂತೆ ವಿವಿಧ ಮಾದರಿಯ ಪಟಾಕಿಗಳು ಈ ಬಾರಿ ಮಾರುಕಟ್ಟೆಗೆ ಬಂದಿದೆ.

ಇನ್ನು ಮಣ್ಣಿನ ದೀಪಗಳು 2 ರೂಪಾಯಿಂದ ಆರಂಭಗೊಂಡು,60 ರೂ ಗಳವರೆಗೆ ದರ ಹೊಂದಿದ್ದರೆ, ಕ್ಯಾಂಡಲ್ ಸೇರಿದಂತೆ, ಎಲ್ ಇಡಿ ದೀಪಗಳು ದೀಪಾವಳಿಗೆ ಡಿಜಿಟಲ್ ಲುಕ್ ನೀಡಲು ಸಜ್ಜಾಗಿದೆ. ಊರ ಮಣ್ಣಿನ‌ದೀಪಗಳ ಜೊತೆಗೆ ತಮಿಳು ನಾಡಿನಿಂದ ಸರಬರಾಜಾದ ಮಣ್ಣಿನ ಹಣತೆಗಳೂ ಬಿ.ಸಿ.ರೋಡಿನಲ್ಲಿ‌ ಲಭ್ಯವಿದ್ದು ಗ್ರಾಹಕರನ್ನು ಆಕರ್ಷಿಸುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು