News Karnataka Kannada
Monday, May 06 2024
ಮಂಗಳೂರು

ಬಂಟ್ವಾಳ: ಕೆ.ಜೆ.ಹಳ್ಳಿ-ಡಿ.ಜೆ.ಹಳ್ಳಿ ಗಲಭೆ ಪ್ರಕರಣದ ಆರೋಪಿಯನ್ನು ವಶಕ್ಕೆ ಪಡೆದ ಬೆಂಗಳೂರು ಪೋಲಿಸರು

Bantwal: Bengaluru police have taken into custody the accused in the K J Halli-DJ Halli riots case.
Photo Credit : By Author

ಬಂಟ್ವಾಳ: ಬೆಂಗಳೂರು ಕೆ.ಜೆ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ನಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಬಂಟ್ವಾಳ ತಾಲೂಕಿನ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ಬೊಳಂತೂರು ನಿವಾಸಿಯೋರ್ವನನ್ನು ವಶಕ್ಕೆ ಪಡೆದುಕೊಂಡು ಹೆಚ್ಚಿನ ವಿಚಾರಣೆಯ ದೃಷ್ಟಿಯಿಂದ ಬೆಂಗಳೂರು ಪೋಲಿಸರಿಗೆ ಒಪ್ಪಿಸಿದ್ದಾರೆ.

ಬೊಳಂತೂರು ನಿವಾಸಿ ಮಹಮ್ಮದ್ ಕುಟ್ಟಿ ಅವರ ಪುತ್ರ ಮಹಮ್ಮದ್ ತಪ್ಸೀರ್ ಬಂಧಿತ ಆರೋಪಿ.

ಘಟನೆ ವಿವರ
ಬಂಟ್ವಾಳ ತಾಲೂಕಿನ ಬೊಳಂತೂರು ನಿವಾಸಿ ಮಹಮ್ಮದ್ ತಪ್ಸೀರ್ ಎಂಬಾತನನ್ನು ಬಂಟ್ವಾಳ , ವಿಟ್ಲ ಪೋಲೀಸರು ಇಂದು ಸುಮಾರು 11.35 ರ ವೇಳೆ ಆತನ ಮನೆಯಿಂದ ವಶಕ್ಕೆ ಪಡೆದುಕೊಂಡು ಬಂಟ್ವಾಳಕ್ಕೆ ಕರೆತಂದಿದ್ದಾರೆ. ಆ ಬಳಿಕ ರಾಜ್ಯ ಪೋಲೀಸರಿಗೆ ಒಪ್ಪಿಸಿದ್ದಾರೆ.

ಕಳೆದ ವರ್ಷ ಬೆಂಗಳೂರಿನ ಕೆ.ಜೆ.ಡಿ.ಜೆ.ಹಳ್ಳಿಯಲ್ಲಿ ಅಖಂಡ ಶ್ರೀನಿವಾಸ ಅವರ ಮನೆಗೆ ದಾಂಧಲೆ ನಡೆಸಿ ಅ ಬಳಿಕ ಪೋಲಿಸ್ ಠಾಣೆಗೆ ನುಗ್ಗಲು ಪ್ರಯತ್ನಿಸಿ ಸಾಕಷ್ಟು ಹಾನಿ ಉಂಟು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಪೋಲೀಸರ ತಂಡ ತನಿಖೆ ನಡೆಸುತ್ತಿತ್ತು .

ಸದ್ರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಮ್ಮದ್ ತಪ್ಸೀರ್ ಕೂಡ ಭಾಗಿಯಾಗಿದ್ದ ಎಂಬ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗಿದೆ.

ಪ್ಲಾನ್ ರೂಪಿಸಿದ್ದು ಈತನಂತೆ..!

ಕೆ.ಜೆ.ಹಳ್ಳಿ ಡಿ.ಜೆ ಹಳ್ಳಿ ಪ್ರಕರಣಕ್ಕೆ ಆರಂಭದಲ್ಲಿ ಯೋಜನೆ ರೂಪಿಸಿದ ತಂಡದ ಜೊತೆಗೆ ಈತ ನಿರಂತರವಾಗಿ ಸಂಪರ್ಕವನ್ನು ಇರಿಸಿಕೊಂಡಿದ್ದ ಎಂಬ ಆರೋಪದಲ್ಲಿ ಈತನ ಮನೆಗೆ ದಾಳಿ ನಡೆಸಲಾಗಿದೆ.

ಸಂಘಟನೆಯ ಪ್ರಮುಖ
ತಪ್ಸೀರ್ ಪಿ.ಎಫ್.ಐ‌.ಸಂಘಟನೆಯ ಪ್ರಮುಖ ಜವಬ್ದಾರಿ ನಿರ್ವಹಿಸಿದ್ದ ಈತ ಇತ್ತೀಚಿನ ದಿನಗಳಲ್ಲಿ ಪ್ರಮುಖವಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುತಿಸಿ ಕೊಂಡಿದ್ದ ಎನ್ನಲಾಗಿದೆ. ಪ್ರಸ್ತುತ ಈತ ಉದ್ಯಮ ನಡೆಸುತ್ತಿದ್ದು,ಬೋಳಂತೂರಿನಲ್ಲಿ ವಾಸವಾಗಿದ್ದ.

ಮುಂಜಾನೆ 3.30 ಕ್ಕೆ ದಾಳಿ
ಬಂಟ್ವಾಳ ಹಾಗೂ ವಿಟ್ಲ ಪೋಲಿಸರ ತಂಡ ಮುಂಜಾನೆ ಮೂರು ಗಂಟೆಗೆ ರಾಜ್ಯದ ಪೋಲೀಸರು ನೀಡಿದ ವಿಳಾಸದಂತೆ ಬಂಟ್ವಾಳ ತಾಲೂಕಿನ ಅಮ್ಟೂರು ಗ್ರಾಮದಲ್ಲಿರುವ ಈತನ ದೊಡ್ಡಪ್ಪ ನ ಮನೆಗೆ ಈತನ ಮನೆ ಎಂದು ತಪ್ಪಾಗಿ ಗ್ರಹಿಸಿ ಮನೆಗೆ ಹೋದಾಗ ಇಲ್ಲಿ ಈತ ಇಲ್ಲ ಬೊಳಂತೂರಿನಲ್ಲಿ ವಾಸವಾಗಿದ್ದಾನೆ. ಆದರೆ ಈತನ ವಿಳಾಸ ಮಾತ್ರ ದೊಡ್ಡಪ್ಪನ ಮನೆಯದ್ದು ನೀಡಿದ್ದ ಎಂಬುದು ಗೊತ್ತಾದ ಬಳಿಕ ರೈಡ್ ಮಾಡಲಾಯಿತು. ಅಗತ್ಯ ದಾಖಲೆಗಳ ಸಹಿತ ಆರೋಪಿ ಮೊಬೈಲ್ ಜೊತೆ ಮನೆಯವರ ಮೊಬೈಲ್ ಗಳನ್ನು ಪೋಲೀಸರು ‌ವಶಕ್ಕೆ ಪಡೆದುಕೊಂಡಿದ್ದಾರೆ.

ಗೋ..ಬ್ಯಾಕ್ ಗೋಬ್ಯಾಕ್ ಘೋಷಣೆ

ಬೆಂಗಳೂರು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಪೋಲೀಸರ ನಿರ್ದೇಶನದಂತೆ ಬಂಟ್ವಾಳ ಪೋಲೀಸರ ತಂಡ ಮನೆಗೆ ದಾಳಿ ನಡೆಸಿದಾಗ ಸ್ಥಳೀಯ ಸಂಘಟನೆಯ ಪ್ರಮುಖರು ಮನೆ ಮುಂದು ಸುಮಾರು 250 ಕ್ಕೂ ಅಧಿಕ ಜನರ ತಂಡ ಎನ್. ಐ.ಎ ಗೋ ಬ್ಯಾಕ್ ಗೋ ಬ್ಯಾಕ್ ಎಂದು ಘೋಷಣೆ ಕೂಗಿದರು.

ಆದರೆ ನಾವು ಬಂಟ್ವಾಳ ಪೋಲೀಸರು ಎನ್.ಐ.ಎ.ಅಲ್ಲ ಎಂಬ ವಿಚಾರ ತಿಳಿದು ಬಳಿಕ ಯಾಕೆ ಬಂದಿದ್ದು, ಯಾವ ವಿಚಾರ ನಮಗೆ ತಿಳಿಸಬೇಕು ಎಂದು ಒತ್ತಾಯ ಮಾಡಿದಾಗ ಗದರಿಸಿ ಗುಂಪು ಚದುರಿಸಿದರು.

ತಮ್ಮನ ಮದುವೆ
ಬಂಧಿತನಾದ ತಪ್ಸೀರ್ ಮನೆ ಮದುವೆಯ ಸಂಭ್ರಮದಲ್ಲಿದೆ. ಈತನ ಸಹೋದರನ ಮದುವೆಗಾಗಿ ಎಲ್ಲಾ ಪೂರ್ವ ತಯಾರಿಗಳು ನಡೆಯುತ್ತಿದೆ . ಆದರೆ ಈ ಮಧ್ಯೆ ಈತನ ಬಂಧನವಾಗಿರುವುದು ಕುಟುಂಬದ ಸದಸ್ಯರಿಗೆ ದುಃಖ ತಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು