ಬೆಳ್ತಂಗಡಿ : ಕೊಯ್ಯೂರು ಗ್ರಾಮದ ಕೊಪ್ಪದಬೈಲು ನಿವಾಸಿ, ಪ್ರಗತಿಪರ ಕೃಷಿಕ, ಹಿರಿಯ ಸಾಮಾಜಿಕ ಮುಂದಾಳು ಐ.ಎಲ್ ಪಿಂಟೋ (65)(ಇಸಿದೋರ್ ಲಿಯೋ ಪಿಂಟೋ) ಅಲ್ಪಕಾಲದ ಅಸೌಖ್ಯದಿಂದ ಇಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಬೆಳ್ತಂಗಡಿ ಕೆಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ, ಚರ್ಚ್ ಪಾಲನಾ ಮಂಡಳಿಯಲ್ಲಿ ಪದಾಧಿಕಾರಿಯಾಗಿ, ಆರ್ಥಿಕ ಮಂಡಳಿಯಲ್ಲಿ ಅಧ್ಯಕ್ಷರಾಗಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು.
ಮೃತರು ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.