News Karnataka Kannada
Saturday, May 11 2024
ಮಂಗಳೂರು

‘ಶೌರ್ಯ’ ಶ್ರೀ ಧರ್ಮಸ್ಥಳ ವಿಪತ್ತು ಸೇವಾ ಸಮಿತಿ : ಶ್ರೀ ಕ್ಷೇತ್ರ ಧರ್ಮಸ್ಥಳ

New Project (3)
Photo Credit :

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸಮಾಜದಲ್ಲಿ ಹಲವಾರು ರೀತಿಯ ಜನಪರ ಕಾರ್ಯಕ್ರಮಗಳು ಹಾಗೂ ಜನರನ್ನು ಸುಶಿಕ್ಷಿತರನ್ನಾಗಿಸುವ ಹಲವಾರು ಯೋಜನೆಗಳನ್ನು ಕಳೆದ ನಾಲ್ಕು ದಶಕಗಳಿಂದ ಹಮ್ಮಿಕೊಂಡು ಬರಲಾಗಿದೆ. ಇದಕ್ಕೆ ಇನ್ನೊಂದು ಸೇರ್ಪಡೆ ಎಂದರೆ ವಿಪತ್ತು ನಿರ್ವಹಣಾ ಕಾರ್ಯಕ್ರಮ ಎಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೇಂದ್ರಕಛೇರಿಯ ಸಭಾಭವನದಲ್ಲಿ ‘ಶೌರ್ಯ’ ಶ್ರೀ ಧರ್ಮಸ್ಥಳ ವಿಪತ್ತು ಸೇವಾ ಸಮಿತಿಯ ಸಂಯೋಜಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು
ವಿಪತ್ತುಗಳು ಹೇಳಿ ಕೇಳಿ ಬರುವುದಿಲ್ಲ. ಇಂತಹ ಸಂದರ್ಭದಲ್ಲಿ ಜನರಿಗೆ ನೆರವು ನೀಡುವ ಆಪತ್ಭಾಂಧವರ ಅವಶ್ಯಕತೆ ಇದೆ. ಅಪಾಯದ ಸ್ಥಳಗಳಿಂದ ಉಪಾಯದಿಂದ ಕೌಶಲ್ಯಗಳನ್ನು ಬಳಸಿ ಜೀವಹಾನಿ, ಆಸ್ತಿ ಹಾನಿಗಳನ್ನು ತಪ್ಪಿಸಲು ಬೇಕಾದ ಪ್ರಾಮಾಣಿಕ ಪ್ರಯತ್ನ ಮಾಡುವ ಪಡೆಯೇ ‘ಶ್ರೀ ಧರ್ಮಸ್ಥಳ ಶೌರ್ಯ ತಂಡ’ವಾಗಿದೆ. ಈಗಾಗಲೇ ರಾಜ್ಯದಲ್ಲಿ 32 ತಾಲೂಕುಗಳಲ್ಲಿ ಈ ಕಾರ್ಯಕ್ರಮವನ್ನು ಅನುಷ್ಠಾನ ಮಾಡಿ ಜನರಿಗೆ ಅಭಯ ನೀಡಲಾಗಿದೆ. ಕಷ್ಟಕಾಲದಲ್ಲಿ ತಕ್ಷಣ ಪ್ರತಿಕ್ರಿಯೆ ನೀಡುವ ಮನಸ್ಸು, ಉತ್ಸಾಹ, ಧೈರ್ಯ ಇರುವವರಿಗೆ ಮಾತ್ರ ಈ ತಂಡದಲ್ಲಿ ಕೆಲಸ ಮಾಡಲು ಸಾಧ್ಯ. ಈಗಾಗಲೇ ಸುಮಾರು 6908 ವಿಪತ್ತು ಸೇವಾಕಾರ್ಯಗಳು, 7697 ಸಾಮಾಜಿಕ ಸೇವಾಕಾರ್ಯಗಳನ್ನು ಮಾಡುತ್ತಾ ಕೇವಲ ಒಂದು ವರ್ಷ 7 ತಿಂಗಳಲ್ಲಿ 43815 ಮಾನವ ದಿನಗಳನ್ನು ವಿನಿಯೋಗಿಸಿ ಸಮಾಜದ ನಿಜವಾದ ಸೇವಕರಾಗಿ ಶ್ರಮಿಸಿರುವುದು ಶ್ರೇಷ್ಠ ಸಾಧನೆಯಾಗಿದೆ ಎಂದರು.
ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದ ಅಧ್ಯಕ್ಷರಾದ ಹೇಮಾವತಿ ವಿ. ಹೆಗ್ಗಡೆಯವರು ಆಡಿಯೋ ಸಂದೇಶದಲ್ಲಿ ಮಾತನಾಡುತ್ತಾ ‘ಶೌರ್ಯ ಕಾರ್ಯಕ್ರಮದಿಂದ ಜನರಲ್ಲಿರುವ ವಿಪತ್ತಿನ ಭಯ ಕಡಿಮೆಯಾಗಿದೆ. ಯಾವುದೇ ಸಂದರ್ಭದಲ್ಲೂ ಶೌರ್ಯ ತಂಡ ಸಮಾಜ ಸೇವೆಗೆ ತಯಾರಾಗಿ ನಿಂತಿದೆ. ಸ್ವಯಂ ಜಾಗ್ರತೆಯಿಂದ ಇತರರನ್ನೂ ಕಾಪಾಡುವ ಬಗ್ಗೆ ಗಮನ ಹರಿಸಿ ಶೌರ್ಯ ತಂಡದ ಕೀರ್ತಿ ಪತಾಕೆಯನ್ನು ಹಾರಿಸುವಂತಾಗಬೇಕು’ ಎಂದು ತಿಳಿಸಿದರು.
ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಹೆಚ್. ಮಂಜುನಾಥ್ ರವರು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ ‘ಶೌರ್ಯ ತಂಡದ ಸಂಯೋಜಕರು ಘಟಕದ ಮೇಲ್ವಿಚಾರಕರಿದ್ದಂತೆ. ತಮ್ಮ ತಂಡವನ್ನು ಮುನ್ನಡೆಸುವುದರ ಜೊತೆಗೆ ಕಾರ್ಯಕ್ರಮವನ್ನು ಪ್ರೀತಿಸಿ ಬೆಳೆಸುವ ಜವಾಬ್ದಾರಿಯನ್ನು ವಹಿಸುವುದು ಅವಶ್ಯಕವಾಗಿದೆ’ ಎಂದರು.
ಯೋಜನೆಯ ಮುಖ್ಯ ನಿರ್ವಹಣಾಧಿಕಾರ ಅನಿಲ್ ಕುಮಾರ್, ಜನಜಾಗೃತಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ. ಪಾೈಸ್, ಉರಗ ತಜ್ಞ ಸ್ನೇಕ್ ಜೋಯ್ ಉಜಿರೆ, ವಿಪತ್ತು ನಿರ್ವಹಣಾ ವಿಭಾಗದ ಯೋಜನಾಧಿಕಾರಿ ಜೈವಂತ್ ಪಟಗಾರ್, ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ಮೋಹನ್ ಕೆ., ಮಾಧವ, ಯೋಜನಾಧಿಕಾರಿ ಜಯಕರ ಶೆಟ್ಟಿ, ಯಶವಂತ ಸಾಲ್ಯಾನ್ ತರಬೇತಿಯ ಮೇಲ್ವಿಚಾರಕ ದಿನೇಶ್ ಮರಾಠಿ ಉಪಸ್ಥಿತರಿದ್ದರು.
ಶ್ರೀ ಧರ್ಮಸ್ಥಳ ಮೆಡಿಕಲ್ ಟ್ರಸ್ಟ್‍ನ ಕಾರ್ಯದರ್ಶಿ ಶಿಶುಪಾಲ್ ಪೂವಣಿ, ಜಾಗೃತಿ ಸೌಧ ಕಟ್ಟಡದ ಮೇಲ್ವಿಚಾರಕ ಕಿಶೋರ್ ಕಾರ್ಯಕ್ರಮಕ್ಕೆ ಸಹಕರಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು