ವಿಟ್ಲ: ಇಲ್ಲಿನ ಅಳಿಕೆ ಗ್ರಾಮದ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತದಿಂದಾಗಿ ಸಾವನ್ನಪ್ಪಿದ ಘಟನೆ ಬುಧವಾರ ನಡೆದಿದೆ.
ಅಳಿಕೆ ನಿವಾಸಿ ಅನ್ವಿತಾ ಹೆಗ್ಡೆ ಮೃತ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ.
ಬುಧವಾರ ಮುಂಜಾನೆ ಹೃದಯಾಘಾತವಾಗಿದೆ. ಅನ್ವಿತಾ ಸಾವನ್ನಪ್ಪಿದ ಕಾರಣ ಶಾಲೆಗೆ ರಜೆ ನೀಡಲಾಗಿದೆ. ಮೃತರು ತಂದೆ-ತಾಯಿಯನ್ನು ಅಗಲಿದ್ದಾರೆ.