News Karnataka Kannada
Thursday, May 02 2024
ಸಾಂಡಲ್ ವುಡ್

ಸಿನಿಮಾರಂಗದಲ್ಲಿ ಲಿಂಗ ತಾರತಮ್ಯವಿದೆ ಎಂದ ಮೋಹಕ ತಾರೆ ರಮ್ಯಾ

Ramya
Photo Credit :

ಸಾಮಾಜಿಕ ಮಾಧ್ಯಮದಲ್ಲಿ ಸಖತ್‌ ಆಕ್ಟಿವ್‌ ಆಗಿರುವ ಸ್ಯಾಂಡಲ್‌ವುಡ್‌ ಮೋಹಕ ತಾರೆ ರಮ್ಯಾ, ಇದೀಗ ಚಿತ್ರರಂಗದ ಕಹಿ ಸತ್ಯದ ಬಗ್ಗೆ ಮೌನ ಮುರಿದಿದ್ದಾರೆ. ನಟಿ ರಮ್ಯಾ ಅವರು ಹಲವು ವಿಷಯಗಳ ಕುರಿತು ಪ್ರತಿಕ್ರಿಯಿಸುತ್ತಾರೆ. ನಟಿ ರಮ್ಯಾ ಸಿನಿಮಾರಂಗಕ್ಕೆ ಸಂಬಂಧಪಟ್ಟ ವಿಚಾರಗಳ ಕುರಿತು ಆಗಾಗ ಮಾತನಾಡುತ್ತಿರುತ್ತಾರೆ.

ಇದೀಗ ಸಿನಿಮಾರಂಗದ ಮತ್ತೊಂದು ಮುಖದ ಬಗ್ಗೆ ಮಾತನಾಡಿದ್ದಾರೆ. ಚಿತ್ರರಂಗದಲ್ಲಿ ಇರುವ ಲಿಂಗ ತಾರತಮ್ಯದ ಬಗ್ಗೆ ರಮ್ಯಾ ಮಾತನಾಡಿದ್ದು, ನಟರಿಗೆ ಇರುವ ಮಾನ್ಯತೆ, ನಟಿಯರಿಗೆ ಇಲ್ಲ ಎಂಬ ವಿಚಾರದ ಬಗ್ಗೆ ತಮ್ಮ ಮೌನ ಮುರಿದಿದ್ದಾರೆ.

ಈ ಕುರಿತು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿರುವ ನಟಿ ರಮ್ಯಾ, ಸಿನಿಮಾರಂಗ ಹೇಗಿದೆ? ಇಲ್ಲಿ ನಟಿಯರನ್ನು ಯಾವ ರೀತಿ ಅಳೆಯಲಾಗುತ್ತೆ? ಎಂಬ ವಿಚಾರಗಳ ಬಗ್ಗೆ ಮೌನ ಮುರಿದಿದ್ದಾರೆ. ಈ ಮೂಲಕ ಬಣ್ಣದ ಜಗತ್ತಿನ ಕಹಿ ಸತ್ಯದ ಕುರಿತು ಮಾತನಾಡಿದ್ದಾರೆ. ಚಿತ್ರರಂಗದಲ್ಲಿ ಮಿಂಚಬೇಕು ಎಂದು ಕನಸು ಕಂಡಿದ್ದ ಯುವನಟಿ ಚೇತನಾ ರಾಜ್ (22) ನಿಧನರಾಗಿದ್ದು ನೋವಿನ ಸಂಗತಿ. ಮೇ 17ರಂದು ಅವರು ಫ್ಯಾಟ್​ ಸರ್ಜರಿ ವೈಫಲ್ಯದಿಂದ ವಿಧಿವಶರಾದರು. ಈ ಘಟನೆ ಕುರಿತು ನಟಿ ರಮ್ಯಾ ಇದೀಗ ಪ್ರತಿಕ್ರಿಯಿಸಿದ್ದಾರೆ.

“ಪುರುಷನಾದವನು ಡೊಳ್ಳುಹೊಟ್ಟೆ ಇಟ್ಟುಕೊಂಡು, ತಲೆಕೂದಲು ಉದುರಿ ಹೋಗಿ ವಿಗ್​ ಹಾಕಿಕೊಂಡರೂ ಹೀರೋ ಅಂತ ಪರಿಗಣಿಸಲಾಗುತ್ತದೆ. . ಮುಖದಲ್ಲಿ ಒಂದೊಂದು ಗಲ್ಲ 5 ಕೆಜಿ ಇದ್ದರೂ ಸಮಸ್ಯೆಯಿಲ್ಲ. 65 ವರ್ಷವಾದರೂ ಅವರು ಹೀರೋ. ಆದರೆ ಇದೇ ತೂಕ ಹೆಚ್ಚಿಸಿಕೊಂಡರೆ ಆಂಟಿ, ಬುಡ್ಡಿ, ಅಜ್ಜಿ ಎಂದು ಕರೆಯುತ್ತಾರೆ. ಪ್ಲಾಸ್ಟಿಕ್​ ಸರ್ಜರಿ ಬಳಿಕ ಮೃತರಾದ ಯುವ ನಟಿಯ ಬಗ್ಗೆ ಸುದ್ದಿ ಓದಿ ತಿಳಿದುಕೊಂಡೆ. ಮಹಿಳೆಯರ ಮೇಲೆ ಅಸಹಜವಾದ ಬ್ಯೂಟಿ ಸ್ಟ್ಯಾಂಡರ್ಡ್​ಗಳನ್ನು ಹೇರಲಾಗುತ್ತೆ. ಯಾವ ರೀತಿ ಕಾಣಬೇಕು ಎಂಬ ಬಗ್ಗೆ ಮಹಿಳೆಯರ ಮೇಲೆ ತೀವ್ರ ಒತ್ತಡ ಇದೆ” ಎಂದು ರಮ್ಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“2018ರಲ್ಲಿ ಕಾಲಿನ ಟ್ಯೂಮರ್​ ರಿಮೂವಲ್​ ಬಳಿಕ ನಾನು ಕೂಡ ದೇಹದ ತೂಕದ ಸಮಸ್ಯೆ ಅನುಭವಿಸಿದೆ. ನಾನು ನನ್ನದೇ ಆದ ಮಾರ್ಗದ ಮೂಲಕ ತೂಕ ಇಳಿಸಿಕೊಂಡೆ. ಮಹಿಳೆ ಹೇಗಿರಬೇಕು ಎಂದು ಜಗತ್ತು ಹೇಳುವುದು ಬೇಡ. ಸಿನಿಮಾ ಇಂಡಸ್ಟ್ರಿ ಬದಲಾಗಬೇಕು. ಸಂಭಾವನೆ ತಾರತಮ್ಯ, ಬ್ಯೂಟಿ ಸ್ಟ್ಯಾಂಡರ್ಡ್​, ಪಾತ್ರಗಳ ತಾರತಮ್ಯದ ವಿರುದ್ಧ ಮಹಿಳೆಯರು ಮತ್ತು ಪುರುಷರು ಒಟ್ಟಾಗಿ ಹೋರಾಡಬೇಕು” ಎಂದು ರಮ್ಯಾ ಬರೆದುಕೊಂಡಿದ್ದಾರೆ.

ಯುವನಟಿ ಚೇತನಾ ರಾಜ್ ಸಾವಿನ ಕುರಿತು ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ಎಂ.ಎಸ್​. ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ವರದಿಗಾಗಿ ಪೊಲೀಸರು ನಿರೀಕ್ಷಿಸುತ್ತಿದ್ದು, ನಿನ್ನೆ ಅವರ ಅಂತ್ಯಕ್ರಿಯೆ ನೆರವೇರಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು