News Karnataka Kannada
Monday, April 29 2024
ಬೆಂಗಳೂರು ನಗರ

ಮಳೆಹಾನಿ ಪ್ರದೇಶಗಳಲ್ಲಿ ಸ್ಥಿತಿಗತಿ ಅರಿಯಲು ಖುದ್ದು ಭೇಟಿ ನೀಡುತ್ತೇನೆ: ಸಿಎಂ

Mandya: Steps will be taken to modernize Maddur branch canal: CM Bommai
Photo Credit :

ಬೆಂಗಳೂರು: ರಾಜಧಾನಿ ಬೆಂಗಳೂರಿನ ಹಲವಾರು ಕಡೆಗಳಲ್ಲಿ 100 ಮಿಲಿ ಮೀಟರ್ ಗಿಂತ ಜಾಸ್ತಿ ಮಳೆ ಸುರಿದಿದೆ. 90 ಮಿಲಿ ಮೀಟರ್ ಮಳೆ ಬಿದ್ದಾಗಲೇ ಬೆಂಗಳೂರಿಗೆ ಆತಂಕವಾಗುತ್ತದೆ. ಅಂತಹುದರಲ್ಲಿ ನಿನ್ನೆ 100 ಮಿಲಿ ಮೀಟರ್ ಗಿಂತ ಹೆಚ್ಚು ಬಿದ್ದಿರುವುದು ಹಲವು ಕಡೆಗಳಲ್ಲಿ ಅವಾಂತರ ಸೃಷ್ಟಿಯಾಗಿರುವುದು ಗಮನಕ್ಕೆ ಬಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿಂದು ಬೆಳಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬೆಂಗಳೂರಿನ ಹಲವು ಭಾಗಗಳಲ್ಲಿ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದೆ. ಈಗಾಗಲೇ ನಿನ್ನೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರು ಮತ್ತು ಇಂಜಿನಿಯರ್ ಗಳ ಬಳಿ ಮಾತನಾಡಿ ಟಾಸ್ಕ್ ಫೋರ್ಸ್, ಹೋಂ ಗಾರ್ಡ್ಸ್, ಎಸ್ ಡಿಆರ್ ಎಫ್ ಗಳನ್ನು ಕಾರ್ಯಪ್ರವೃತ್ತಗೊಳಿಸಿದ್ದೇವೆ ಎಂದರು.

ಅನೇಕ ಕಡೆಗಳಲ್ಲಿ ತಗ್ಗು ಪ್ರದೇಶಗಳಲ್ಲಿ ನಿಂತಿರುವ ನೀರನ್ನು ಹೊರತೆಗೆಯುವ ಕೆಲಸಕ್ಕೆ ಆದೇಶ ನೀಡಿದ್ದು ಇಂದು ಮುಂಜಾನೆಯಿಂದಲೇ ನಡೆಯುತ್ತಿವೆ. ಖುದ್ದು ಬಿಬಿಎಂಪಿ ಆಯುಕ್ತರೇ ಕೆಲಸದ ಮೇಲ್ವಿಚಾರಣೆ ನೋಡುತ್ತಿದ್ದಾರೆ.ಈಗಾಗಲೇ ಬಿಬಿಎಂಪಿಯಿಂದ ಕಂಟ್ರೋಲ್ ರೂಂ ಸ್ಥಾಪನೆ ಮಾಡಲು ಹೇಳಿದ್ದೇವೆ ಎಂದರು.

ರಾತ್ರಿಯಿಡೀ ಮಳೆಗೆ ಬೆಂಗಳೂರು ತತ್ತರ: ರಾಜ್ಯಾದ್ಯಂತ ಮುಂದುವರಿದ ವರ್ಷಧಾರೆ, ಎರಡು ವಿಮಾನಗಳ ಹಾರಾಟ ಬದಲಾವಣೆ ಮುಂದಿನ ಎರಡು ಮೂರು ದಿನ ಮಳೆಯಾಗುವ ನಿರೀಕ್ಷೆಯಿರುವುದರಿಂದ ಮುಂಜಾಗ್ರತೆ ಕ್ರಮ ವಹಿಸಲು ಸೂಚಿಸಿದ್ದೇವೆ. ಇಂದು ಹೊಸಕೆರೆಹಳ್ಳಿ, ಆರ್ ಆರ್ ನಗರ ಹಾಗೂ ಇನ್ನೆರಡು ಮೂರು ಕಡೆಗಳಿಗೆ ಇಂದು ನಾನು ಖುದ್ದು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುತ್ತಿದ್ದೇನೆ. ಸೂಕ್ತ ಪರಿಹಾರ ಘೋಷಣೆ ಮಾಡುತ್ತೇವೆ ಎಂದರು.

ಒಳಚರಂಡಿಯನ್ನು ಸ್ವಚ್ಛಗೊಳಿಸಿ, ಕಾಮಗಾರಿ ಪೂರ್ಣಗೊಳಿಸಿ ಈ ಬಾರಿ ಕೂಡ ಮಳೆಗಾಲ ಆರಂಭಕ್ಕೆ ಬೆಂಗಳೂರಿನಲ್ಲಿ ಸಿದ್ಧತೆ ಮಾಡಿದ್ದೇವೆ. ಬೆಂಗಳೂರಿನ ಕೆಲವೆಡೆ ಕಾವೇರಿ 5ನೇ ಹಂತದ ಕಾಮಗಾರಿ, ಕೆಲವೆಡೆ ಗ್ಯಾಸ್ ಪೈಪ್ ಲೈನ್ ಸಂಪರ್ಕ ಕಾಮಗಾರಿ, ಕೆಲವೆಡೆ ಕೇಬಲ್ ಕೆಲಸಗಳು ನಡೆಯುತ್ತಿರುವುದರಿಂದ ನಿರಂತರವಾಗಿ ನಡೆಯುವುದರಿಂದ ಸಮಸ್ಯೆಯಾಗಿದೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು