News Karnataka Kannada
Sunday, May 05 2024
ಮಂಗಳೂರು

ವಾರ್ಡ್ ಕಮೀಟಿ ರಚನೆಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ

Screenshot 20210806 141404 Drive
Photo Credit :
ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯಲ್ಲಿ ವಾರ್ಡ್ ಕಮಿಟಿಯನ್ನು ರಚಿಸುವ ಸಲುವಾಗಿ ಈಗಾಗಲೇ ವಾರ್ಡ್ ಕಮಿಟಿಯ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಸಾರ್ವಜನಿಕರ ಆಕ್ಷೇಪಣೆ / ಅಭಿಪ್ರಾಯ ಸಲ್ಲಿಸುವಂತೆ ಕೋರಿ ದಿನಾಂಕ: 17-08-2021 ರ ವರೆಗೆ ಕಾಲವಕಾಶ ನೀಡಿ  ಪಾಲಿಕೆಯ ವೆಬ್‍ಸೈಟ್ ಹಾಗೂ ನೋಟೀಸ್ ಬೋರ್ಡ್ ಮೂಲಕ ಪ್ರಚುರಪಡಿಸಿದೆ.
ಈ ನಿಟ್ಟಿನಲ್ಲಿ ಸಾರ್ವಜನಿಕರಿಂದ ಯಾವ ರೀತಿ ಆಕ್ಷೇಪಣೆ ದಾಖಲಿಸಬೇಕು ಎಂಬ ಬಗ್ಗೆ ಮೌಖಿಕವಾಗಿ ಕೋರುತ್ತಿರುವುದರಿಂದ ಆಕ್ಷೇಪಣೆ ಸಲ್ಲಿಸುವ ಅರ್ಜಿ ನಮೂನೆಯನ್ನು ಪಾಲಿಕೆಯ ವೆಬ್‍ಸೈಟ್, ನೋಟೀಸ್ ಬೋರ್ಡ್ ಮೂಲಕ  ಪ್ರಚುರಪಡಿಸಲಾಗಿದೆ. ಆಕ್ಷೇಪಣೆ ಸಲ್ಲಿಸಲು ಬಯಸುವವರು ಸದ್ರಿ ಅರ್ಜಿ ನಮೂನೆಯಲ್ಲಿ ಸಲ್ಲಿಸುವಂತೆ ಕೋರಿದೆ.
ಸದರಿ ಈ ನಮೂನೆಯಲ್ಲಿ ಸಲ್ಲಿಕೆಯಾಗುವ ಆಕ್ಷೇಪಣೆಗಳನ್ನು ಪರಿಗಣಿಸಿ ಈಗಾಗಲೇ ನೇಮಕಗೊಂಡ ವಾರ್ಡ್ ಕಮಿಟಿ ನೋಡಲ್ ಅಧಿಕಾರಿಗಳ ಮೂಲಕ ಪರಿಶೀಲನೆಗೆ ಒಳಪಡಿಸಿ ಸಲ್ಲಿಸುವ ವರದಿಯನ್ನು ವಾರ್ಡ್ ಕಮಿಟಿ ಆಯ್ಕೆ ಪ್ರಕ್ರಿಯೆ ಸಮಿತಿಯು ಕೂಲಂಕುಷವಾಗಿ ಪರಿಶೀಲಿಸಿ ಸಲ್ಲಿಸುವ ಶಿಫಾರಸನ್ನು ಆಯುಕ್ತರ ಅನುಮೋದನೆಯೊಂದಿಗೆ ಅಂತಿಮಗೊಳಿಸಲಾಗುವುದು.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು