News Karnataka Kannada
Saturday, May 04 2024
ಮಂಗಳೂರು

ಲೇಡಿಗೋಶನ್ ಆಸ್ಪತ್ರೆಯಲ್ಲಿ ಮಗು ಅದಲು ಬದಲು !

Inauguration of administrative office of Federation of Bunts Associations at Mulki on April 5
Photo Credit :

ಮಂಗಳೂರು :  ನಗರದ ಲೇಡಿಗೋಶನ್ ಆಸ್ಪತ್ರೆಯಲ್ಲಿ ಮಗು ಅದಲು ಬದಲು ಪ್ರಕರಣ ಸಂಬಂಧ ಹೈದರಾಬಾದ್ ರಿಂದ ಡಿಎನ್ಎ ವರದಿ ಬಂದಿದ್ದು ದೂರುದಾರರೇ ಮಗುವಿನ ತಂದೆ ಎಂದು ಪೋಲಿಸ್ ಮೂಲಗಳು ದೃಢಪಡಿಸಿವೆ .

ಇಲ್ಲಿನ ಸರಕಾರಿ ಲೇಡಿಗೋಶನ್ ಆಸ್ಪತ್ರೆಯಲ್ಲಿ ಮಗು ಅದಲು ಬದಲಾದ ಪ್ರಕರಣಕ್ಕೆ ಸಂಬಂಧ ಮಂಗಳೂರು ಬಂದರು ಪೊಲೀಸರು ನ್ಯಾಯಾಲಯಕ್ಕೆ ಬಿ ವರದಿ ಸಲ್ಲಿಸಿದ್ದಾರೆ.

ಕೇಸ್ ಸಂಬಂಧ ಹೈದರಾಬಾದ್ ಪ್ರಯೋಗಾಲಯದಲ್ಲಿ ನಡೆಸಲಾದ ಡಿಎನ್ ಎ ಪರೀಕ್ಷೆ ವರದಿ ಬಂದಿದ್ದು ತನಿಖಾಧಿಕಾರಿಯ ಕೈಸೇರಿದ್ದು ದೂರುದಾರ ಮುಸ್ತಪಾ ಅವರೇ ಮಗುವಿನ ಅಂದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಳೆದ ವರ್ಷ 2ಸಾವಿರದ ಹತ್ತೊಂಬತ್ತರ ಸೆಪ್ಟೆಂಬರ್ ಇಪ್ಪತ್ತೇಳರಂದು ಮುಸ್ತಫಾ ಎಂಬವರ ಪತ್ನಿ ಲೇಡಿಗೋಶನ್ ಆಸ್ಪತ್ರೆಯಲ್ಲಿ ಗಂಡು ಶಿಶುವಿಗೆ ಜನ್ಮ ನೀಡಿದ್ದರು ಆದರೆ ಆಸ್ಪತ್ರೆ ಸಿಬ್ಬಂದಿ ಎಡವಟ್ಟಿನಿಂದ ದಾಖಲೆಯಲ್ಲಿ ಹೆಣ್ಣುಮಗು ಲಿಂಗ ಕಾಲಂನಲ್ಲಿ ಎಂ ಬದಲು ಎಫ್ ಎಂದು ನಮೂದಾಗಿತ್ತು ಹುಟ್ಟಿದ ಶಿಶುವಿಗೆ ದೇಹದ ತೂಕ ಕೇವಲ 1ಪಾಯಿಂಟ್ 4ಕೆಜಿ ಇತ್ತು ಈ ಶಿಶುವಿಗೆ ಉಸಿರಾಟದ ತೊಂದರೆಯೂ ಇತ್ತು ಆದ್ದರಿಂದ ತಕ್ಷಣ ಮಗುವನ್ನು ನವಜಾತ ಶಿಶುಗಳ ತೀವ್ರ ನಿಗಾಘಟಕ ಎನ್ ಐಸಿಯು ಸ್ಥಳಾಂತರಿಸಲಾಗಿತ್ತು.

ತನ್ನ ಪತ್ನಿ ಮತ್ತು ಗಂಡು ಶಿಶುವಿಗೆ ಜನ್ಮ ನೀಡಿದ್ದು ತಮಗೆ ಜನಿಸಿರುವುದು ಹೆಣ್ಣುಮಗು ವಲ್ಲ ಎಂಬ ವಿಚಾರ ಕೆಲವು ದಿನಗಳ ಬಳಿಕ ಮುಸ್ತಫಾನಿಗೆ ತಿಳಿದುಬಂದಿದೆ.

ಇದಾದ ಬಳಿಕ ಮಗುವನ್ನು ಡಿಸ್ಚಾರ್ಜ್ ಮಾಡಿಸಿ ಕುಂದಾಪುರ ಗೆ ಕರೆದೊಯ್ದು ಅಲ್ಲಿ ಆಸ್ಪತ್ರೆ ಒಂದಕ್ಕೆ ದಾಖಲಿಸಿದ್ದರು. ಅಲ್ಲಿ ತಮಗೆ ನೀಡಿರುವುದು ಹೆಣ್ಣು ಶಿಶುವಲ್ಲ ಗಂಡು ಶಿಶು ಎಂಬುದು ಗೊತ್ತಾಗಿದೆ. ಅಲ್ಲದೆ ಮಗುವಿನ ಆರೋಗ್ಯ ಇನ್ನಷ್ಟು ಹದಗೆಟ್ಟಿದ್ದರಿಂದ ಮರುದಿನವೇ ಮತ್ತೆ ಲೇಡಿಗೋಶನ್ ಆಸ್ಪತ್ರೆಗೆ ದಾಖಲಿಸಿದ್ದರು.

ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮಗುವು ನಲವತ್ತೆಂಟು ದಿನಗಳ ಬಳಿಕ ಉಸಿರೆಳೆದಿತ್ತು. ಬಳಿಕ ಮುಸ್ತಫಾ ಅವರು ಆಸ್ಪತ್ರೆ ಬೇಜವಾಬ್ದಾರಿ ವಿರುದ್ಧ ಉತ್ತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಮಗುವಿನ ಡಿಎನ್ ಎ ಪರೀಕ್ಷೆ ನಡೆಸಲು ನ್ಯಾಯಾಲಯ ಒಪ್ಪಿಗೆ ಸೂಚಿಸಿತ್ತು.

ಮುಸ್ತಫಾ ಅವರ ಪತ್ನಿ ಹಾಗೂ ಮಗುವಿಗೆ ಚಿಕಿತ್ಸೆ ನೀಡಿದ ಮಕ್ಕಳ ತಜ್ಞ ಡಾಕ್ಟರ್ ಗಿರೀಶ್ ಹುದ್ದೆ ತ್ಯಜಿಸಿದ್ದರು. ಗಂಡು ಶಿಶು ಎಂಬುದರ ಬದಲು ಹೆಣ್ಣು ಶಿಶುವೊಂದು ತಪ್ಪಾಗಿ ನಮೂದಿಸಿದ ಇಬ್ಬರು ಕಿರಿಯ ವೈದ್ಯರು ಕೂಡ ಕೆಲಸಕ್ಕೆ ರಾಜಿನಾಮೆ ನೀಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು