News Karnataka Kannada
Monday, April 29 2024
ಮಂಗಳೂರು

ರಸ್ತೆ ಅಗಲೀಕರಣಗೊಳಿಸಿದ ನಂತರ ಕಾಂಕ್ರಟೀಕರಣ ಮಾಡಲು ಮನಪಾ ಆಯುಕ್ತರಿಗೆ ಡಿವೈ‌ಎಫ್‌ಐ ಮನವಿ

New Project
Photo Credit :
ಪಡೀಲ್‌ ರೈಲ್ವೇ ಸೇತುವೆ ಯಿಂದ ಜಲ್ಲಿಗುಡ್ಡೆ ಕ್ರಾಸ್ ವರೆಗಿನ ರಸ್ತೆ ಅಗಲೀಕರಣಗೊಳಿಸಿದ ನಂತರ ಕಾಂಕ್ರಟೀಕರಣ ಮಾಡಲು ಒತ್ತಾಯಿಸಿ ಡಿವೈಎಫ್ಐ ಬಜಾಲ್ ಪಕ್ಕಲಡ್ಕ ಘಟಕದಿಂದ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿಯನ್ನು ಸಲ್ಲಿಸಲಾಯಿತು.
ರಿಗೆ,
ಆಯುಕ್ತರು
ಮಂಗಳೂರು ಮಹಾನಗರ ಪಾಲಿಕೆ
ಲಾಲ್ ಭಾಗ್
ಮಾನ್ಯರೇ,
ವಿಷಯ: ಪಡೀಲ್‌ ರೈಲ್ವೇ ಸೇತುವೆ ಯಿಂದ ಜಲ್ಲಿಗುಡ್ಡೆ ಕ್ರಾಸ್ ವರೆಗಿನ ರಸ್ತೆ ಅಗಲೀಕರಣಗೊಳಿಸಿದ ನಂತರ ಕಾಂಕ್ರಟೀಕರಣ ಮಾಡಲು ಒತ್ತಾಯ.
ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯ ಪಡೀಲ್‌ ಬಜಾಲ್ ಮುಖ್ಯರಸ್ತೆ ರೈಲ್ವೇ ಸೇತುವೆ ಬಳಿಯಿಂದ ಜಲ್ಲಿಗುಡ್ಡೆ ಕ್ರಾಸ್ ವರೆಗೆ ಸುಮಾರು 500 ಮೀಟರ್ ರಸ್ತೆಯನ್ನು ಅಗಲೀಕರಣಗೊಳಿಸದೆ ಕೇವಲ ಇದ್ದಲ್ಲಿಗೆ ಕಾಂಕ್ರೀಟಿಕರಣಗೊಳಿಸುವ ಪಾಲಿಕೆ ಕಾಮಗಾರಿ ಕೆಲಸಕ್ಕೆ ಹಾಗೂ ಕಾಮಗಾರಿ ವೇಳೆ ರಸ್ತೆಯನ್ನು ಸಂಪೂರ್ಣವಾಗಿ ಮುಚ್ಚುವ ತೀರ್ಮಾನಕ್ಕೆ ಡಿವೈಎಫ್ಐ ಬಜಾಲ್ ಘಟಕ ಹಾಗೂ ಸ್ಥಳೀಯ ಇತರೆ ಸಂಘಸಂಸ್ಥೆಗಳು ಪ್ರಬಲ ವಿರೋಧವನ್ನು ವ್ಯಕ್ತಪಡಿಸುತ್ತದೆ. ರಸ್ತೆ ಅಗಲೀಕರಣಗೊಳಿಸಿದ ನಂತರವಷ್ಟೇ ಕಾಂಕ್ರಟೀಕರಣಗೊಳಿಸಬೇಕೆಂದು ಪಾಲಿಕೆಯನ್ನು ಒತ್ತಾಯಿಸುತ್ತದೆ.
ಈಗಾಗಲೇ ಪಡೀಲ್ ನಿಂದ ಹಿಡಿದು ಬಜಾಲ್ ವರೆಗಿನ ಮುಖ್ಯ ರಸ್ತೆಯ ಅಗಲೀಕರಣ, ಕಾಂಕ್ರಟೀಕರಣ ಕೆಲಸ ಬಹುತೇಕ ಪೂರ್ಣವಾಗಿದ್ದು ಕೇವಲ ರೈಲ್ವೇ ಸೇತುವೆ ಬಳಿಯಿಂದ ಜಲ್ಲಿಗುಡ್ಡೆ ಕ್ರಾಸ್ ವರೆಗಿನ ಸುಮಾರು 500 ಮೀಟರ್ ನಷ್ಟು ಜಾಗದಲ್ಲಿ ಅಗಲೀಕರಣಗೊಳ್ಳದೆ ಕಾಮಗಾರಿ ಕೆಲಸ ಕಳೆದ ಹಲವು ವರುಷಗಳಿಂದ ಬಾಕಿ ಬಿದ್ದಿದೆ. ಬಾಕಿ ಎಲ್ಲ ಕಡೆಗಳಲ್ಲೂ ರಸ್ತೆ ಅಗಲೀಕರಣಗೊಳಿಸುವ ಸಂದರ್ಭದಲ್ಲಿ ಬಹುತೇಕ ಜನ ತಮ್ಮ ಸ್ವಂತ ಸ್ಥಳವನ್ನು ಅಭಿವೃದ್ಧಿ ಕಾಮಗಾರಿಗಳಿಗಾಗಿ ಬಿಟ್ಟುಕೊಟ್ಟರೂ ಈಗ ಬಾಕಿ ಇರುವ ಜಾಗದ ಪ್ರದೇಶದಲ್ಲಿ ಅಗಲೀಕರಣ ನಡೆಸಲು ಸ್ಥಳೀಯ ಆಡಳಿತ ಪಕ್ಷದ ಪ್ರಭಾವಿಯೊಬ್ಬರು ಸ್ಥಳ ನೀಡದೇ ಇರೋದರಿಂದ ಈ ಭಾಗದ ಅಭಿವೃದ್ಧಿ ಕೆಲಸ ಈಗಲೂ ಬಾಕಿ ಬಿದ್ದಿದೆ. ಕಳೆದ ಮೂರು ಅವಧಿಯಿಂದ ಆಯ್ಕೆಯಾಗಿ ಬಂದ ಆಡಳಿತ ಪಕ್ಷದ ಜನಪ್ರತಿನಿಧಿಯಾಗಲಿ ಅಥವಾ ಪಾಲಿಕೆ ಅಧಿಕಾರಿಗಳಾಗಲಿ ಈ ಭಾಗದ ಜನರನ್ನು ವಿಶ್ವಾಸ ಪಡೆದು ಅಗಲೀಕರಣ ನಡೆಸುವ ಕೆಲಸಕ್ಕೆ ಮುಂದಾಗದೆ ರಸ್ತೆಯನ್ನು ಇದ್ದಲ್ಲಿಗೆ ಕಾಂಕ್ರಟೀಕರಣಗೊಳಿಸಲು ಹೊರಟಿದೆ.
ಒಂದು ವೇಳೆ ಸದ್ಯ ಇದ್ದಲ್ಲಿಗೆ ಕಾಂಕ್ರಟೀಕರಣಗೊಳಿಸಿದರೆ ರಸ್ತೆ ಮತ್ತಷ್ಟು ಕಿರಿದಾಗಲಿದೆ. ಈಗಾಗಲೇ ಈ ರಸ್ತೆಯಲ್ಲಿ ಸಂಚರಿಸುವ ವೇಳೆ ದಿನಂಪ್ರತಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದ್ದು ವಾಹನ ಸವಾರರು ದಿನನಿತ್ಯ ಕಿರಿಕಿರಿಯನ್ನು ಅನುಭವಿಸುತ್ತಿದ್ದಾರೆ. ಒಂದು ವೇಳೆ ಕಾಂಕ್ರಟೀಕರಣದ ಹೆಸರಲ್ಲಿ ರಸ್ತೆಯನ್ನು ಸಂಪೂರ್ಣ ಮುಚ್ಚಿದರೆ ಈ ಭಾಗದ ಸುತ್ತಮುತ್ತಲಿನ ಜನಸಾಮಾನ್ಯರು ಬಹಳಷ್ಟು ಸಮಸ್ಯೆಗಳನ್ನು ಅನುಭವಿಸಲಿದ್ದಾರೆ. ಜನ ತಮ್ಮ ದೈನಂದಿನ ಕೆಲಸಕಾರ್ಯಗಳಿಗೆ, ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ, ತುರ್ತು ಸಂದರ್ಭದಲ್ಲಿ ರೋಗಿಗಳು ಆಸ್ಪತ್ರೆಗಳಿಗೆ ತೆರಳಲು ಸಂಕಷ್ಟ ಪಡಬೇಕಾದ ಸ್ಥಿತಿ ನಿರ್ಮಾಣವಾಗಲಿದೆ.
ಈ ಹಿನ್ನಲೆಯಲ್ಲಿ ಪಡೀಲು ರೈಲ್ವೇ ಸೇತುವೆ ಬಳಿಯಿಂದ ಜಲ್ಲಿಗುಡ್ಡೆ ಕ್ರಾಸ್ ವರೆಗಿನ ರಸ್ತೆಯನ್ನು ಯಾವುದೇ ಕಾರಣಕ್ಕೂ ಇದ್ದಲ್ಲಿಗೆ ಕಾಂಕ್ರಟೀಕರಣಗೊಳಿಸಬಾರದು ಹಾಗೂ ವಾಹನ ಸಂಚಾರವನ್ನು ಕೂಡ ತಡೆಯದೆ ಮೊದಲು ರಸ್ತೆಯನ್ನು ಅಗಲೀಕರಣಗೊಳಿಸಿ ನಂತರವಷ್ಟೇ ಕಾಂಕ್ರಟೀಕರಣಗೊಳಿಸಬೇಕೆಂದು ಒತ್ತಾಯಿಸುತ್ತೇವೆ‌
ವಂದನೆಗಳೊಂದಿಗೆ
ಇತೀ
ಅಧ್ಯಕ್ಷರು
ನೂರುದ್ದೀನ್
ಕಾರ್ಯದರ್ಶಿ
ಧಿರಾಜ್ ಬಜಾಲ್
ನಿಯೋಗದಲ್ಲಿ ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಡಿವೈಎಫ್ಐ ಮುಖಂಡರಾದ ದೀಪಕ್ ಬಜಾಲ್, ಧಿರಾಜ್ ಬಜಾಲ್, ಜಗದೀಶ್ ಬಜಾಲ್, ವರಪ್ರಸಾದ್, ನಾಗರಾಜ್, ನವೀನ್ ನಾಯಕ್, ಪ್ರವೀಣ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
6528

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು