ಮಂಗಳೂರು : ಇದೇ ಸೆ.8ರ ಬುಧವಾರ ಜಿಲ್ಲೆಯಾದ್ಯಂತ ಎಲ್ಲಾ ಆರೋಗ್ಯ ಸಂಸ್ಥೆ ಮತ್ತು ಉಪಕೆಂದ್ರಗಳಲ್ಲಿ ಕೋವಿಡ್ ಲಸಿಕೆಯ ವಿಶೇಷ ಲಕ್ಷ ಲಸಿಕಾ ಮೇಳ ಆಯೋಜಿಸಲಾಗಿದೆ.
ಈ ಲಸಿಕಾ ಮೇಳದಲ್ಲಿ ಒಂದು ಲಕ್ಷ ಫಲಾನುಭವಿಗಳಿಗೆ ಲಸಿಕೆ ನೀಡುವ ಗುರಿ ಹೊಂದಿದ್ದು, ಹೆಚ್ಚಿನ ಸಂಖ್ಯೆಯ ಫಲಾನುಭವಿಗಳು ಇದರ ಸದುಪಯೋಗ ಪಡೆಯಲು ಕೋರಲಾಗಿದೆ. ಈ ಶಿಬಿರಗಳಲ್ಲಿ ಪ್ರಥಮ ಡೋಸ್ ಮತ್ತು ಎರಡನೆಯ ಡೋಸ್ ಲಸಿಕೆಯ ಲಭ್ಯವಿದೆ.
18 ವರ್ಷ ಮೇಲ್ಪಟ್ಟ ಎಲ್ಲಾ ಲಸಿಕಾ ಫಲಾನುಭವಿಗಳು ಹಾಗೂ ಗರ್ಣಿಣಿಯರಿಗೂ ಕೂಡಾ ಲಸಿಕೆಯನ್ನು ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.